ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವಿದ್ಯಾಗಿರಿಯ ಅಥಣಿ ಕಲ್ಯಾಣ ಮಂಟಪದಿಂದ ಸಂಜೆ 4ಕ್ಕೆ ಪಥಸಂಚಲನ ಆರಂಭಗೊಂಡಿತು. ಭಾರೀ ಸಂಖ್ಯೆಯಲ್ಲಿ ಬಾಲಕರು ಗಣವೇಷಧಾರಿಗಳಾಗಿ ದಂಡ ಹಿಡಿದು ಹೆಜ್ಜೆ ಹಾಕಿ ಗಮನ ಸೆಳೆದರು. ಘೋಷ ವಾದನಕ್ಕೆ ತಕ್ಕಂತೆ ಶಿಸ್ತುಬದ್ಧ ಹೆಜ್ಜೆ ನೋಡುಗರ ಕಣ್ಮನ ಸೆಳೆಯಿತು.
ವಿದ್ಯಾಗಿರಿ ಕಾಲೇಜು ವೃತ್ತದಿಂದ ನೇತಾಜಿ ಹಾಸ್ಟೇಲ್ ರಸ್ತೆಯಲ್ಲಿ ಸಾಗಿ ಹಲವು ಒಳರಸ್ತೆಗಳಲ್ಲಿ ಪಥಸಂಚಲನ ಸಾಗಿತು. ನಂತರ 22ನೇ ಕ್ರಾಸ್ ಮುಖಾಂತರ ವಿದ್ಯಾಗಿರಿ ಕಾಲೇಜು ವೃತ್ತಕ್ಕೆ ಮರಳಿ. ಗೌರಿಶಂಕರ ಮಂಗಲ ಕಾರ್ಯಾಲಯ ಆವರಣದಲ್ಲಿ ಸಂಪನ್ನಗೊಂಡಿತು. ನಂತರ ಬೌದ್ಧಿಕ ಜರುಗಿತು.ಫಥಸಂಚಲನ ಸಾಗುವ ಮಾರ್ಗದುದ್ಧಕ್ಕೂ ಮಹಿಳೆಯರು ಚಿತ್ತಾಕರ್ಷ ರಂಗೋಲಿ ಬಿಡಿ ಪಥಸಂಚಲನಕ್ಕೆ ಸ್ವಾಗತಿಸಿದರು. ಭಗ್ವಾಧ್ವಜ ಸಹಿತ ಗಣವೇಷಧಾರಿಗಳು ಸಾಗಿ ಬಂದಾಗ ಪುಷ್ಪವೃಷ್ಟಿ ಮೂಲಕ ಸ್ವಾಗತಿಸಲಾಯಿತು. ಸಂಘದ ಶತಮಾನೋತ್ಸವ ಪ್ರಯುಕ್ತ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಮಕ್ಕಳು ಒನಕೆ ಓಬ್ಬವ್ವ, ನೇತಾಜಿ ಸುಭಾಶ್ಚಂದ್ರ ಬೋಸ್, ಛತ್ರಪತಿ ಶಿವಾಜಿ ಮಹಾರಾಜ, ಕಿತ್ತೂರ ಚೆನ್ನಮ್ಮ, ಸೈನಿಕರ ವೇಷಭೂಷಣದಲ್ಲಿ ಮಿಂಚಿದರು. ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.