ಆಧ್ಯಾತ್ಮ ಸಾಧನೆಗಳಿಂದ ಹೃದಯ ಪರಿವರ್ತನೆ ಸಾಧ್ಯ

KannadaprabhaNewsNetwork |  
Published : Oct 13, 2025, 02:03 AM IST
12ಐಎನ್‌ಡಿ1, ಇಂಡಿ: ತಾಲೂಕಿನ ಆಳೂರ ಗ್ರಾಮದಲ್ಲಿ ಸಿದ್ಧಾರೂಢರ ನೂತನ ಮಂದಿರದ ಕಳಸಾರೋಹಣ ಕಾರ್ಯಕ್ರಮವನ್ನು ಡಾ. ಶಿವಕುಮಾರ ಮಹಾಸ್ವಾಮಿಗಳು, ಡಾ.ಶಿವಾನಂದ ಭಾರತಿ ಶ್ರೀಗಳು, ಸಿದ್ಧಾರೂಢ ಶ್ರೀಗಳು ಉದ್ಘಾಟಿಸಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ಸಾಧುಸಂಗ, ವೇದಾಂತ, ಆಧ್ಯಾತ್ಮ ಸಾಧನೆಗಳಿಂದ ಹೃದಯ ಪರಿವರ್ತನೆ ಸಾಧ್ಯ. ಮನೆ, ಮನಸ್ಸು, ಹೃದಯ, ದೇವ ಮಂದಿರವಾಗಬೇಕು. ಆಧುನಿಕ ಯುಗದಲ್ಲೂ ಮಹಾತ್ಮರ ಉಪದೇಶ ಪ್ರಸ್ತುತವಾಗಿದ್ದು, ಕರ್ತವ್ಯ, ಧರ್ಮ ಪಾಲನೆಗೆ ಒತ್ತು ನೀಡಬೇಕು ಎಂದು ಬೀದರ ಚಿದಂಬರಾಶ್ರಮದ ಡಾ.ಶಿವಕುಮಾರ ಮಹಾಸ್ವಾಮಿಗಳು ಹೇಳಿದರು.ತಾಲೂಕಿನ ಆಳೂರ ಗ್ರಾಮದಲ್ಲಿ ಸಂಜೆ ನಡೆದ ಸಿದ್ಧಾರೂಢರ ನೂತನ ಮಂದಿರದ ಕಳಸಾರೋಹಣ ಹಾಗೂ ಲಕ್ಷ್ಮೀಬಾಯಿ ತಾಯಿಯವರ, ಪಾರ್ವತೆಮ್ಮನವರ ಮೂರ್ತಿ ಪ್ರಾಣಪ್ರತಿಷ್ಠಾಪನೆ 55ನೇ ಆಧ್ಯಾತ್ಮಿಕ ಪ್ರವಚನ ಮಹೋತ್ಸವದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಕನ್ನಡಪ್ರಭ ವಾರ್ತೆ ಇಂಡಿ

ಸಾಧುಸಂಗ, ವೇದಾಂತ, ಆಧ್ಯಾತ್ಮ ಸಾಧನೆಗಳಿಂದ ಹೃದಯ ಪರಿವರ್ತನೆ ಸಾಧ್ಯ. ಮನೆ, ಮನಸ್ಸು, ಹೃದಯ, ದೇವ ಮಂದಿರವಾಗಬೇಕು. ಆಧುನಿಕ ಯುಗದಲ್ಲೂ ಮಹಾತ್ಮರ ಉಪದೇಶ ಪ್ರಸ್ತುತವಾಗಿದ್ದು, ಕರ್ತವ್ಯ, ಧರ್ಮ ಪಾಲನೆಗೆ ಒತ್ತು ನೀಡಬೇಕು ಎಂದು ಬೀದರ ಚಿದಂಬರಾಶ್ರಮದ ಡಾ.ಶಿವಕುಮಾರ ಮಹಾಸ್ವಾಮಿಗಳು ಹೇಳಿದರು.ತಾಲೂಕಿನ ಆಳೂರ ಗ್ರಾಮದಲ್ಲಿ ಸಂಜೆ ನಡೆದ ಸಿದ್ಧಾರೂಢರ ನೂತನ ಮಂದಿರದ ಕಳಸಾರೋಹಣ ಹಾಗೂ ಲಕ್ಷ್ಮೀಬಾಯಿ ತಾಯಿಯವರ, ಪಾರ್ವತೆಮ್ಮನವರ ಮೂರ್ತಿ ಪ್ರಾಣಪ್ರತಿಷ್ಠಾಪನೆ 55ನೇ ಆಧ್ಯಾತ್ಮಿಕ ಪ್ರವಚನ ಮಹೋತ್ಸವದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪ್ರತಿಯೊಬ್ಬರೂ ತಮ್ಮ ಕರ್ತವ್ಯ, ಧರ್ಮ ಪಾಲಿಸಬೇಕು. ಧರ್ಮ ಆಧ್ಯಾತ್ಮದ ಹಾದಿ ತೋರಬೇಕು. ಮಹಾತ್ಮರ ಅನುಗ್ರಹದಿಂದ ಜ್ಞಾನ ಪ್ರಾಪ್ತಿಯಾಗುತ್ತದೆ. ಮಹಾತ್ಮರ ವಾಣಿಯಂತೆ ಭಕ್ತಿ ಮತ್ತು ಪುಣ್ಯವನ್ನು ಜೀವನದುದ್ದಕ್ಕೂ ಮಾಡಿದರೆ ಪರೀಕ್ಷೆ ಗೆಲ್ಲಲು ಸಾಧ್ಯ. ಆಳೂರ ಸಿದ್ಧಾರೂಢರ ಮಠದ ಶಂಕರಾನಂದ ಶ್ರೀಗಳದ್ದು ಗೌಡಕಿ, ಶ್ರೀಮಂತ ಮನೆತನದವರು. ಸಿದ್ಧಾರೂಢರಿಗೆ ಮನಸೋತು ಸಿದ್ಧಾರೂಢರ ಕೃಪೆಗೆ ಪಾತ್ರರಾಗಿದ್ದಾರೆ. ಸಿದ್ಧಾರೂಡರು ಅವರಿಗೆ ಇನ್ನಷ್ಟು ಆಯಸ್ಸು ನೀಡಲಿ ಎಂದು ಆಶಿಸಿದರು.ಇಂಚಲ ಮಠದ ಪೀಠಾಧ್ಯಕ್ಷ ಸದ್ಗುರು ಡಾ.ಶಿವಾನಂದ ಭಾರತಿ ಸ್ವಾಮಿಗಳು ಆಶೀರ್ವಚನ ನೀಡಿ, ಪರಮಾತ್ಮ ಮತ್ತು ನಮ್ಮ ಸಂಬಂಧದ ಸಾಕ್ಷಾತ್ಕಾರವೇ ಜ್ಞಾನ. ಪರಮಾತ್ಮನಿಗೂ ನಮಗೂ ಒಂದು ಅದ್ಭುತವಾದ ಸಂಬಂಧವಿದೆ. ಅದನ್ನು ಅರಿಯಬೇಕು. ವಿವೇಕ, ವೈರಾಗ್ಯ ಮೊದಲಾದವುಗಳ ಮೂಲಕ ಸಾಗಿ, ಜ್ಞಾನ ಎಂಬ ಬೆಳಕು ಪಡೆದು, ಬದುಕಿನ ಸಾರ್ಥಕತೆ ಕಂಡುಕೊಳ್ಳಬೇಕಿದೆ. ಭೂಮಿಯ ಮೇಲೆ ಒಳ್ಳೆಯದನ್ನು ಮಾಡಲು ಬಂದಿದ್ದೇವೆ. ಮನಸ್ಸು ಪರಿವರ್ತನೆ ಮಾಡಿಕೊಂಡು ಭೂಮಿಯಲ್ಲೇ ಸ್ವರ್ಗ ಸೃಷ್ಟಿಸಬೇಕು. ಆಧ್ಯಾತ್ಮದಿಂದ ಸ್ವರ್ಗ ಸೃಷ್ಟಿಸುವ ಸಾಮರ್ಥ್ಯ ಮಹಾತ್ಮರಲ್ಲಿದೆ ಎಂದು ಹೇಳಿದರು.

ಹುಬ್ಬಳ್ಳಿ-ವಿಜಯಪುರದ ಷಣ್ಮುಖಾರೂಢ ಮಠದ ಅಭಿನವ ಸಿದ್ಧಾರೂಢ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರಲ್ಲಿರುವ ಆತ್ಮಚೈತನ್ಯವು ಇಡೀ ಬ್ರಹ್ಮಾಂಡವನ್ನು ವ್ಯಾಪಿಸಿದೆ. ಕಣ್ಣಿಗೆ ಕಾಣುವುದೆಲ್ಲ ಸತ್ಯವಲ್ಲ. ಅದು ಸುಳ್ಳಾಗಿರಬಹುದು, ಈ ಮಿಥ್ಯೆಯನ್ನು ಅರಿತು ಆತ್ಮಚೈತನ್ಯದೆಡೆ ಹೊರಳುವುದೇ ಸತ್ಯದ ಹಾದಿ. ಸಿದ್ಧಾರೂಢರಂಥ ಮಹಾತ್ಮರ ಮಾರ್ಗದರ್ಶನ ಅಗತ್ಯ. ಆತ್ಮಚೈತನ್ಯವೇ ಪರಬ್ರಹ್ಮವಾಗಿದ್ದು, ಆ ಸತ್ಯ ಕಾಣುವ ಗುರಿ ಹೊಂದಬೇಕು. ಆಗ ಬದುಕು ಆನಂದಮಯವಾಗುತ್ತದೆ. ಯಾವುದನ್ನು ಅರಿತರೆ ಎಲ್ಲವನ್ನೂ ಅರಿತಂತಾಗುವುದೋ, ಆ ಸತ್ಯದ ಕಡೆ ನಮ್ಮ ಹಾದಿ ಇರಬೇಕು ಎಂದರು.

ವಿಜಯಪುರದ ಜ್ಞಾನಯೋಗಾಶ್ರಮದ ಬಸವಲಿಂಗ ಮಹಾಸ್ವಾಮೀಜಿ, ಕಲಬುಗಿಯ ಲಕ್ಷ್ಮೀದೇವಿ ತಾಯಿಯವರು, ಮುಚಳಂಬ ನಾಗಭೂಶಣ ಮಠದ ಪ್ರಷಣಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.ವೇದಿಕೆಯಲ್ಲಿ ಬಂಥನಾಳದ ವೃಷಬಲಿಂಗ ಮಹಾಶಿವಯೋಗಿಗಳು, ಗೋಳಸಾರದ ಅಭಿನವ ಪುಂಡಲಿಂಗ ಮಹಾಸ್ವಾಮಿಗಳು, ಪಾನ ಮಂಗಳೂರಿನ ಶಿವಾನಂದ ಶಿವಾಚಾರ್ಯರು, ಬೀದರ ಶಶಿಕಲಾ ತಾಯಿಯವರು, ಆಳೂರ ಮಠದ ಶಂಕರಾನಂದ ಮಹಾಸ್ವಾಮಿಗಳು, ಶಿವೂರ ಗಂಗಾಧರ ಸ್ವಾಮಿಗಳು, ಸೋಲಾಪುರದ ಶಿವಪುತ್ರ ಮಹಾಸ್ವಾಮಿಗಳು, ಸೈದಾಪೂರದ ವಿದ್ಯಾದೇವಿ ತಾಯಿಯವರು, ಗದಗದ ಪರಿಪೂರ್ಣ ಆನಂದ ಭಾರತಿ ಶ್ರೀಗಳು ಸೇರಿದಂತೆ ಅನೇಕರು ಇದ್ದರು.

ಈ ವೇಳೆ ಬಸುಗೌಡ ಪಾಟೀಲ, ಗುರುಪಾದ ವಾಡಿ, ಪಾಂಡುರಂಗ ಕುಲಕರ್ಣಿ, ಹೋನ್ನಪ್ಪಗೌಡ ಪಾಟೀಲ, ಸಂತೋಷ ಸದಲಾಪೂರ, ಕಾಂತು ಬಬಲಾದ, ರಮೇಶ ಗುಡೇವಾಡಿ, ಸತೀಶ ಅವಜಿ, ಅಣ್ಣಪ್ಪ ವಾಡಿ, ರಾಜು ವಾಲಿಕಾರ, ಬಸವರಾಜ ವಾಲಿಕಾರ, ರಾಜಶೇಖರ ನಾಟೀಕಾರ, ಸುರೇಶ ನಾಟೀಕಾರ, ಮುತ್ತು ಬೇನೂರ, ಭೀಮು ನಾವಿ, ಶ್ರೀಶೈಲ ಅರ್ಜುಣಗಿ, ಚಂದು ದವಲಿ, ರಾಜಕುಮಾರ ನಾಟೀಕಾರ ಮೊದಲಾದವರು ಕಾರ್ಯಕ್ರಮದಲ್ಲಿ ಇದ್ದರು.

PREV

Recommended Stories

ಬಂಡಿಗಣಿಯಲ್ಲಿಂದು ಸರ್ವಧರ್ಮ ಮಹಾಸಂಗಮ: ಸಿಎಂ ಭಾಗಿ
ಆರೆಸ್ಸೆಸ್‌ ಬೆಳವಣಿಗೆ ಕೆಲ ಶಕ್ತಿ, ಸಂಘಟನೆಗಳಿಗೆ ಸಹಿಸಲಾಗ್ತಿಲ್ಲ: ಅರುಣಕುಮಾರ