ನನಗೂ ಸಚಿವನಾಗಬೇಕೆಂಬ ಆಸೆ ಇದೆ: ಶಾಸಕ ರಮೇಶ್‌ ಬಂಡಿಸಿದ್ದೇಗೌಡ

KannadaprabhaNewsNetwork |  
Published : Nov 08, 2025, 01:30 AM IST
7ಕೆಎಂಎನ್ ಡಿ18 | Kannada Prabha

ಸಾರಾಂಶ

ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತನಾಗಿದ್ದೇನೆ. ಹೈಕಮಾಂಡ್ ಆದೇಶ ಪಾಲಿಸುತ್ತೇನೆ. ಸಚಿವ ಸಂಪುಟದ ಪುನರ್ ರಚನೆ ವೇಳೆ ನನಗೆ ಸಚಿವ ಸಿಗಲಿದೆ ಎಂಬ ವಿಶ್ವಾಸವಿದೆ. ನಾನು ಹೈಕಮಾಂಡ್ ಆದೇಶ ಮೀರಿ ನಡೆಯುವುದಿಲ್ಲ. ಅದೇ ರೀತಿ ನವೆಂಬರ್ ತಿಂಗಳಿನಲ್ಲಿ ಯಾವುದೇ ಕ್ರಾಂತಿಯೂ ಆಗುವುದಿಲ್ಲ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ನನಗೂ ಸಚಿವನಾಗಬೇಕೆಂಬ ಆಸೆ ಇದೆ. ಆಕಾಂಕ್ಷಿಯೂ ಆಗಿದ್ದೇನೆ ಎಂದು ಸೆಸ್ಕಾಂ ಅಧ್ಯಕ್ಷ ಹಾಗೂ ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.

ತಾಲೂಕಿನ ಬೆಳಗೊಳ ಗ್ರಾಮದಲ್ಲಿ ಸುಮಾರು 48.34 ಲಕ್ಷ ರು. ವೆಚ್ಚದಲ್ಲಿ ನೂತನ ಪಶು ವೈದ್ಯಕೀಯ ಚಿಕಿತ್ಸಾಲಯದ ಕಟ್ಟಡ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿ, ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತನಾಗಿದ್ದೇನೆ. ಹೈಕಮಾಂಡ್ ಆದೇಶ ಪಾಲಿಸುತ್ತೇನೆ. ಸಚಿವ ಸಂಪುಟದ ಪುನರ್ ರಚನೆ ವೇಳೆ ನನಗೆ ಸಚಿವ ಸಿಗಲಿದೆ ಎಂಬ ವಿಶ್ವಾಸವಿದೆ ಎಂದ ಅವರು, ನಾನು ಹೈಕಮಾಂಡ್ ಆದೇಶ ಮೀರಿ ನಡೆಯುವುದಿಲ್ಲ. ಅದೇ ರೀತಿ ನವೆಂಬರ್ ತಿಂಗಳಿನಲ್ಲಿ ಯಾವುದೇ ಕ್ರಾಂತಿಯೂ ಆಗುವುದಿಲ್ಲ ಎಂದರು.

ಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ವಾಪಸ್ ಪಡೆದರೆ ಹೊಸ ಹಕ್ಕುಪತ್ರ ವಿತರಣೆ ಮಾಡಲಾಗುವುದು. ನಾನು ಶಾಸಕನಾದ ಬಳಿಕ ಕೆ.ಆರ್.ಸಾಗರ ಗ್ರಾಮದಲ್ಲಿ ತಹಸೀಲ್ದಾರ್ ಸಮ್ಮುಖದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಜೊತೆಗೂಡಿ ಖಾತೆ ಇಲ್ಲದ ಮನೆಗಳನ್ನು ಅಳತೆ ಮಾಡಿ ದಾಖಲೆ ಮಾಡಲಾಗಿದೆ ಎಂದರು.

ಈ ಹಿಂದೆ ನೀಡಿದ್ದ ಹಕ್ಕುಪತ್ರಗಳನ್ನು ಕ್ರಮ ಬದ್ಧವಾಗಿ ನೀಡದೆ, ಕಟಾಚಾರಕ್ಕೆ ನೀಡಿದ್ದರಿಂದ ತಡೆ ಹಿಡಿಯಲಾಗಿದೆ. ಅದನ್ನು ಪ್ರಶ್ನಿಸಿ ಗ್ರಾಪಂ ಸದಸ್ಯರು ಹಾಗು ಗ್ರಾಮಸ್ಥರು ಕೋರ್ಟ್ ಮೆಟ್ಟಿಲೇರಿದ್ದರಿಂದ ಹೊಸ ಹಕ್ಕುಪತ್ರ ವಿತರಣೆ ತಡವಾಗಿದೆ. ಕೊರ್ಟ್‌ನಲ್ಲಿ ಸಲ್ಲಿಕೆಯಾಗಿರುವ ದೂರು ವಾಪಸ್‌ ಪಡೆದರೆ ಶೀಘ್ರವೇ ಹೊಸದಾಗಿ ಹಕ್ಕುಪತ್ರ ವಿತರಣೆ ಮಾಡಲಾಗುತ್ತದೆ ಎಂದರು.

ಈ ವೇಳೆ ಗ್ರಾಪಂ ಅಧ್ಯಕ್ಷೆ ಸವಿತಾ ರವಿಕುಮಾರ್, ಜಿಲ್ಲಾ ಪಶು ಇಲಾಖೆ ಡಿ.ಡಿ ಶಿವಲಿಂಗಯ್ಯ, ತಾಲೂಕು ಪಶು ಇಲಾಖೆ ಉಪನಿದೇರ್ಶಕ ಪ್ರವೀಣ್ ಕುಮಾರ್, ಗ್ರಾಪಂ ಮಾಜಿ ಆಧ್ಯಕ್ಷರಾದ ಬಿ.ವಿ.ಸುರೇಶ್, ರವಿಕುಮಾರ್, ಪುಟ್ಟರಾಜು, ಬೆಳಗೊಳ ಪಶು ವೈದ್ಯಕೀಯ ಆಸ್ಪತ್ರೆ ವೈದ್ಯ ಪ್ರದೀಪ್, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ ಸ್ವಾಮಿಗೌಡ, ತಾಪಂ ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ಗ್ರಾಪಂ ಸದಸ್ಯರಾದ ಅರವಿಂದ, ರಜಿನಿ, ಮಂಜು, ದೇವರಾಜು ಮಾಜಿ ಸದಸ್ಯ ರವಿ, ಹಾಲಿನ ಡೈರಿ ಅಧ್ಯಕ್ಷ ಬಾಬು, ನಿರ್ದೇಶಕ ಯತೀಶ್, ಮುಖಂಡರಾದ ರವೀಶ್ ಸೇರಿದಂತೆ ಇತರರು ಇದ್ದರು.

ವೋಟ್ ಚೋರಿ ಸಹಿ ಅಭಿಯಾನಕ್ಕೆ ಚಾಲನೆ

ದೇವಲಾಪುರ:

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಮತದಾನ ಸಾಂವಿಧಾನಿಕ ಒಂದು ಮೂಲ ಹಕ್ಕಾಗಿದೆ. ಮತದಾರರ ಪಟ್ಟಿಯಿಂದ ಕೈಬಿಟ್ಟು ಹಕ್ಕು ಕಸಿದುಕೊಳ್ಳುವ ಪ್ರಯತ್ನಗಳನ್ನು ನಿಲ್ಲಿಸುವಂತೆ ವೋಟ್ ಚೂರಿ ವಿರುದ್ಧ ಸಹಿ ಸಂಗ್ರಹ ಅಭಿಯಾನ ಆರಂಭಿಸಲಾಗಿದೆ ಎಂದು ನಾಗಮಂಗಲ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್ ತಿಳಿಸಿದರು.

ದೇವಲಾಪುರದ ಹೋಬಳಿ ಕೇಂದ್ರದ ಬಸ್ ನಿಲ್ದಾಣದ ಬಳಿ ಬ್ಲಾಕ್ ಕಾಂಗ್ರೆಸ್‌ನಿಂದ ನಡೆದ ವೋಟ್ ಚೋರಿ ಸಹಿ ಅಭಿಯಾನಕ್ಕೆ ಮುಖಂಡರೊಂದಿಗೆ ಭಾಗವಹಿಸಿ ಚಾಲನೆ ನೀಡಲಾಯಿತು.

ಕೇಂದ್ರ ಸರ್ಕಾರ ಸಂವಿಧಾನಿಕ ಮತದಾನದ ಹಕ್ಕನ್ನು ಕಸಿದುಕೊಂಡು ಅಧಿಕಾರಕ್ಕೆರುವದನ್ನು ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ರಾಷ್ಟ್ರಾದ್ಯಂತ ವೋಟ್ ಚೋರಿ ಸಹಿ ಅಭಿಯಾನದ ಮೂಲಕ ಪ್ರಜಾಪ್ರಭುತ್ವ ಉಳಿವಿಗಾಗಿ ಸಂವಿಧಾನದ ಆಶಯಗಳ ಉಳಿವಿಗಾಗಿ ಹೋರಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರ ಕೈ ಬಲಪಡಿಸಲು ನಾವೆಲ್ಲರೂ ಸಂಘಟಿತರಾಗಿ ಕೈ ಜೋಡಿಸಬೇಕು ಎಂದರು.

ಈ ವೇಳೆ ತಾಪಂ ಮಾಜಿ ಅಧ್ಯಕ್ಷರು ಹಾಗೂ ಒತ್ತುವರಿ ಕಮಿಟಿ ಸದಸ್ಯ ಕೃಷ್ಣೆಗೌಡ, ಮಂಡ್ಯ ತಾಲೂಕು ಮಾಜಿ ನಿರ್ದೇಶಕರಾದ ನರಸಿಂಹ ಮೂರ್ತಿ ಗೋವಿಂದರಾಜು ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

PREV

Recommended Stories

83 ವರ್ಷದಿಂದ ರಂಗಂಪೇಟೆ-ತಿಮ್ಮಾಪುರ ಸಂಘದ ಕನ್ನಡ ಸೇವೆ
ಕನ್ನಡಕ್ಕಾಗಿ ಕೈ ಎತ್ತಿದ್ದಕ್ಕಾಗಿ ಬಿತ್ತು 2000 ಕೇಸ್‌!