ಶಾಸಕ ಗಣೇಶ್‌ ಜಿಲ್ಲೆಯ ಅಭಿವೃದ್ಧಿ ಮಾಡುತ್ತಾರೆಂದು ವಿಶ್ವಾಸವಿದೆ: ಪಿಜಿಆರ್‌ ಸಿಂಧ್ಯಾ

KannadaprabhaNewsNetwork | Published : Jan 10, 2024 1:45 AM

ಸಾರಾಂಶ

ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶೀರ್ವಾದ ಇದೆ. ಕ್ಷೇತ್ರ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ದುಡಿಯುತ್ತಾರೆಂಬ ವಿಶ್ವಾಸವೂ ನನಗಿದೆ ಎಂದು ಮಾಜಿ ಸಚಿವರೂ ಹಾಗೂ ಆದ ಸ್ಕೌಟ್ಸ್‌ ಮತ್ತು ಗೈಡ್ಸ್‌ ನ ಮುಖ್ಯಸ್ಥ ಪಿಜಿಆರ್‌ ಸಿಂಧ್ಯಾ ಹೇಳಿದರು.

ಪಿಜಿಆರ್‌ ಸಿಂಧ್ಯಾ ಹೇಳಿಕೆ । ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಸ್ಥಳೀಯ ಸಂಸ್ಥೆವತಿಯಿಂದ ನಡೆದ ಪರಿಸರ ರ್‍ಯಾಲಿ ಜಾಗೃತಿ ಶಿಬಿರ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶೀರ್ವಾದ ಇದೆ. ಕ್ಷೇತ್ರ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ದುಡಿಯುತ್ತಾರೆಂಬ ವಿಶ್ವಾಸವೂ ನನಗಿದೆ ಎಂದು ಮಾಜಿ ಸಚಿವರೂ ಹಾಗೂ ಆದ ಸ್ಕೌಟ್ಸ್‌ ಮತ್ತು ಗೈಡ್ಸ್‌ ನ ಮುಖ್ಯಸ್ಥ ಪಿಜಿಆರ್‌ ಸಿಂಧ್ಯಾ ಹೇಳಿದರು.

ತಾಲೂಕಿನ ಬೇಗೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಸ್ಥಳೀಯ ಸಂಸ್ಧೆ ಆಯೋಜಿಸಿದ್ದ ತಾಲೂಕು ಮಟ್ಟದ ರ್‍ಯಾಲಿ ಮತ್ತು ಪರಿಸರ ಜಾಗೃತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಹಾಲಹಳ್ಳಿಯ ಎಚ್.ಎನ್.ಶ್ರೀಕಂಠಶೆಟ್ಟರು ಕೂಡ ಬೇಗೂರು ಭಾಗದ ಮಕ್ಕಳಿಗೆ ಜ್ಞಾನ ಕೊಡಬೇಕು ಎಂಬ ಸದುದ್ದೇಶದಿಂದ ಬೇಗೂರು ಪ್ರೌಢ ಶಾಲೆಗೆ ಪ್ರೋತ್ಸಾಹ ನೀಡಿದ ವಂಶದ ಕುಡಿಯೇ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್ ಇವರಿಗೂ ಜವಾಬ್ದಾರಿ ಇದೆ ಎಂದರು.ಗುಂಡ್ಲುಪೇಟೆ ಕ್ಷೇತ್ರದ ಜನ ಸಭ್ಯರು, ಕ್ಷೇತ್ರ ಹಾಗೂ ಜಿಲ್ಲೆಯ ನಾಯಕತ್ವ ವಹಿಸಿಕೊಂಡು ಶಕ್ತಿ ಬೆಳೆಸಿಕೊಂಡು ಹೋಗಬೇಕು ಜೊತೆಗೆ ರಾಜಕಾರಣದಲ್ಲಿ ಪಕ್ಷ, ಪಂಗಡ, ಗುಂಪು ಸ್ವಾಭಾವಿಕ ಆದರೆ ಚುನಾವಣೆ ನಂತರ ಎಲ್ಲಾ ಜನರ ಪ್ರೀತಿ, ವಿಶ್ವಾಸ ಇರಬೇಕು ಎಂದರು.

ದೇಶ ಕಟ್ಟುವ ಕೆಲಸ: ಶಿಕ್ಷಕರ ವೃತ್ತಿ ಪವಿತ್ರವಾದದ್ದು, ಖಾಸಗಿ, ಸರ್ಕಾರಿ ಶಿಕ್ಷಕರೆ ಆಗಿರಲಿ ಶಾಶ್ವರ ಗೌರವ ಸಿಗಲಿದೆ. ಶಿಕ್ಷಕರಿಗೆ ದೇಶ ಕಟ್ಟುವ ಶಕ್ತಿಯಿದೆ. ಶಿಕ್ಷಕರಾಗುವುದೇ ದೊಡ್ಡ ಭಾಗ್ಯ ಎಂದರು. ಸ್ಕೌಟ್ಸ್‌ ಮತ್ತು ಗೈಡ್ಸ್‌ ಸೇರಿದ ಮಕ್ಕಳ ಮನಸ್ಸಿನಲ್ಲಿ ಭಾವನೆಗಳು ಮುಖ್ಯ. ಸರ್ವ ಧರ್ಮಗಳ ಪ್ರಾರ್ಥನೆಯಿಂದ ಮಕ್ಕಳು ಹೃದಯದಲ್ಲಿ ಧರ್ಮ ಗ್ರಂಥಗಳ ಮಾನವೀಯ ಮೌಲ್ಯಗಳು ಉಳಿಯಲಿವೆ. ಸಮಾಜ, ಕುಟುಂಬ, ಪ್ರಗತಿ ಜೊತೆಗೆ ಸಮಸ್ಯೆಗಳು ಬಂದಾಗ ಎದುರಿಸುವ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದರು. ಪರಿಸರ ಉಳಿಸಬೇಕು ಹಾಗೂ ಬೆಳೆಸಬೇಕು ಎಂಬುದು ಸ್ಕೌಟ್ಸ್‌ ಮತ್ತು ಗೈಡ್ಸ್‌ ನ ಪ್ರಮುಖ ಉದ್ದೇಶ. ಮಕ್ಕಳು ಪರಿಸರ ಉಳಿಸುವುದನ್ನು ಸೇವೆ ಎಂದು ಪರಿಗಣಿಸಿದರೆ ಪರಿಸರ ಸಂರಕ್ಷಣೆಯ ಜೊತೆಗೆ ವನ್ಯಜೀವಿಗಳು ಉಳಿಯಲಿವೆ ಎಂದರು. ಸಮಾರಂಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ಮಠದ ಶ್ರೀಗಳು ಆಶೀರ್ವಚನ ನೀಡಿದರು.ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್‌, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ಮುನಿರಾಜು, ಪುರಸಭೆ ಮಾಜಿ ಅಧ್ಯಕ್ಷ ಜಿ.ಕೆ.ನಾಜೀಮುದ್ದೀನ್‌, ಬೇಗೂರು ಗ್ರಾಪಂ ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷ ಬಿ.ಆರ್.ಮಹದೇವಸ್ವಾಮಿ, ಜಿಪಂ ಮಾಜಿ ಸದಸ್ಯ ಕೆರಹಳ್ಳಿ ನವೀನ್‌, ತಾಪಂ ಮಾಜಿ ಸದಸ್ಯ ನೀಲಕಂಠಪ್ಪ, ಎಪಿಎಂಸಿ ಸದಸ್ಯ ಆರ್.ಎಸ್.ನಾಗರಾಜು, ಡಿಡಿಪಿಐ ರಾಮಚಂದ್ರರಾಜೇ ಅರಸ್‌, ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶೇಖರ, ಕಸಾಪ ಜಿಲ್ಲಾಧ್ಯಕ್ಷ ಎಂ.ಶೈಲಕುಮಾರ್(ಶೇಲೇಶ್)‌, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್‌, ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಸಿ.ಮಹದೇವಸ್ವಾಮಿ, ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಜಿಲ್ಲಾ ಕಾರ್ಯದರ್ಶಿಗಳಾದ ಬೆಳವಾಡಿ ಅನ್ನಪೂರ್ಣಮ್ಮ, ಎಂ.ವಿ.ರಾಮಚಂದ್ರ, ಗ್ರಾಪಂ ಸದಸ್ಯ ಬಿ.ಎನ್.ಪುನೀತ್‌ ಕುಮಾರ್‌, ಗುರುಸ್ವಾಮಿ ಸೇರಿದಂತೆ ಬೇಗೂರು ಗ್ರಾಮಸ್ಥರಿದ್ದರು. -----------------------------------------

ಬಾಕ್ಸ್‌....

ಎಚ್‌ಎಸ್‌ಎಂ ಬಗ್ಗೆ ಪಿಜಿಆರ್‌ ಸಿಂಧ್ಯಾ ಮೆಲಕುಗುಂಡ್ಲುಪೇಟೆ: ಸಾರ್ವಜನಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಹೀಗೆ ಇರಬೇಕು ಎಂದು ತೋರಿಸಿದ್ದು ಮಾಜಿ ಸಚಿವ ಎಚ್.ಎಸ್.ಮಹದೇವಪ್ರಸಾದ್‌ ಎಂದು ಮಾಜಿ ಸಚಿವ ಪಿಜಿಆರ್‌ ಸಿಂಧ್ಯಾ ಮೆಲಕು ಹಾಕಿದರು. ಮಹದೇವಪ್ರಸಾದ್‌‌ ನಾ ಕಂಡಂತೆ ಶ್ರೇಷ್ಟ ರಾಜಕಾರಣಿ. ನಾನು ಮತ್ತು ಮಹದೇವಪ್ರಸಾದ್‌ ಅಪ್ಪಟ ಸಮಾಜವಾದಿ, ಮಾಜಿ ಸಿಎಂ ಜೆ.ಎಚ್.ಪಟೇಲರ ಗರಡಿಯಲ್ಲಿ ಬೆಳೆದವರು. ಮಹದೇವಪ್ರಸಾದ್‌ ಪಕ್ಷದ ಹೆಸರಲ್ಲಿ ಬೆಳೆಯಲಿಲ್ಲ ಎಂದರು. ಮಹದೇವಪ್ರಸಾದ್‌ ಅಜಾತಶತೃ. ಎಲ್ಲರನ್ನು ಪ್ರೀತಿ, ವಿಶ್ವಾಸದಿಂದ ಕಾಣುತ್ತಿದ್ದ ಶ್ರೇಷ್ಠ ನಾಯಕ. ಅಲ್ಲದೆ ತಾಯಿ ಹೃದಯವಿತ್ತು.ಶಾಸಕರಲ್ಲಿ ಮಹದೇವಪ್ರಸಾದ್‌ ಆದರ್ಶ ಶಾಸಕರಾಗಿದ್ದರು. ಅಲ್ಲದೆ ಸಂಘಟನೆಯಲ್ಲಿ ಮುಂದಿದ್ದರು.

ಗುಂಡ್ಲುಪೇಟೆ ಕ್ಷೇತ್ರದಲ್ಲಿ ರಾಜ್ಯಕ್ಕೆ ಹೆಸರು ತಂದವರೇ ಹೆಚ್ಚು: ಮೊದಲಿಗರಾಗಿ ಕೆ.ಎಸ್.ನಾಗರತ್ಮಮ್ಮ ಸಚಿವರಾಗಿ 6 ವರ್ಷ ಸ್ಪೀಕರ್‌ ಆಗಿ ಇತಿಹಾಸ ನಿರ್ಮಿಸಿದ್ದರು ಎಂದರು. ಕೆ.ಎಸ್.ನಾಗರತ್ನಮ್ಮ ಕೃಪೆಯಿಂದಲೇ ಗುಂಡ್ಲುಪೇಟೆ ನಜೀರ್‌ ಸಾಬ್‌ ಅಲ್ಲ ನೀರ್‌ ಸಾಹೇಬರು ಎಂದು ಹೆಸರು ಗಳಿಸಿದರು. ಇನ್ನು ಮಹದೇವಪ್ರಸಾದ್‌ ಜೆ.ಎಚ್.ಗರಡಿಯಲ್ಲಿ ಪಳಗಿದವರು.ಯಾವ ಪಕ್ಷದಲ್ಲಿದ್ದರೂ ಎಲ್ಲರನ್ನು ಪ್ರೀತಿ, ವಿಶ್ವಾಸ ಗಳಿಸಿದ್ದ ರಾಜಕಾರಣಿಯಾಗಿದ್ದರು ಎಂದರು.---------------------------------

ಬಾಕ್ಸ್‌.....೧೫ ನೇ ಬಜೆಟ್‌ ಮಂಡಿಸಿ ಸಿದ್ದರಾಮಯ್ಯ ಇತಿಹಾಸ : ಬರುವ ಫೆ.೧೯ ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರ್ಕಾರದಲ್ಲಿ ೧೫ ನೇ ಬಜೆಟ್‌ ಮಂಡಿಸುವ ಮೂಲಕ ದೇಶದಲ್ಲಿ ಇತಿಹಾಸ ನಿರ್ಮಿಸಲಿದ್ದಾರೆ ಎಂದು ಮಾಜಿ ಸಚಿವ ಪಿಜಿಆರ್‌ ಸಿಂಧ್ಯಾ ಸಂತಸ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ಮಾತನಾಡಿ ದೇಶದ ಇತಿಹಾಸದಲ್ಲಿ ೧೫ ಭಾರಿ ಬಜೆಟ್‌ ಮಂಡಿಸಿದ ಮೊದಲಿಗರಾಗಲಿದ್ದಾರೆ ಎಂದು ರಾಜ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯ ಎಂದರು. ಬಜೆಟ್‌ನಲ್ಲಿ ರಾಜ್ಯದ ದುರ್ಬಲರು, ಕಾರ್ಮಿಕರು, ರೈತರು, ಮಹಿಳೆಯರಿಗೆ ಹೆಚ್ಚು ಒತ್ತು ನೀಡಲಿದ್ದಾರೆ ಅಲ್ಲದೆ ಸಾಮಾಜಿಕ ನ್ಯಾಯ ಹಾಗೂ ಬಸವಣ್ಣನ ವಿಚಾರದ ವಿಶ್ವಾಸ ಇಟ್ಟಿರುವ ಸಿಎಂ ಎಂದರು.

------------------------------------೯ಜಿಪಿಟಿ೧ಗುಂಡ್ಲುಪೇಟೆ ತಾಲೂಕಿನ ಬೇಗೂರಲ್ಲಿ ನಡೆದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ತಾಲೂಕು ಮಟ್ಟದ ರ್ಯಾಲಿ ಮತ್ತು ಪರಿಸರ ಜಾಗೃತಿ ಶಿಬಿರವನ್ನು ಮಾಜಿ ಸಚಿವ ಪಿಜಿಆರ್‌ ಸಿಂಧ್ಯಾ ಉದ್ಘಾಟಿಸಿದರು.೮ಜಿಪಿಟಿ೩

ಗುಂಡ್ಲುಪೇಟೆ ತಾಲೂಕಿನ ಬೇಗೂರಲ್ಲಿ ನಡೆದ ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ಗೆ ಸಭೆಗೆ ಆಗಮಿಸಿ ಮಾಜಿ ಸಚಿವ ಪಿಜಿಆರ್‌ ಸಿಂಧ್ಯಾರನ್ನು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್‌ ಸನ್ಮಾನಿಸಿದರು.ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌,ಮುಖಂಡರಾದ ಎಚ್.ಎಸ್.ನಂಜಪ್ಪ,ಬಿ.ಎಂ.ಮುನಿರಾಜು,ಜಿ.ಕೆ.ನಾಜೀಮುದ್ದೀನ್‌ ಇದ್ದಾರೆ.

Share this article