ಅನೈತಿಕ ಸಂಬಂಧ ಅನುಮಾನ, ಪತ್ನಿಯನ್ನು ಒದ್ದು ಕೊಂದ ಪತಿ

KannadaprabhaNewsNetwork |  
Published : Apr 25, 2026, 03:30 AM IST
ಅಅ | Kannada Prabha

ಸಾರಾಂಶ

ಅನೈತಿಕ ಸಂಬಂಧ ಸಂಶಯದಿಂದ ಪತ್ನಿಯ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ ಘಟನೆ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ಗುರುವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಸಾವಳಗಿ

ಅನೈತಿಕ ಸಂಬಂಧ ಸಂಶಯದಿಂದ ಪತ್ನಿಯ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ ಘಟನೆ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ಗುರುವಾರ ನಡೆದಿದೆ.

ಸುಮನ ಸಿದರಾಯ ತೋಟದ (33) ಹತ್ಯೆಯಾದ ಮಹಿಳೆ. ಪತಿ ಮಲ್ಲಪ್ಪ ಸಿದರಾಯ ತೋಟದ ತೋಟದ ಸೇರಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದಾರೆ.

ಆಗಿದ್ದೇನು?

ಮೂಲತಃ ಜಮಖಂಡಿ ತಾಲೂಕಿನ ನಾಗನೂರು ಗ್ರಾಮದ ನಿವಾಸಿಗಳಾಗಿದ ಇವರು, 10 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿ ತೊದಲಬಾಗಿ ಗ್ರಾಮದಲ್ಲಿ ನೆಲೆಸಿದ್ದರು. ದಂಪತಿಗೆ 9 ವರ್ಷದ ಬಾಲಕಿ, 7 ವರ್ಷದ ಬಾಲಕಿ ಇದ್ದಾಳೆ.

ಗುರುವಾರ ರಾತ್ರಿ ಸುಮನ ಪಕ್ಕದ ಪರಿಚಯಸ್ಥಳಾದ ಜಕ್ಕವ್ವ ಪಾರ್ಥನಳ್ಳಿ ಮನೆಗೆ ಮಲಗಲು ಹೋಗಿದ್ದರಿಂದ ಸಂಶಯಗೊಂಡ ಪತಿ ಮಲ್ಲಪ್ಪ ಆ ಮನೆಗೆ ಹೋಗಿದ್ದು, ಅಲ್ಲಿ ಪ್ರವೀಣ ಎಂಬ ವ್ಯಕ್ತಿ ಇದ್ದು, ಆತನೊಂದಿಗೆ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನಿಸಿ ಪತ್ನಿಯನ್ನು ಪ್ರಶ್ನಿಸಿದ್ದಾನೆ. ಈ ವೇಳೆ ವಾಗ್ವಾದ ಉಂಟಾಗಿ ಆಕ್ರೋಶಗೊಂಡ ಪತಿ ಮಲ್ಲಪ್ಪ ಸುಮನ್‌ ಳನ್ನು ಕಸಬರಿಗೆಯಿಂದ ಥಳಿಸಿ, ಎದೆ ಹಾಗೂ ಹೊಟ್ಟೆ ಭಾಗಕ್ಕೆ ಒದ್ದು ಹಲ್ಲೆ ನಡೆಸಿದ್ದು, ಸುಮನ್‌ ಅಲ್ಲಿಯೇ ಕುಸಿದುಬಿದ್ದು ಮೃತಪಟ್ಟಿದ್ದಾಳೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಮೃತಪಟ್ಟಿರುವುದಾಗಿ ಘೋಷಿದ್ದಾರೆ. ಸಾವಳಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತಿ ಸೇರಿದಂತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ತನಿಕೆ ನಡೆಯುತ್ತಿದೆ ಎಂದು ಎಸ್.ಪಿ.ಸಿದ್ದಾರ್ಥ ಗೋಯಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂವ೯ಭಾವಿ ಸಭೆ
ವಿವಿಧೆಡೆ ಕಳ್ಳತನದ ಪ್ರಕರಣಗಳ ಆರೋಪಿತರ ಬಂಧನ