ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಅರಕಲಗೂಡು ತಾಲೂಕಿನ ದಿ. ವೆಂಕಟೇಗೌಡ ದೇವಮ್ಮ ದಂಪತಿಗಳ ಪುತ್ರ ರವಿ ಅವರಿಗೆ ಮಾಕವಳ್ಳಿಯ ಲಾವಣ್ಯ ಎಂಬ ಯುವತಿಯ ಜತೆಗೆ ೧೧ ವರ್ಷಗಳ ಹಿಂದೆ ಮದುವೆ ಮಾಡಲಾಗಿತ್ತು ಮತ್ತು ೧೦ ವರ್ಷದ ನಂತರ ದಂಪತಿಗೆ ಒಂದು ಮಗುವಾಗಿತ್ತು. ಆದರೆ ಫೆಬ್ರವರಿ ೯ರಂದು ಲಾವಣ್ಯ ಹೊನವಳ್ಳಿಯ ಪ್ರದೀಪ್ ಎಂಬ ಯುವಕನೊಂದಿಗೆ ರವಿಯನ್ನು ತೊರೆದು ೯ ತಿಂಗಳ ಮಗುವಿನೊಂದಿಗೆ ಓಡಿ ಹೋಗಿದ್ದಾರೆ.
ಘಟನೆ ಸಂಬಂಧಿಸಿದಂತೆ ರವಿ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದು, ಪ್ರದೀಪನು ತನ್ನ ಮೊಬೈಲ್ ಸ್ಟೇಟಸ್‌ನಲ್ಲಿ ರವಿ ಹೆಂಡತಿ ಬಗ್ಗೆ ಹಾಕಿಕೊಂಡಿದ್ದ ಹಿನ್ನೆಲೆಯಲ್ಲಿ ರವಿ ಹಾಗೂ ಪ್ರದೀಪ್ ಜೊತೆ ದೂರವಾಣಿಯಲ್ಲಿ ಜಗಳ ಮಾಡಿಕೊಂಡಿರುವ ಆಡಿಯೋ ದೊರೆತಿದೆ ಮತ್ತು ೩ ದಿನಗಳ ಹಿಂದೆ ಮಾಕವಳ್ಳಿಯ ಹೆಂಡತಿ ಮನೆ ಮುಂದೆ ರವಿ ನೋವು ತೋಡಿಕೊಂಡಿದ್ದ ಹಾಗೂ ಹೆಂಡತಿ ಸಿಗಲಿಲ್ಲವೆಂದು ಮನನೊಂದು ಸಮೀಪದಲ್ಲಿ ಹರಿಯುವ ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಣ್ಣೀರು ಹಾಕುತ್ತಾ ಈ ಆತ್ಮಹತ್ಯೆಗೆ ಕಾರಣಕರ್ತರಾದ ಲಾವಣ್ಯ ಹಾಗೂ ಪ್ರದೀಪ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.ಫೊಟೋ: ರವಿ