ಹೂವಿನಹಡಗಲಿ: ಹೂವಿನಹಡಗಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಸಮಗ್ರ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಶೇ. 86.68ರಷ್ಟು ಸಾಧನೆಯಾಗಿದೆ ಎಂದು ತಹಸೀಲ್ದಾರ್ ಕೆ.ಎಂ. ಗುರುಬಸವರಾಜ ಹೇಳಿದರು.
ಪಟ್ಟಣದ ಕೆಲ ಬೂತ್‌ಗಳಲ್ಲಿ ಜನ ಸರಿಯಾಗಿ ಸ್ಪಂದಿಸುತ್ತಿಲ್ಲ. ಅವರಿಗೆ ನೀಡಿರುವ ಎಸ್‌ಐಆರ್ ಫಾರಂಗಳನ್ನು ಮರಳಿ ಕೊಡುತ್ತಿಲ್ಲ. ಈ ಕುರಿತು ಸಾಕಷ್ಟು ಬಾರಿ ಅವರ ಮನೆಗಳಿಗೆ ಹೋಗಿದ್ದೇವೆ ಎಂದು ರಾಜಕೀಯ ಪಕ್ಷದ ಬಿಎಲ್‌ಎ ಸಭೆಯ ಗಮನಕ್ಕೆ ತಂದರು.
ಎಲ್ಲ ಬಿಎಲ್‌ಒಗಳು ಎಸ್‌ಐಆರ್ ಫಾರಂಗಳ ವಿತರಣೆಯಲ್ಲಿ ಶೇ. 100ರಷ್ಟು ಸಾಧನೆಯಾಗಿದೆ. ಜತೆಗೆ ಕೆಲ ವಾರ್ಡ್‌ಗಳಲ್ಲಿ ಡಿಜಿಟಲೀಕರಣ ಮಂದಗತಿಯಲ್ಲಿದೆ. ಮತದಾರರ ಪಟ್ಟಿಯಲ್ಲಿ ಸಣ್ಣ-ಪುಟ್ಟ ದೋಷಗಳಿವೆ. ಅವುಗಳನ್ನು ಸರಿಪಡಿಸುವ ಉದ್ದೇಶವೇ ಇದಾಗಿದೆ. ಯಾವುದೇ ಕಾರಣಕ್ಕೂ ನೈಜ ಮತದಾರರು ಮತದಾರರ ಪಟ್ಟಿಯಿಂದ, ಹೊರಗೆ ಉಳಿಯದಂತೆ ಎಚ್ಚರಿಕೆ ವಹಿಸಬೇಕು ಎಂದು ಬಿಎಲ್‌ಒಗಳಿಗೆ ಸೂಚಿಸಿದರು.ಓರ್ವ ಮತದಾರನ ಹೆಸರು ಸ್ಕ್ಯಾನ್ ಮಾಡಿದರೇ ಬೇರೆ ಹೆಸರು ಬರುತ್ತದೆ. ಇಂತಹ 30 ಪ್ರಕರಣಗಳು ಅಲ್ಲಿಪುರ ಗ್ರಾಮದಲ್ಲಿವೆ ಎಂದು ಬಿಎಲ್‌ಒ ಹೇಳಿಕೆಗೆ ಸ್ಪಂದಿಸಿದ ಚುನಾವಣೆ ಸಿಬ್ಬಂದಿ ಕುಬೇರನಾಯ್ಕ, ಇಷ್ಟೊಂದು ಪ್ರಮಾಣದಲ್ಲಿ ಸಂಖ್ಯೆ ಇರಲು ಸಾಧ್ಯವಿಲ್ಲ. ಇದು ನೀವು ಹೊಸ ರೀತಿಯ ಪ್ರಕರಣ ಹೇಳುತ್ತಿದ್ದೀರಿ. ಇದರಲ್ಲಿ ತಾಂತ್ರಿಕ ದೋಷಗಳಿದ್ದರೆ ಕೂಡಲೇ ಸರಿಪಡಿಸುತ್ತೇವೆ ಎಂದರು.
ಕೆಲವಡೆ ಅಂಗನವಾಡಿ ಕಾರ್ಯಕರ್ತೆಯರು ಗೌರವ ಧನ ಇಲ್ಲದೇ, ಎಸ್‌ಐಆರ್ ಸಿಬ್ಬಂದಿಗೆ ಸಹಾಯ ಮಾಡಿರುವ ಕಾರಣ ಶೇ. 86.68ರಷ್ಟು ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.