ನಾಪೋಕ್ಲು ಶ್ರೀ ಪೊನ್ನು ಮುತ್ತಪ್ಪ ದೇವಾಲಯದಲ್ಲಿ ಹುತ್ತರಿ ವೆಳ್ಳಾಟ ಸಂಪನ್ನ

KannadaprabhaNewsNetwork |  
Published : Dec 19, 2024, 12:32 AM IST
ನಾಪೋಕ್ಲು ಶ್ರೀ ಪೊನ್ನು ಮುತ್ತಪ್ಪ ದೇವಾಲಯದಲ್ಲಿ ಮುತ್ತಪ್ಪ ದೇವರ ಹುತ್ತರಿ ವೆಳ್ಳಾ ಟ ಸಾಂಪ್ರದಾಯಿಕವಾಗಿ ಶ್ರದ್ಧಾ ಭಕ್ತಿ ಹಾಗೂ ಜ್ರಂಭಣೆಯಿಂದ ಜರಗಿತು | Kannada Prabha

ಸಾರಾಂಶ

ಶ್ರೀ ಪೊನ್ನು ಮುತ್ತಪ್ಪ ದೇವಾಲಯದಲ್ಲಿ ಮುತ್ತಪ್ಪ ದೇವರ ಹುತ್ತರಿ ವೆಳ್ಳಾಟ ಸಾಂಪ್ರದಾಯಿಕವಾಗಿ ಶ್ರದ್ಧಾ ಭಕ್ತಿ ಹಾಗೂ ವಿಜೃಂಭಣೆಯಿಂದ ಸಂಪನ್ನಗೊಂಡಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಸ್ಥಳೀಯ ಶ್ರೀ ಪೊನ್ನು ಮುತ್ತಪ್ಪ ದೇವಾಲಯದಲ್ಲಿ ಮುತ್ತಪ್ಪ ದೇವರ ಹುತ್ತರಿ ವೆಳ್ಳಾ ಟ ಸಾಂಪ್ರದಾಯಿಕವಾಗಿ ಶ್ರದ್ಧಾ ಭಕ್ತಿ ಹಾಗೂ ವಿಜೃಂಭಣೆಯಿಂದ ಸಂಪನ್ನಗೊಂಡಿತು.

ಪ್ರತಿ ವರ್ಷವೂ ನಡೆಸಿಕೊಂಡು ಬರುತ್ತಿರುವ ಹುತ್ತರಿ ವೆಳ್ಳಾಟ ಪ್ರಯುಕ್ತ ಭಾನುವಾರ ಸಂಜೆ 3ಗಂಟೆಗೆ ಕೇರಳದ ಪ್ರಖ್ಯಾತ ಮಡೆಯನ್ ಅವರಿಂದ ನೃತ್ಯದ ಮೂಲಕ ದೇವರನ್ನು ಮಲೆ ಇಳಿಸಲಾಯಿತು. ಅನಂತರ 6ಗಂಟೆಗೆ ಶ್ರೀ ಪೊನ್ನು ಮುತ್ತಪ್ಪ ದೇವರ ವೆಳ್ಳಾ ಟ ನಡೆಯಿತು. ಬಳಿಕ 7.30 ಗಂಟೆಗೆ ಗುಳಿಗ, ಕುಟ್ಟಿಚಾತ ದೇವರ ವೆಲ್ಲಾಟ 9 ಗಂಟೆಗೆ ವಿವಿಧ ವಿಧಿ ವಿಧಾನಗಳೊಂದಿಗೆ ಜರುಗಿತು. ಈ ಸಂದರ್ಭ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ ಭಕ್ತಾದಿಗಳು ತಮ್ಮ ಇಷ್ಟರ್ಥ ಸಿದ್ಧಿಗಳಿಗೆ ವಿವಿಧ ಹರಕೆ ಸೇವೆಗಳನ್ನು ನೆರವೇರಿಸಿ ಧನ್ಯವಾದ ಹೊಂದಿದರು. ನಂತರ ಹರಕೆ ಕಾಣಿಕೆಗಳನ್ನು ಒಪ್ಪಿಸಲಾಯಿತು. ಈ ಸಂದರ್ಭ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಜರುಗಿತು.

ಕಾರ್ಯಕ್ರಮದಲ್ಲಿ ಶ್ರೀ ಪೊನ್ನುಮುತ್ತಪ್ಪ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಎ. ಕೆ .ಚಂದ್ರನ್, ಕಾರ್ಯದರ್ಶಿ ರಾಜೀವ, ಸಮಿತಿ ಸದಸ್ಯರಾದ ಶ್ರೀಧರ್, ವಿಜಯ್, ದೇವಾಲಯದ ಪೂಜಾರಿ ಹರಿದಾಸ್, ಸಮಿತಿ ಸದಸ್ಯರು ಹಾಗೂ ಗ್ರಾಮದ ಪ್ರಮುಖರು, ಊರ ಪರ ಊರಿನ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಓರಿಯನ್‌ ಧರೆಗಿಳಿಯೋದು ಹೇಗೆ ?
ಗೃಹಲಕ್ಷ್ಮೀ ಹಣ ಸಾಲದ ಕಂತಿಗೆ ಕಡಿತ ಮಾಡಂಗಿಲ್ಲ : ಸಿಎಂ