ಬುದ್ಧ, ಬಸವ, ಅಂಬೇಡ್ಕರ್‌ ತತ್ವ ಅನುಷ್ಠಾನಗೊಳಿಸಲು ಸಿದ್ದರಾಮಯ್ಯ ಪ್ರಯತ್ನ

KannadaprabhaNewsNetwork |  
Published : Oct 13, 2025, 02:03 AM IST
ಪೋಟೋ ಅ.12ಎಂಡಿಎಲ್ 4. ಸಚಿವ ಆರ್.ಬಿ.ತಿಮ್ಮಾಪೂರ | Kannada Prabha

ಸಾರಾಂಶ

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬುದ್ದ, ಬಸವ ಹಾಗೂ ಡಾ.ಅಂಬೇಡ್ಕರ್‌ ಅವರ ನಿಜವಾದ ಅಭಿಮಾನಿಗಳಾಗಿದ್ದು, ಮನುಕುಲದ ಉದ್ಧಾರ ಹಾಗೂ ಸರ್ವ ಜನಾಂಗದ ಹಿತ ಬಯಸಿರುವ ಅವರೆಲ್ಲರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಸಿಕೊಳ್ಳುವ ಮೂಲಕ ಪ್ರಾಮಾಣಿಕ ಪ್ರಯತ್ನ

 ಮುಧೋಳ :  ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬುದ್ದ, ಬಸವ ಹಾಗೂ ಡಾ.ಅಂಬೇಡ್ಕರ್‌ ಅವರ ನಿಜವಾದ ಅಭಿಮಾನಿಗಳಾಗಿದ್ದು, ಮನುಕುಲದ ಉದ್ಧಾರ ಹಾಗೂ ಸರ್ವ ಜನಾಂಗದ ಹಿತ ಬಯಸಿರುವ ಅವರೆಲ್ಲರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಸಿಕೊಳ್ಳುವ ಮೂಲಕ ಅವರ ಸಂದೇಶಗಳನ್ನು ರಾಜ್ಯದ ಅಡಳಿತದಲ್ಲಿ ತರುವ ಪ್ರಾಮಾಣಿಕ ಪ್ರಯತ್ನ ಸಿದ್ದರಾಮಯ್ಯನವರದ್ದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ನಗರದ ಸಚಿವರ ಗೃಹ ಕಚೇರಿಯಲ್ಲಿ ಬಸವ ತತ್ವ ಅಭಿಮಾನಿಗಳಿಂದ ಭಾನುವಾರ ಸನ್ಮಾನ ಸ್ವಿಕರಿಸಿ ಮಾತನಾಡಿದ ಅವರು, ತನ್ಮೂಲಕ ಸಾಮಾಜಿಕ ನ್ಯಾಯ ನೀಡಿ ಜನಪರ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕೆಂಬ ಸಿದ್ದರಾಮಯ್ಯನವರ ಆಶಯವಾಗಿದೆ. ಅಸಮಾನತೆ, ಅಸ್ಪೃಶ್ಯತೆ, ಹೋಗಿ ಪುರುಷರಂತೆ ಮಹಿಳೆಯರು ಎಲ್ಲ ಹಂತಗಳಲ್ಲಿ ಸಶಕ್ತರಾಗಬೇಕು, ತನ್ಮೂಲಕ ಬಡವರ ಉದ್ಧಾರವಾಗಿ ಸ್ವಾಭಿಮಾನಿ ಬದುಕು ಸಾಧಿಸಬೇಕೆಂಬ ಸಿಎಂ ಸಿದ್ದರಾಮಯ್ಯನವರ ಪರಿಕಲ್ಪನೆಯಾಗಿದೆ. ಅದಕ್ಕೆ ನಾನು ಸೇರಿ ಎಲ್ಲ ಸಚಿವ ಸಂಪುಟದ ಸಚಿವರು ಶಾಸಕರು ಬೆಂಬಲವಾಗಿ ನಿಲ್ಲುತ್ತೇವೆಂದು ತಿಮ್ಮಾಪೂರ ಅಭಿಮಾನದಿಂದ ಹೇಳಿದರು.

ಪ್ರಮುಖರಾದ ಹಣಮಂತ ಬಾಲಪ್ಪ ತಿಮ್ಮಾಪೂರ, ಅಶೋಕ ಕಿವಡಿ, ಸದುಗೌಡ ಪಾಟೀಲ, ಪರಮಾನಂದ ಕುಟರಟ್ಟಿ, ಚಿನ್ನು ಅಂಬಿ, ಚಿದಾನಂದ ಪಾಟೀಲ, ಶ್ರೀನಿವಾಸ ನವಲೆ, ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ