ಚಿಕ್ಕಮಗಳೂರು: ಕೌಟುಂಬಿಕ ಕಲಹದಲ್ಲಿ ಒಂದು ಜೀವ ಬಲಿ ಪಡೆದ ಆಘಾತಕಾರಿ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ಲೂರು ಸಮೀಪದ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.
ನೇತ್ರಾ ಅವರು ಐದು ತಿಂಗಳ ಹಿಂದಷ್ಟೇ ಸಕಲೇಶಪುರದ ನಿವಾಸಿ ನವೀನ್ ಎಂಬುವರೊಂದಿಗೆ ವಿವಾಹವಾಗಿದ್ದರು. ಆದರೆ, ವಿವಾಹವಾದ ಕೆಲವೇ ದಿನಗಳಲ್ಲಿ ದಂಪತಿಗಳ ನಡುವೆ ಕೌಟುಂಬಿಕ ಕಲಹ ಶುರುವಾಗಿತ್ತು. ಕಲಹ ತೀವ್ರ ಸ್ವರೂಪ ಪಡೆದ ಕಾರಣ, ನೇತ್ರಾ ಸುಮಾರು ಮೂರು ತಿಂಗಳ ಹಿಂದೆ ಪತಿ ಮನೆಯನ್ನು ಬಿಟ್ಟು, ಹೊಸಳ್ಳಿ ಗ್ರಾಮದಲ್ಲಿರುವ ತಮ್ಮ ತವರು ಮನೆಗೆ ಮರಳಿದ್ದರು.
ಪತ್ನಿ ತವರು ಸೇರಿದ್ದರಿಂದ ಕೋಪಗೊಂಡಿದ್ದ ಪತಿ ನವೀನ್, ಹೇಗಾದರೂ ಮಾಡಿ ಅವಳನ್ನು ಹಿಂತಿರುಗಿ ಕರೆತುವ ಅಥವಾ ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಭಾನುವಾರ ರಾತ್ರಿ ಹೊಸಳ್ಳಿ ಗ್ರಾಮದಲ್ಲಿರುವ ನೇತ್ರಾಳ ಮನೆಗೆ ಬಂದಿದ್ದಾನೆ.ರಾತ್ರಿ ಊಟ ಮುಗಿಸಿ ಮನೆಯ ಹೊರಗೆ ನಿಂತಿದ್ದ ನೇತ್ರಾಳನ್ನು ನವೀನ್ ಏಕಾಏಕಿ ತಡೆದು ಚಾಕುವಿನಿಂದ ಇರಿದು ತಕ್ಷಣವೇ ಸ್ಥಳದಿಂದ ಎಸ್ಕೆಪ್ ಆಗಿದ್ದಾನೆ. ಗಂಭೀರವಾಗಿ ಗಾಯಗೊಂಡ ನೇತ್ರಾ ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದಾರೆ.