ಅಕ್ರಮ ಮಾಡುವವರಿಗೇ ಸಚಿವ, ಶಾಸಕರ ಬೆಂಬಲ: ಆರೋಪ
ಕನ್ನಡಪ್ರಭ ವಾರ್ತೆ ಬೀದರ್ನಾನೊಬ್ಬ ದಲಿತ ಎಂದು ಟಾರ್ಗೆಟ್ ಮಾಡಲಾಗುತ್ತಿದೆ. ದಲಿತ ಅಧಿಕಾರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನನಗೆ ಬೆಂಬಲಿಸುವ ಬದಲು ಬಿಜೆಪಿಯ ಶಾಸಕ ಅದರಲ್ಲೂ ತಮ್ಮದೇ ಸಮುದಾಯದ ಡಾ. ಶೈಲೇಂದ್ರೆ ಬೆಲ್ದಾಳೆ ಅವರಿಗೆ ಬೆಂಬಲಿಸುತ್ತಿದ್ದಾರೆ ಎಂದು ಆರ್‌ಟಿಒ ಅಧಿಕಾರಿ ಮಂಜುನಾಥ್ ಆರೋಪಿಸಿದ್ದಾರೆ.
ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರ ಜೊತೆ ಮಾತಿನ ಚಕಮಕಿ ನಡೆದ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಆರ್‌ಟಿಒ ಅಧಿಕಾರಿ ಮಂಜುನಾಥ ಅವರನ್ನು ರಾಯಚೂರಿಗೆ ವರ್ಗಾಯಿಸಿದ ಹಿನ್ನಲೆಯಲ್ಲಿ ಭಾನುವಾರ ಅಧಿಕಾರಿ ಮಾತನಾಡಿರುವ ಈ ವಿಡಿಯೋ ವೈರಲ್ ಆಗಿದೆ.ನಾನು ನಿಷ್ಠಾವಂತ ಅಧಿಕಾರಿ, ಕಾನೂನು ವ್ಯಾಪ್ತಿಯಲ್ಲಿ ಕೆಲಸ ಮಾಡ್ತಿದ್ದೇನೆ. ಮರಳು ಮಾಫಿಯಾ, ಕೆಂಪು ಕಲ್ಲು, ಮಣ್ಣು ಸಾಗಾಟ ತಡೆದಿದ್ದೇನೆ. ಅಕ್ರಮ ಲಾರಿ ಸಾಗಾಟ ತಡೆಯುತ್ತಿದ್ದೇನೆ. ಒಂದೇ ನಂಬರ್ ಪ್ಲೇಟ್ ಹಲವಾರು ಗಾಡಿಗಳಿಗೆ ಹಾಕಿಕೊಂಡು ಓಡಿಸ್ತಿದ್ದಾರೆ. ಇದನ್ನು ನಿಲ್ಲಿಸುವ ಪ್ರಯತ್ನ ಮಾಡ್ತಿದ್ದೇನೆ. ಆದರೆ ಇವರೆಲ್ಲ ಮತದಾರರು. ಹೀಗಾಗಿ ಜಿಲ್ಲೆಯ ಎಲ್ಲ ಶಾಸಕರಿಗೆ ನಾನು ಬೇಡವಾಗಿದ್ದೇನೆ. ಬೀದರ್‌ನ ಸಚಿವ ರಹೀಮ್ ಖಾನ್, ಹುಮನಾಬಾದ್‌ನ ರಾಜಶೇಖರ ಪಾಟೀಲ್, ಬೀದರ್ ದಕ್ಷಿಣದ ಡಾ. ಶೈಲೇಂದ್ರ ಬೆಲ್ಧಾಳೆ ಹಾಗೆಯೇ ಸಚಿವ ಈಶ್ವರ ಖಂಡ್ರೆ ಅವರಿಗೂ ಬೇಡವಾಗಿದ್ದೇನೆ. ಅಕ್ರಮ ಮಾಡುವ ಮತದಾರರಿಗಿಂತ ದಕ್ಷ ಅಧಿಕಾರಿ ಬೇಡವಾಗಿದ್ದಾನೆ ಎಂದು ಆರೋಪಿಸಿದ್ದಾರೆ.ನನಗೆ ಮರಳು ಮಾಫಿಯಾದವರಿಂದ ಜೀವ ಭಯ ಇದೆ. ರಕ್ಷಣೆ ಕೊಡುವಂತೆ ಜಿಲ್ಲಾಧಿಕಾರಿ, ಎಸ್‌ಪಿ ಅವರಿಗೆ ಮನವಿ ಮಾಡಿದ್ದೇನೆ. ಇನ್ನು ನಾನು ಹಫ್ತಾ ವಸೂಲಿ ಮಾಡುತ್ತಿದ್ದಲ್ಲಿ ತನಿಖೆ ಮಾಡಲಿ. ತಪ್ಪಿತಸ್ಥ ಎಂದು ಸಾಬೀತಾದಲ್ಲಿ ನನ್ನನ್ನು ಅಮಾನತು ಮಾಡಲಿ ಇಲ್ಲವಾದಲ್ಲಿ ಸೇವೆಯಿಂದ ವಜಾ ಮಾಡಲಿ. ಶಾಸಕ ಡಾ. ಬೆಲ್ದಾಳೆ ಅವರು ಅಪೂರ್ಣ ವಿಡಿಯೋ ಹರಿಬಿಟ್ಟಿದ್ದಾರೆ. ಪೂರ್ಣ ವಿಡಿಯೋ ಬಿಡಿಲಿ ಎಂದು ಆಗ್ರಹಿಸಿದ್ದಾರೆ ಆರ್‌ಟಿಒ ಅಧಿಕಾರಿ ಮಂಜುನಾಥ.ಫೈಲ್ 3ಬಿಡಿ10