ಬಂಡಿಗಣಿಯಲ್ಲಿಂದು ಸರ್ವಧರ್ಮ ಮಹಾಸಂಗಮ: ಸಿಎಂ ಭಾಗಿ

KannadaprabhaNewsNetwork |  
Published : Oct 13, 2025, 02:03 AM IST
ಬಂಡಿಗಣಿಯ ಶ್ರೀಬಸವಗೋಪಾಲ ನೀಲಮಾಣಿಕ ಮಠದ ಆವರಣದಲ್ಲಿ ಭವ್ಯವಾಗಿ ಸಿದ್ಧಗೊಂಡಿರುವ ಸಮಾವೇಶದ ವೇದಿಕೆ. ಸಿದ್ಧತಾ ಕಾರ್ಯವನ್ನು ಭಾನುವಾರ ಸಚಿವ ಆರ್.ಬಿ.ತಿಮ್ಮಾಪುರ, ಎಸ್ಪಿ ಸಿದ್ಧಾರ್ಥ ಗೋಯಲ್, ಸಿಪಿಐ ಸಂಜೀವ ಬಳಿಗಾರ, ಮುಖಂಡ ಸಿದ್ದು ಕೊಣ್ಣೂರ ವೀಕ್ಷಿಸಿದರು. | Kannada Prabha

ಸಾರಾಂಶ

ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿಯ ಶ್ರೀಬಸವಗೋಪಾಲ ನೀಲಮಾಣಿಕಮಠದ ದಾಸೋಹರತ್ನ, ಚಕ್ರವರ್ತಿ ಅನ್ನದಾನೇಶ್ವರರ ಅಧ್ಯಕ್ಷತೆಯಲ್ಲಿ ವಿಶ್ವಶಾಂತಿಗಾಗಿ ಸರ್ವಧರ್ಮ ಮಹಾಸಂಗಮ-೨೦೨೫ ಶ್ರೀಮಠದ ಆವರಣದ ಭವ್ಯ ವೇದಿಕೆಯಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ತಾಲೂಕಿನ ಬಂಡಿಗಣಿಯ ಶ್ರೀಬಸವಗೋಪಾಲ ನೀಲಮಾಣಿಕಮಠದ ದಾಸೋಹರತ್ನ, ಚಕ್ರವರ್ತಿ ಶ್ರೀದಾನೇಶ್ವರರ ಅಧ್ಯಕ್ಷತೆಯಲ್ಲಿ ವಿಶ್ವಶಾಂತಿಗಾಗಿ ಸರ್ವಧರ್ಮ ಮಹಾಸಂಗಮ-೨೦೨೫ ಶ್ರೀಮಠದ ಆವರಣದ ಭವ್ಯ ವೇದಿಕೆಯಲ್ಲಿ ನಡೆಯಲಿದೆ.

ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಿಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಆರ್.ಬಿ. ತಿಮ್ಮಾಪೂರ, ಸಚಿವರಾದ ಎಚ್.ಕೆ. ಪಾಟೀಲ, ಎಂ.ಬಿ. ಪಾಟೀಲ, ಸತೀಶ ಜಾರಕಿಹೊಳಿ, ಜಮೀರ್‌ ಅಹ್ಮದಖಾನ್, ಶಿವರಾಜ ತಂಗಡಗಿ, ರಮೇಶಕುಮಾರ, ಲಕ್ಷ್ಮಣ ಸವದಿ ಪಾಲ್ಗೊಳ್ಳಲಿದ್ದಾರೆ. ಕಾಗಿನೆಲೆ ಕನಕಗುರು ಪೀಠದ ಶ್ರೀನಿರಂಜನಾನಂದ ಸ್ವಾಮೀಜಿ, ಚಿತ್ರದುರ್ಗ ಮಾಚಿದೇವ ಪೀಠದ ಬಸವ ಮಡಿವಾಳದೇವ ಶ್ರೀ, ಹುಲಜಂತಿಯ ಮಾಳಿಂಗರಾಯ ಮಹಾರಾಜರು, ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯ ಪೀಠದ ಶಾಂತಭೀಷ್ಮಚೌಡಯ್ಯ ಶ್ರೀ, ಕೃಷ್ಣ ಯಾದವ ಪೀಠದ ಬಸವ ಯಾದವಾನಂದ ಶ್ರೀ, ಹೊಳೆ ಬಬಲಾದಿಯ ಸಿದ್ಧರಾಮೇಶ್ವರ ಶ್ರೀ, ಇಂಚಗೇರಿಯ ಸಮರ್ಥ ರೇವಣಸಿದ್ದೇಶ್ವರ ಶ್ರೀ, ತಂಗಡಗಿಯ ಹಡಪದ ಅಪ್ಪಣ್ಣ ಶ್ರೀ, ಫಂಡರಪುರದ ಗಹಿನಿನಾಥ ಶ್ರೀ, ಛಲವಾದಿ ಪೀಠದ ಬಸವನಾಗಿದೇವ ಶ್ರೀ, ಬೆಳಗಾವಿಯ ಡಾ.ಡೆರಿಕ್ ಫರ್ನಾಂಡಿಸ್, ಬಂಜಾರ ಪೀಠದ ಸರ್ದಾ ಸೇವಾಲಾಲ ಶ್ರೀ, ಹರಿಹರದ ವಚನಾನಂದ ಶ್ರೀ, ಕೋಡಹಳ್ಳಿಯ ಆದಿಜಾಂಬವ ಪೀಠದ ಷಡಕ್ಷರ ಮುನಿಗಳು, ಮಧುರೆಯ ಭಗೀರಥ ಪೀಠದ ಪುರುಷೋತ್ತಮಾನಂದ ಶ್ರೀ, ಹರಿಹರ ವಾಲ್ಮಿಕಿಪೀಠದ ಪ್ರಸನ್ನಾನಂದ ಶ್ರೀ, ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಶ್ರೀ, ಹಳೆಹುಬ್ಬಳ್ಳಿ ವೀರಭೀಕ್ಷಾವರ್ತಿ ಮಠದ ಶಿವಶಂಕರ ಶ್ರೀ, ರಾಜಯೋಗಿಣಿ ಬಿ.ಕೆ. ಅಭಿಕಾಜಿ, ವಿಜಯಪುರದ ಮೌಲ್ವಿ ಹಾಸೀಂಪೀರ ಗದ್ಯಾಳ, ತೆಲಂಗಾಣದ ಸೂಫಿಸಂತ್‌ ಸೈಯ್ಯದ್‌ ಬಾಷಾಸಾಹೇಬ, ಮುಂಡಗೋಡದ ಬೌದ್ಧಗುರು ಗೆಶೆ ಜಂಪಾ ಲೋಬ್ಸಾಂಗ್ ವಹಿಸಲಿದ್ದಾರೆ.

ಸಂಸದ ಪಿ.ಸಿ. ಗದ್ದಿಗೌಡರ, ಶಾಸಕರಾದ ಈರಣ್ಣ ಕಡಾಡಿ, ಹಣಮಂತ ನಿರಾಣಿ, ಸುನೀಲಗೌಡ ಪಾಟೀಲ, ನಾರಾಯಣಸಾ ಬಾಂಡಗೆ, ಪಿ.ಎಚ್. ಪೂಜಾರ, ಎಚ್.ವೈ. ಮೇಟಿ, ಎಸ್.ಜಿ. ನಂಜಯ್ಯನಮಠ, ಜೆ.ಟಿ. ಪಾಟೀಲ, ವಿಜಯಾನಂದ ಕಾಶಪ್ಪನವರ, ವಿಶ್ವಾಸ ವೈದ್ಯ, ಧುರ್ಯೋಧನ ಐಹೋಲಿ, ಮಹೇಶ ತಮ್ಮಣ್ಣವರ, ಭೀಮಸೇನ ಚಿಮ್ಮನಕಟ್ಟಿ, ಪ್ರಕಾಶ ಹುಕ್ಕೇರಿ, ಡಾ.ಉಮಾಶ್ರೀ, ಆನಂದ ನ್ಯಾಮಗೌಡ, ಸಿದ್ದು ಕೊಣ್ಣೂರ, ಪಿ.ರಾಜೀವ, ಡಿಸಿ ಎಂ ಸಂಗಪ್ಪ, ಶಶಿಧರ ಕುರೇರ, ಸಿದ್ಧಾರ್ಥ ಗೋಯಲ್ ಸೇರಿದಂತೆ ಪ್ರಮುಖರು ಅತಿಥಿಗಳಾಗಿದ್ದು, ಶ್ರೀಮಠದ ಆವರಣದಲ್ಲಿ ನಿರ್ಮಿಸಿದ ಹೆಲಿಪ್ಯಾಡ್‌ಗೆ ಸಿಎಂ ಸಿದ್ದರಾಮಯ್ಯ ಬಂದಿಳಿಯಲಿದ್ದಾರೆ. ೨ಲಕ್ಷಕ್ಕೂ ಅಧಿಕ ಭಕ್ತರು ಸೇರುವ ನಿರೀಕ್ಷೆಯಿದ್ದು, ಬಗೆಬಗೆಯ ಖಾದ್ಯಗಳನ್ನು ಸಿದ್ದಗೊಳಿಸಲಾಗುತ್ತಿದೆ.

PREV

Recommended Stories

ಆರೆಸ್ಸೆಸ್‌ ಬೆಳವಣಿಗೆ ಕೆಲ ಶಕ್ತಿ, ಸಂಘಟನೆಗಳಿಗೆ ಸಹಿಸಲಾಗ್ತಿಲ್ಲ: ಅರುಣಕುಮಾರ
ಬುದ್ಧ, ಬಸವ, ಅಂಬೇಡ್ಕರ್‌ ತತ್ವ ಅನುಷ್ಠಾನಗೊಳಿಸಲು ಸಿದ್ದರಾಮಯ್ಯ ಪ್ರಯತ್ನ