ಶಿವ ಸಾಂಗತ್ಯದಿಂದ ಸಾಕ್ಷಾತ್ಕಾರ ಹೊಂದುವವರೇ ಲಿಂಗಾಯತರು: ವಾಮದೇವ ಶಿವಾಚಾರ್ಯ

KannadaprabhaNewsNetwork |  
Published : Jul 29, 2026, 02:30 AM IST
ಕುರುಗೋಡು 01ಸಮೀಪದ ಎಮ್ಮಿಗನೂರಿನ ಹಂಪಿ ಸಾವಿರ ದೇವರ ಮಠದಲ್ಲಿ ಸಿದ್ಧಲಿಂಗ ಮಹಾಂತ ದೇಶೀಕೇಂಧ್ರ ಶಿವಾಚಾರ್ಯರ 25ನೇ ವರ್ಷದ ಲಿಂಗೈಕ್ಯ   ಪುಣ್ಯರಾಧನೆ ಹಾಗೂ ಸಂತ ಶಿಶುನಾಳ ಶರೀಫ್ ಅವರ ಪುರಾಣ ಹಾಗೂ ಸಿದ್ದಾಂತ ಶಿಖಾಮಣಿ ಪ್ರವಚನ ಕಾರ್ಯಕ್ರಮ ಸಾನಿಧ್ಯ ವಹಿಸಿ ಶ್ರೀ ಮಠದ ಪೀಠಾಧಿಪತಿ ವಾಮದೇವ ಶಿವಾಚಾರ್ಯ ಶ್ರೀಗಳು ಆಶೀರ್ವಚನ ನೀಡಿದರು. | Kannada Prabha

ಸಾರಾಂಶ

ನಿತ್ಯ ಶಿವ ಸಾಂಗತ್ಯದಿಂದ ಸಾಕ್ಷಾತ್ಕಾರ ಹೊಂದುವವರೇ ನಿಜವಾದ ಲಿಂಗಾಯತರು ಎಂದು ಎಮ್ಮಿಗನೂರು ಹಂಪಿ ಸಾವಿರ ದೇವರು ಗುರು ಮಹಾಂತಿನ ಶ್ರೀ ಮಠದ ಪೀಠಾಧಿಪತಿ ವಾಮದೇವ ಶಿವಾಚಾರ್ಯ ಶ್ರೀಗಳು ಹೇಳಿದರು.

ಕುರುಗೋಡು: ನಿತ್ಯ ಶಿವ ಸಾಂಗತ್ಯದಿಂದ ಸಾಕ್ಷಾತ್ಕಾರ ಹೊಂದುವವರೇ ನಿಜವಾದ ಲಿಂಗಾಯತರು ಎಂದು ಎಮ್ಮಿಗನೂರು ಹಂಪಿ ಸಾವಿರ ದೇವರು ಗುರು ಮಹಾಂತಿನ ಶ್ರೀ ಮಠದ ಪೀಠಾಧಿಪತಿ ವಾಮದೇವ ಶಿವಾಚಾರ್ಯ ಶ್ರೀಗಳು ಹೇಳಿದರು.

ಇಲ್ಲಿಗೆ ಸಮೀಪದ ಎಮ್ಮಿಗನೂರಿನ ಹಂಪಿ ಸಾವಿರ ದೇವರ ಮಠದಲ್ಲಿ ಸೋಮವಾರ ಆಯೋಜಿಸಿದ್ದ ಸಿದ್ಧಲಿಂಗ ಮಹಾಂತ ದೇಶೀಕೇಂದ್ರ ಶಿವಾಚಾರ್ಯರ 25ನೇ ವರ್ಷದ ಲಿಂಗೈಕ್ಯ ಪುಣ್ಯರಾಧನೆ ಹಾಗೂ ಸಂತ ಶಿಶುನಾಳ ಶರೀಫ್ ಅವರ ಪುರಾಣ ಹಾಗೂ ಸಿದ್ಧಾಂತ ಶಿಖಾಮಣಿ ಪ್ರವಚನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಶಿವ ನಾದಪ್ರಿಯನೂ ಅಲ್ಲ, ವೇದಪ್ರಿಯನೂ ಅಲ್ಲ. ಅವನು ಭಕ್ತಿಪ್ರಿಯ. ಯಾರು ಭಕ್ತಿಯಿಂದ ಭಜಿಸಿ, ಪೂಜಿಸುತ್ತಾರೋ ಅವರಿಗೆ ಒಲಿಯುತ್ತಾನೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಭಕ್ತಿ ರಸವನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಹಿರಿಯ ಪತ್ರಕರ್ತ ಶಶಿಧರ ಮೇಟಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಶ್ರದ್ಧೆ ಮತ್ತು ಪ್ರಾಮಾಣಿಕತೆ ಜೀವಂತವಾಗಿದೆ ಎಂದರೆ ಅದಕ್ಕೆ ಮಠ ಮಂದಿರಗಳಲ್ಲಿ ಕಾಲಕಾಲಕ್ಕೆ ಆಯೋಜಿಸುವ ಪುರಾಣ, ಪುಣ್ಯಕತೆಗಳು ಪ್ರಮುಖ ಕಾರಣವಾಗಿವೆ ಎಂದರು.

ಇಟಗಿ ಮಠದ ಗುರುಶಾಂತವೀರ ಮಹಾಸ್ವಾಮಿಗಳು ಮಾತನಾಡಿ, ನಾಡಿನಲ್ಲಿ ಮನುಷ್ಯರ ಬದುಕಿಗೆ ಜ್ಞಾನದ ಬಣ್ಣ ಕೊಡುವ ಯಾವುದಾರರೂ ಮಠವಿದ್ದರೆ ಅದು ಎಮ್ಮಿಗನೂರಿನ ಹಂಪಿ ಸಾವಿರ ದೇವರ ಗುರುಮಹಾಂತಿನ ಮಠ ಮಾತ್ರ ಎಂದರು.

ಹರಪನ ಹಳ್ಳಿಯ ವರಸದ್ದೋಜಾತ ಶಿವಾಚಾರ್ಯರು, ಕೂಡ್ಲಿಯ ಪ್ರಶಾಂತಶಿವಾಚಾರ್ಯ ಶ್ರೀಗಳು, ಪುರತಗೇರಿಯ ಭೂಕೈಲಾಸ ಶಿವಾಚಾರ್ಯರು, ಬಸವನ ಬಾಗೆವಾಡಿಯ ಶಿವಪ್ರಕಾಶ ಶಿವಾಚಾರ್ಯರು, ಕೆ. ವರಮುದ್ರ ಶಿವಾಚಾರ್ಯ ಶ್ರೀಗಳು, ಬಾದನಹಟ್ಟಿಯ ಫಕಿರೇಶ್ವರ ತಾತ, ಪತ್ರಕರ್ತ ಕೆ.ಎಂ. ಮಂಜುನಾಥ್ ಸ್ವಾಮಿ, ಸಿದ್ದೇಶ್ವರ, ಜಗನ್ನಾಥ, ಸದಾಶಿವಪ್ಪ ಮತ್ತು ಮಹೇಶಗೌಡರು, ಬಾಜಾರ್ ಬಸವರಾಜ, ಶಿಕ್ಷಕ ಎಸ್. ರಾಮಪ್ಪ, ಭಕ್ತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೈನಿಕರನ್ನು ಗೌರವಿಸುವ ಕಾರ್ಯವಾಗಲಿ
ಶೆಟ್ಟಿಗೇರಿ: ಮಾಜಿ ಸೈನಿಕರ ಸಂಘದಿಂದ ಕಾರ್ಗಿಲ್ ವಿಜಯ ದಿನ ಆಚರಣೆ