ಅನೈತಿಕ ಸಂಬಂಧ ಮುಚ್ಚಿಕೊಳ್ಳಲುಸುಳ್ಳು ವಂಚನೆಯ ಕಥೆ ಕಟ್ಟಿದ ಪತಿ

KannadaprabhaNewsNetwork |  
Published : May 14, 2026, 03:30 AM IST
ಪೊಟೋ: 14ಎಸ್‌ಎಂಜಿಕೆಪಿ01ನೀಟ್ ಯುಜಿ  ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಕೇಂದ್ರ ಸರ್ಕಾರದ ವೈಫಲ್ಯ ಖಂಡಿಸಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಸದಸ್ಯರು ಸಂಸದ ಬಿ.ವೈ.ರಾಘವೇಂದ್ರ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೋಲಿಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಘಟನೆ ನಡೆಯಿತು. | Kannada Prabha

ಸಾರಾಂಶ

ಆಂಧ್ರಪ್ರದೇಶದ ಉದ್ಯಮಿಗೆ ರೀಲ್ಸ್ ಸ್ಟಾರ್ ವಂಚನೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ತನ್ನ ಅನೈತಿಕ ಸಂಬಂಧ ಮುಚ್ಚಿಕೊಳ್ಳಲು ಪತಿಯೇ ವಂಚನೆ ಕೃತ್ಯದ ಸುಳ್ಳು ಕತೆ ಕಟ್ಟಿದ್ದಾರೆ ಎಂದು ಉದ್ಯಮಿ ಪತ್ನಿ ಗಂಭೀರ ಆರೋಪ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಆಂಧ್ರಪ್ರದೇಶದ ಉದ್ಯಮಿಗೆ ರೀಲ್ಸ್ ಸ್ಟಾರ್ ವಂಚನೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ತನ್ನ ಅನೈತಿಕ ಸಂಬಂಧ ಮುಚ್ಚಿಕೊಳ್ಳಲು ಪತಿಯೇ ವಂಚನೆ ಕೃತ್ಯದ ಸುಳ್ಳು ಕತೆ ಕಟ್ಟಿದ್ದಾರೆ ಎಂದು ಉದ್ಯಮಿ ಪತ್ನಿ ಗಂಭೀರ ಆರೋಪ ಮಾಡಿದ್ದಾರೆ. ತನ್ನ ಪತಿಯಿಂದ ಆರೋಪಿತ ಯುವತಿ ಹಣ ಕೇಳಿಲ್ಲ. ಬ್ಲ್ಯಾಕ್‌ಮೇಲ್ ಕಥೆ ಸಂಪೂರ್ಣ ಸುಳ್ಳಾಗಿದ್ದು, ತನ್ನ ಗಂಡನೇ ಹುಸಿ ಕಥೆ ಸೃಷ್ಟಿಸಿದ್ದಾನೆ’ ಎಂದು ಆರೋಪಿಸಿ ಜಯನಗರ ಪೊಲೀಸರಿಗೆ ಉದ್ಯಮಿ ಪತ್ನಿ ಹರ್ಷಿತಾ ಪತ್ರ ಬರೆದಿದ್ದಾರೆ.

ತನ್ನ ಲೈಂಗಿಕ ಸಂಬಂಧ ಮುಚ್ಚಿಹಾಕಲು ಯುವತಿಯನ್ನು ಬ್ಲ್ಯಾಕ್‌ಮೇಲರ್ ಎಂದು ಕಾರ್ತಿಕ್ ಬಿಂಬಿಸಿದ್ದಾರೆ. ತನಗೆ ಆ ಯುವತಿ ಕಳಿಸಿದ್ದ ಕೆಲವು ಸಾಕ್ಷ್ಯಗಳನ್ನು ನೋಡಿದಾಗ ತನಗೆ ಮಾನಸಿಕ ಆಘಾತವಾಯಿತು. ಹಲವು ಯುವತಿಯರ ಜತೆ ಕಾರ್ತಿಕ್ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ದೂರಿದ್ದಾರೆ. ಎಚ್‌.ಕೆ.ಫಾರ್ಮಾ ಕಾಸ್ಮೆಟಿಕ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಹರ್ಷಿತಾ ನಿರ್ದೇಶಕರಾಗಿದ್ದಾರೆ. ಕಾರ್ತಿಕ್ ಯಾವುದೇ ಬ್ಯುಸಿನೆಸ್ ಮ್ಯಾನ್ ಅಲ್ಲ. ಆತ ಕೇವಲ ಪತ್ನಿ ಹರ್ಷಿತಾ ಒಡೆತನದ ಕಾಸ್ಮೆಟಿಕ್ ಕ್ಲಿನಿಕ್‌ನ ಮಾರ್ಕೆಟಿಂಗ್ ನೋಡಿಕೊಳ್ಳುತ್ತಿದ್ದ. ಕಳೆದ ವರ್ಷ ಆತನಿಗೆ ಕನ್ನಡದ ರೀಲ್ಸ್ ಸ್ಟಾರ್ ಪರಿಚಯವಾಗಿತ್ತು. ಬಳಿಕ ಮದುವೆ ಆಗುವುದಾಗಿ ನಂಬಿಸಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡು ವಂಚಿಸಿದ್ದ ಎಂದು ಆರೋಪಿಸಲಾಗಿದೆ.

ಆದರೆ ತನಗೆ ಬ್ಲ್ಯಾಕ್‌ಮೇಲ್ ಮಾಡಿ 1.2 ಕೋಟಿ ರು.ಹಣ ವಸೂಲಿ ಮಾಡಿದ್ದಾಳೆ ಎಂದು ಆರೋಪಿಸಿ ರೀಲ್ಸ್ ಸ್ಟಾರ್‌ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅದರನ್ವಯ ರೀಲ್ಸ್ ಸ್ಟಾರ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಈಗ ಬ್ಲ್ಯಾಕ್‌ಮೇಲ್ ಪ್ರಕರಣಕ್ಕೆ ಉದ್ಯಮಿ ಪತ್ನಿ ಟ್ವಿಸ್ಟ್ ನೀಡಿದ್ದು, ತಮ್ಮ ಪತಿ ಮೇಲೆಯೇ ಪೊಲೀಸರಿಗೆ ಆಕೆ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

163 ವೈದ್ಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಹಿಟ್ ಆ್ಯಂಡ್‌ ರನ್‌ಗೆ ಕಾರ್ಮಿಕ, ಕಾರುಡಿಕ್ಕಿಯಾಗಿ ಬೈಕ್‌ ಚಾಲಕ ದುರ್ಮರಣ