- ನನ್ನ ಬಯೋಡಾಟ ಕಾಂಗ್ರೆಸ್ ವರಿಷ್ಠರಿಗೆ ಗೊತ್ತಿದೆ - - -
ನಾನೂ ಸಚಿವ ಸ್ಥಾನ ನಿರೀಕ್ಷೆಯಲ್ಲಿದ್ದೇನೆ. ಖಂಡಿತವಾಗಿಯೂ ಈ ಸಲ ನನಗೆ ಸಚಿವ ಸ್ಥಾನ ಕೊಟ್ಟೇ ಕೊಡುತ್ತಾರೆಂಬ ಸಂಪೂರ್ಣ ವಿಶ್ವಾಸವಿದೆ ಎಂದು ಚಳ್ಳಕೆರೆ ಕಾಂಗ್ರೆಸ್ ಶಾಸಕ ಟಿ.ರಘುಮೂರ್ತಿ ಹೇಳಿದರು.
ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸಚಿವ ಸಂಪುಟ ವಿಸ್ತರಣೆ ವೇಳೆ ನನಗೂ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆಂಬ ಸಂಪೂರ್ಣ ವಿಶ್ವಾಸವಿದೆ ಎಂದರು.ಸಚಿವ ಸ್ಥಾನವನ್ನು ನಾನು ಕ್ಲೇಮ್ ಮಾಡುವುದಲ್ಲ. ಪಕ್ಷದ ವರಿಷ್ಠರೇ ಸಚಿವರಾಗಿ ನನ್ನ ನೇಮಿಸಬೇಕು. ನಮ್ಮ ನಾಯಕ ಸಮುದಾಯದ ಎಷ್ಟು ಜನ ಶಾಸಕರಿದ್ದಾರೆ? ಮೀಸಲಾತಿ ಕ್ಷೇತ್ರದಲ್ಲಿ 14 ಜನ ಗೆದ್ದಿದ್ದೇವೆ. ಸಾಮಾನ್ಯ ಕ್ಷೇತ್ರದಿಂದ ಒಬ್ಬರು ಗೆದ್ದಿದ್ದಾರೆ ಎಂದು ತಿಳಿಸಿದರು.
ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಸ್ಥಾನ ಯಾರಿಗೆ ನೀಡಬೇಕೆಂಬುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಹೈಕಮಾಂಡ್, ಕೆಪಿಸಿಸಿ ಹಾಗೂ ಮುಖ್ಯಮಂತ್ರಿಗಳು ನಿರ್ಧಾರ ಮಾಡುತ್ತಾರೆ. ಕ್ಲೇಮ್ ಮಾಡುವುದು ಬೇರೆ, ಎಲ್ಲರೂ ಸೇರಿ, ನಿರ್ಧಾರ ಮಾಡುವುದೇ ಬೇರೆ. ನನ್ನ ಸಂಪೂರ್ಣ ಬಯೋಡಾಟ ನಮ್ಮ ಪಕ್ಷದ ವರಿಷ್ಠರಿಗೆ ಗೊತ್ತಿದೆ. ಯಾರು ಸೀನಿಯರ್ ಇದ್ದಾರೆ, ಎಷ್ಟು ಸಲ ಗೆದ್ದಿದ್ದಾರೆ, ನಿರಂತರವಾಗಿ ಗೆದ್ದಿದ್ದಾರೋ ಅಥವಾ ಇಲ್ಲವೋ ಎಂಬುದೆಲ್ಲವೂ ಹೈಕಮಾಂಡ್‌ಗೆ ಗೊತ್ತಿದೆ. ಮುಖ್ಯಮಂತ್ರಿ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವನ್ನೆಲ್ಲಾ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಶಾಸಕ ರಘುಮೂರ್ತಿ ಪ್ರಶ್ನೆಯೊಂ ದಕ್ಕೆ ಪ್ರತಿಕ್ರಿಯಿಸಿದರು.- - -
(-ಫೋಟೋ: ಟಿ.ರಘುಮೂರ್ತಿ)