ಆರೆಸ್ಸೆಸ್‌ ಬೆಳವಣಿಗೆ ಕೆಲ ಶಕ್ತಿ, ಸಂಘಟನೆಗಳಿಗೆ ಸಹಿಸಲಾಗ್ತಿಲ್ಲ: ಅರುಣಕುಮಾರ

KannadaprabhaNewsNetwork |  
Published : Oct 13, 2025, 02:03 AM IST
ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷ ತುಂಬಿದ ಹಿನ್ನೆಲೆ ಅಥಣಿಯ ಸಿದ್ಧೇಶ್ವರ ಕಾಲೇಜಿನ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂಘ ಶತಾಬ್ಧಿ ವರ್ಷದ ಮೊದಲನೇ ವಿಜಯದಶಮಿ ಕಾರ್ಯಕ್ರಮ ಉದ್ದೇಶಿಸಿ  ಉತ್ತರ ಮತ್ತು ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ ಅರುಣಕುಮಾರ ಮಾತನಾಡಿದರು. | Kannada Prabha

ಸಾರಾಂಶ

ಸ್ಪಷ್ಟ ಧ್ಯೇಯ ಮತ್ತು ಸಿದ್ಧಾಂತಕ್ಕೆ ಒಳಪಟ್ಟ ಸಂಘಟನೆ ಆರ್‌ಎಸ್‌ಎಸ್ ಪ್ರಸ್ತುತ ದೇಶದಲ್ಲಿ 73,000ಕ್ಕೂ ಅಧಿಕ ಶಾಖೆಗಳನ್ನು ಹೊಂದಿದೆ. 35 ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಂಘ ದಿನೇ ದಿನೆ ಬೆಳೆಯುತ್ತಿರುವುದನ್ನು ಸಹಿಸದ ಕೆಲವು ಶಕ್ತಿ, ಸಂಘಟನೆಗಳು ಆರ್‌ಎಸ್ಎಸ್ ಬಗ್ಗೆ ನಿರಂತರವಾಗಿ ದೂಷಣೆ ಮಾಡುತ್ತಿವೆ. ಅದಕ್ಕೆ ತಲೆ ಕೆಡಿಸಿಕೊಳ್ಳದೆ ಆನೆಯಂತೆ ನಮ್ಮ ಸಂಘಟನೆ ಮುಂದೆ ಸಾಗುತ್ತಿದೆ ಎಂದು ಉತ್ತರ ಮತ್ತು ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ ಅರುಣಕುಮಾರ ಹೇಳಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಪಟ್ಟಣದ ಸಿದ್ಧೇಶ್ವರ ಕಾಲೇಜಿನ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂಘ ಶತಾಬ್ಧಿ ವರ್ಷದ ಮೊದಲನೇ ವಿಜಯದಶಮಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ನೂರು ವರ್ಷಗಳಲ್ಲಿ ಸಂಘ ಅನೇಕ ಏಳು ಬೀಳು ಕಂಡಿದೆ. ನಮ್ಮ ಹಿರಿಯ ಸ್ವಯಂ ಸೇವಕರು ಸಂಘಟನೆ ಮಾಡಿದ್ದರ ಫಲವಾಗಿ ಸಂಘ ಉತ್ತುಂಗಕ್ಕೆ ಏರಿದೆ. 1925ರ ವಿಜಯದಶಮಿ ದಿನ ಸಂಘವನ್ನು ಡಾ.ಕೇಶವ ಬಲಿರಾಂ ಹೆಡಗೇವಾರ್ ಪ್ರಾರಂಭಿಸಿದರು. ಅಂದಿನಿಂದ ಹಿಂದೂ ಸಮಾಜದ ಒಗ್ಗೂಡುವಿಕೆಗೆ ನಾಂದಿಯಾಯಿತು. ನಂತರ ದೇಶಕ್ಕೆ ಗಂಡಾಂತರ ಬಂದಾಗ ಪರಿಹಾರ ಒದಗಿಸುವ ಕೆಲಸವನ್ನು ಸ್ವಯಂ ಸೇವಕರು ಮಾಡಿದರು.

ರಾಷ್ಟ್ರ ನಿರ್ಮಾಣ ಕೆಲಸದಲ್ಲಿ ಸಂಘ ಸಕ್ರಿಯವಾಗಿರುವುದನ್ನು ಕಂಡು ಈಗಿನ ಕೇಂದ್ರ ಸರ್ಕಾರ ಭಾರತ ಮಾತೆಗೆ ವಂದಿಸುತ್ತಿರುವ ಸ್ವಯಂಸೇವಕರು ಇರುವ ಅಂಚೆ ಚೀಟಿ ಹಾಗೂ ನೂರು ರೂಪಾಯಿ ನಾಣ್ಯವನ್ನು ಬಿಡುಗಡೆ ಮಾಡಿ ಸಂಘಕ್ಕೆ ಗೌರವ ನೀಡಿದೆ ಎಂದರು.

ತಾಲೂಕು ಕಾರ್ಯವಾಹ ಪ್ರೇಮ ಕಣವಿ ಹಾಗೂ ಕೃಷ್ಣ ದೇವರಾಯ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಸಿದ್ದನಗೌಡ ಪಾಟೀಲ ಮತ್ತು ಹಿರಿಯ ಸ್ವಯಂ ಸೇವಕರು ಉಪಸ್ಥಿತರಿದ್ದರು.

PREV

Recommended Stories

ಬಂಡಿಗಣಿಯಲ್ಲಿಂದು ಸರ್ವಧರ್ಮ ಮಹಾಸಂಗಮ: ಸಿಎಂ ಭಾಗಿ
ಬುದ್ಧ, ಬಸವ, ಅಂಬೇಡ್ಕರ್‌ ತತ್ವ ಅನುಷ್ಠಾನಗೊಳಿಸಲು ಸಿದ್ದರಾಮಯ್ಯ ಪ್ರಯತ್ನ