ಪತ್ನಿ ಕೊಂದು ಆತ್ಮಹತ್ಯೆ ಮಾಡಿಕೊಂಡ ಪತಿ

KannadaprabhaNewsNetwork |  
Published : Aug 09, 2025, 12:01 AM IST
ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ಈ ಪ್ರಕರಣದ ವಿವರಣೆ ನೀಡಿದ ಎಸ್ಪಿ ಯಶೋದಾ ವಂಟಗೋಡಿ, ಸಿದ್ದಪ್ಪ ಡಬ್ಬಣ್ಣನವರ ಮದ್ಯ ಕುಡಿತದ ಚಟ ಹೊಂದಿದ್ದು, ಮನೆಯಲ್ಲಿ ಹೆಂಡತಿ ಜತೆಗೆ ವಿನಾಕಾರಣ ಜಗಳ ಮಾಡುತ್ತಿದ್ದ.

ಹಾವೇರಿ: ಅಕ್ರಮ ಸಂಬಂಧದ ಸಂಶಯ ವ್ಯಕ್ತಪಡಿಸಿ ಪತಿಯೇ ಪತ್ನಿಯನ್ನು ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ನಜೀಕಲಕಮಾಪುರ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ. ನಜೀಕಲಕಮಾಪುರ ಗ್ರಾಮದ ಲಲಿತವ್ವ ಸಿದ್ದಪ್ಪ ಡಬ್ಬಣ್ಣನವರ (55) ಕೊಲೆಗೀಡಾದ ಮಹಿಳೆ. ಸಿದ್ದಪ್ಪ ನೀಲಪ್ಪ ಡಬ್ಬಣ್ಣನವರ (60) ಎಂಬಾತನೆ ಪತ್ನಿಯನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಪ್ರಕರಣದ ವಿವರಣೆ ನೀಡಿದ ಎಸ್ಪಿ ಯಶೋದಾ ವಂಟಗೋಡಿ, ಸಿದ್ದಪ್ಪ ಡಬ್ಬಣ್ಣನವರ ಮದ್ಯ ಕುಡಿತದ ಚಟ ಹೊಂದಿದ್ದು, ಮನೆಯಲ್ಲಿ ಹೆಂಡತಿ ಜತೆಗೆ ವಿನಾಕಾರಣ ಜಗಳ ಮಾಡುತ್ತಿದ್ದ. ಅಲ್ಲದೇ ಪತ್ನಿ ಲಲಿತವ್ವ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಸಂಶಯಿಸುತ್ತಿದ್ದ. ಗುರುವಾರ ರಾತ್ರಿ ಜಗಳ ವಿಕೋಪಕ್ಕೆ ತಿರುಗಿ ಪತ್ನಿ ಲಲಿತವ್ವ ಮೇಲೆ ಕಟ್ಟಿಗೆಯಿಂದ ತಲೆಗೆ ಹೊಡೆದು ಸಿದ್ದಪ್ಪ ಕೊಲೆಗೈದಿದ್ದಾನೆ. ಬಳಿಕ ತಾನೂ ಸಮೀಪದಲ್ಲಿರುವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಮೃತ ದಂಪತಿಯ ಪುತ್ರ ಓಂಕಾರೇಶ್ವರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದರು.

ನಾಳೆ ವರದಾ ಬೇಡ್ತಿ ನದಿ ಜೋಡಣೆ ಕುರಿತು ಮಹತ್ವದ ಸಭೆ

ಹಾವೇರಿ: ರಾಜ್ಯದ ಮಹತ್ವದ ನದಿಗಳಾದ ವರದಾ ಬೇಡ್ತಿ ನದಿ ಜೋಡಣೆ ಕಾಮಗಾರಿಗೆ ಉಭಯ ಸರ್ಕಾರವನ್ನು ಒತ್ತಾಯಿಸಲು ಆ. 10ರಂದು ಬೆಳಗ್ಗೆ 11ಗಂಟೆಗೆ ಗುತ್ತಲ ರಸ್ತೆಯ ಹುಕ್ಕೇರಿಮಠ ಆವರಣದಲ್ಲಿ ಮಹತ್ವದ ಸಭೆಯನ್ನು ಏರ್ಪಡಿಸಲಾಗಿದೆ.ಜಿಲ್ಲೆಯ ವಿಧಾನಸಭೆ, ವಿಧಾನಪರಿಷತ್, ಲೋಕಸಭೆ ಹಾಲಿ ಹಾಗೂ ಮಾಜಿ ಸದಸ್ಯರು, ರಾಜ್ಯ ಸರ್ಕಾರದ ನಿಗಮ ಮಂಡಳಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ನಗರಸಭೆ, ಪುರಸಭೆ, ಪಟ್ಟಣ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ತಾಲೂಕು, ಜಿಲ್ಲಾ ಮಟ್ಟದ ಎಲ್ಲ ಹಂತಗಳ, ಸಹಕಾರ ಇತರ ಕ್ಷೇತ್ರಗಳ ಜನ ಪ್ರತಿನಿಧಿಗಳು, ರೈತ ಸಂಘಟನೆಗಳು, ವಿವಿಧ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳ ಪ್ರಮುಖರು, ಕಾರ್ಯಕರ್ತರು ಮತ್ತು ಸಾರ್ವಜನಿಕರನ್ನು ಈ ಸಭೆಗೆ ಆಹ್ವಾನಿಸಲಾಗಿದೆ. ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ