ರಾಮನಗರ: ಗ್ರಾಮ ಪಂಚಾಯಿತಿಯಿಂದ ಪುರಸಭೆಯಾಗಿ ಅಸ್ತಿತ್ವಕ್ಕೆ ಬಂದ 10 ವರ್ಷಗಳಲ್ಲಿಯೇ ಬಿಡದಿಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸುವ ಸಿದ್ಧತೆಗಳು ಭರದಿಂದ ಸಾಗಿದೆ.
ಈ ಹಿಂದೆ ಬಿಡದಿ ಹೋಬಳಿ ಕೇಂದ್ರವಾಗಿದ್ದು, ಗ್ರಾಮ ಪಂಚಾಯಿತಿ ಆಡಳಿತ ನಡೆಸುತ್ತಿತ್ತು. 2011 ರ ಜನಗಣತಿ ಪ್ರಕಾರ 29,825 ಜನಸಂಖ್ಯೆಯ ಆಧಾರದ ಮೇಲೆ ರಾಜ್ಯ ಸರ್ಕಾರವು ತನ್ನ ಅಧಿಸೂಚನೆಯಲ್ಲಿ (ನಂ. UDD/29/MLR, 2015 ದಿನಾಂಕ: 05.08.2015) ಬಿಡದಿ ಗ್ರಾಮ ಪಂಚಾಯಿತಿಯನ್ನು ಚಿಕ್ಕ ನಗರ ಪ್ರದೇಶಕ್ಕೆ ಅಂದರೆ ಟೌನ್ ಮುನ್ಸಿಪಲ್ ಕೌನ್ಸಿಲ್ ಆಗಿ ಮೇಲ್ದರ್ಜೆಗೇರಿಸಿತು.
ಬಿಡದಿ ಪುರಸಭೆಯಾಗಿ 10 ವರ್ಷ ಪೂರೈಸುತ್ತಿದ್ದಂತೆ ಅದನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಲು ಸಿದ್ಧತೆಗಳು ನಡೆದಿವೆ. ಇದಕ್ಕಾಗಿ ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳು ಹಾಗೂ ಬನ್ನಿಕುಪ್ಪೆ (ಬಿ) ಗ್ರಾಮ ಪಂಚಾಯಿತಿಯ ವಾಜರಹಳ್ಳಿ ಮತ್ತು ಜಡೇನಹಳ್ಳಿಯನ್ನು ಸೇರಿಸಿಕೊಳ್ಳಲು ಉದ್ದೇಶಿಸಲಾಗಿದೆ.ಮಂಚನಾಯಕನಹಳ್ಳಿ ಮತ್ತು ಬನ್ನಿಕುಪ್ಪೆ (ಬಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ಒಳಗೊಂಡಂತೆ ನಗರಸಭೆಯಾಗಿ ಮೇಲ್ದರ್ಜೆಗೇರುವುದರಿಂದ ಜನಸಂಖ್ಯೆಯು 50 ಸಾವಿರ ದಾಟುವ ಸಾಧ್ಯತೆ ಇದೆ. 20 ರಿಂದ 40 ಸಾವಿರ ಜನಸಂಖ್ಯೆವರೆಗೆ ಮಾತ್ರ 23 ವಾರ್ಡ್ ಗಳಿರುತ್ತವೆ. 40 ರಿಂದ 50 ಸಾವಿರ ಜನಸಂಖ್ಯೆಗೆ 27 ವಾರ್ಡ್ ಗಳು ಹಾಗೂ 50 ಸಾವಿರದಿಂದ 1 ಲಕ್ಷ ಜನಸಂಖ್ಯೆಗೆ 31 ವಾರ್ಡುಗಳು ಇರಬೇಕು. ಹೀಗಾಗಿ ಬಿಡದಿ ನಗರಸಭೆಯಾಗಿ ಮೇಲ್ದರ್ಜೆಗೇರಿದಲ್ಲಿ 31 ರಿಂದ 33 ವಾರ್ಡ್ ಗಳು ಅಸ್ತಿತ್ವಕ್ಕೆ ಬರಲಿವೆ.
ಪುರಸಭೆ ಸೇರಿದ್ದ ಗ್ರಾಮಗಳು :
ಆನಂತರ ಜಿಲ್ಲಾಡಳಿತ 2011ರ ಜನಗಣತಿಯನ್ನು ಆಧರಿಸಿ ಬಿಡದಿ ಪುರಸಭೆಗೆ 23 ವಾರ್ಡ್ ಗಳನ್ನಾಗಿ ಕ್ಷೇತ್ರ ವಿಂಗಡಿಸಿ, ಆಯಾ ವಾರ್ಡ್ ಗಳ ಗಡಿಯನ್ನು ಸಹ ಗುರುತಿಸಿ ಅಧಿಸೂಚನೆ ಹೊರಡಿಸಿತ್ತು. ಪುರಸಭೆಯಾಗಿ ಅಸ್ತಿತ್ವಕ್ಕೆ ಬಂದ ಆರು ತಿಂಗಳೊಳಗೆ ಚುನಾಯಿತ ಸದಸ್ಯರ ಸಮಿತಿ ಕೂಡ ರಚನೆಯಾಯಿತು. ಈವರೆಗೆ ಎರಡು ಬಾರಿ ಮಾತ್ರ ಪುರಸಭೆ ಚುನಾವಣೆ ನಡೆದಿದೆ.
ಸರ್ಕಾರದ ಮೇಲೆ ಜನಪ್ರತಿನಿಧಿಗಳ ಒತ್ತಡ :
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಬಿಡದಿ ಟೌನ್ ಶಿಪ್ ಯೋಜನೆ ಜಾರಿಯಾಗುತ್ತಿದ್ದು, ಇದು ಆ ಭಾಗದ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಲಿದೆ. ಹೀಗಾಗಿ ಬಿಡದಿಯನ್ನು ಪುರಸಭೆಯಿಂದ ನಗರಸಭೆಯನ್ನಾಗಿ ಮಾಡುವಂತೆ ಬಾಕ್ಸ್
ಗ್ರಾಪಂ ಚುನಾವಣೆ ಅನುಮಾನ:
ಕೋಟ್ .............
ರಾಜಧಾನಿ ಬೆಂಗಳೂರಿಗೆ ಸನಿಹದಲ್ಲಿರುವ ಬಿಡದಿ ಪಟ್ಟಣ ಶರವೇಗದಲ್ಲಿ ಬೆಳೆಯುತ್ತಿದೆ. ಅಭಿವೃದ್ಧಿ ದೃಷ್ಟಿಯಿಂದ ಬಿಡದಿಯನ್ನು ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೇರುವುದು ಅತ್ಯಗತ್ಯವಿದೆ. ಇದರಿಂದ ಪಟ್ಟಣದ ಸಮಗ್ರ ಅಭಿವೃದ್ಧಿ ಮತ್ತು ಹೆಚ್ಚಿನ ಅನುದಾನವೂ ಹರಿದು ಬರಲಿದೆ.- ಸಿ.ಉಮೇಶ್, ವಿಪಕ್ಷ ನಾಯಕರು, ಬಿಡದಿ ಪುರಸಭೆ
13ಕೆಆರ್ ಎಂಎನ್ 7,8.ಜೆಪಿಜಿ7.ಬಿಡದಿ ಪುರಸಭೆ ಕಚೇರಿ
8.ಸಿ.ಉಮೇಶ್ , ವಿಪಕ್ಷ ನಾಯಕರು, ಬಿಡದಿ ಪುರಸಭೆ.