ನಾನು ಡಿಸಿಎಂ ಆಕಾಂಕ್ಷಿಯಲ್ಲ: ಸಚಿವ ಕೆ.ಎನ್. ರಾಜಣ್ಣ

KannadaprabhaNewsNetwork |  
Published : Jun 24, 2024, 01:35 AM IST
ಕೆ.ಎನ್‌.ರಾಜಣ್ಣ | Kannada Prabha

ಸಾರಾಂಶ

ನಾನು ಉಪಮುಖ್ಯಮಂತ್ರಿಯ ಆಕಾಂಕ್ಷಿಯೂ ಅಲ್ಲ. ಇನ್ನು ಮುಂದೆ ಯಾವ ಚುನಾವಣೆಯಲ್ಲಿಯೂ ನಿಲ್ಲುವವನು ಅಲ್ಲ ಎಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಾನು ಉಪಮುಖ್ಯಮಂತ್ರಿಯ ಆಕಾಂಕ್ಷಿಯೂ ಅಲ್ಲ. ಇನ್ನು ಮುಂದೆ ಯಾವ ಚುನಾವಣೆಯಲ್ಲಿಯೂ ನಿಲ್ಲುವವನು ಅಲ್ಲ. ಆದರೆ, ಯಾವಾಗಲೂ ಕೂಡ ಅಧಿಕಾರ ಹಂಚಿಕೊಂಡಾಗ ಇನ್ನೂಳಿದ ಸಮುದಾಯಗಳು ಸಹ ಆಯಾ ಪಕ್ಷದ ಮೇಲೆ ಪ್ರೀತಿ ವಿಶ್ವಾಸ ಬರುತ್ತದೆ. ಹೀಗಾಗಿ ನಾನು ಉಪಮುಖ್ಯಮಂತ್ರಿ ಹುದ್ದೆಯ ಕುರಿತು ಪ್ರತಿಪಾದನೆ ಮಾಡಿದ್ದೇನೆ ವಿನಃ ಬೇರೇನೂ ಇಲ್ಲ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಉಪಮುಖ್ಯಮಂತ್ರಿ ಹುದ್ದೆಯ ಕುರಿತು ನಡೆದಿರುವ ಚರ್ಚೆಯ ಭಾಗವಾಗಿ ಮಾತನಾಡಿದ ಅವರು, ಲಿಂಗಾಯತ, ದಲಿತ, ಅಲ್ಪಸಂಖ್ಯಾತ ಸಮುದಾಯದವರನ್ನು ಉಪಮುಖ್ಯಮಂತ್ರಿ ಮಾಡಬೇಕೆಂಬ ಮಾತನ್ನು ಪುನರುಚ್ಚಿಸಿದ ಅವರು, ಈ ಹಿಂದೆ ಬಿಜೆಪಿಯಲ್ಲಿ ಇಂತಹ ಪ್ರಯೋಗ ಮಾಡಿದ ಉದಾಹರಣೆಗಳಿವೆ. ಹಾಗಂತ ಡಿಸಿಎಂ ಮಾಡಿದ ತಕ್ಷಣ ಬೇರೆ ಯಾವ ಸೌಲಭ್ಯಗಳು ಸಿಗಲ್ಲ. ಆದರೆ, ಆಯಾ ಸಮುದಾಯದ ಜನರಲ್ಲಿ ಪ್ರಾತಿನಿಧ್ಯ ದೊರಕಿದೆಂಬ ಸಮಾಧಾನ ಇರುತ್ತದೆ. ಆ ಮೂಲಕ ಆ ಸಮುದಾಯಗಳ ಪ್ರೀತಿಗಳಿಸಿಕೊಳ್ಳಲು ಇದೊಂದು ಉತ್ತಮ ಸಾಧನೆ ಎಂಬುವುದು ನನ್ನ ಭಾವನೆ. ಇದಕ್ಕೆ ಬಹುತೇಕ ಸಚಿವರ ಸಹಮತವಿದೆ. ಆದರೆ, ಅಂತಿಮವಾಗಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ ಎಂದು ಸ್ಪಷ್ಟಪಡಿಸಿದರು.

ಗ್ಯಾರಂಟಿ ಯೋಜನೆಗಳಿಗೆ ಅಪಸ್ವರ ಇಲ್ಲ:

ಕೈ ಶಾಸಕರೇ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳಿಗೆ ಅಪಸ್ವರ ಆರಂಭಿಸಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇದೆಲ್ಲವು ಮಾಧ್ಯಮಗಳ ಸೃಷ್ಟಿ ಮಾತ್ರ. ಕ್ಯಾಬಿನೆಟ್‌ನಲ್ಲಿಯೂ ಸಹ ಈ ಕುರಿತು ಚರ್ಚೆಯಾಗಿಲ್ಲ. ಮುಖ್ಯಮಂತ್ರಿಗಳೇ ಸಹ ಗ್ಯಾರಂಟಿ ನಿಲ್ಲಿಸುವುದಿಲ್ಲ ಎಂದಿದ್ದಾರೆ. ಬಡವರಿಗೆ ನೀಡಿದ ಸೌಲಭ್ಯಗಳು ಕುಂಠಿತ ಆಗುವುದಿಲ್ಲ ಕಡಿತ ಆಗುವುದಿಲ್ಲ ಎಂದು ತಿಳಿಸಿದರು.

ಮಾನವ ಕುಲ ತಲೆತಗ್ಗಿಸುವಂತಹ ಪ್ರಕರಣ:

ಅಸಹಜ ಲೈಂಗಿಕ ಪ್ರಕರಣದಡಿ ಬಂಧನವಾಗಿರುವ ಎಂಎಲ್ಸಿ ಸೂರಜ್ ರೇವಣ್ಣ ಪ್ರಕರಣದ ಕುರಿತು ಮಾತನಾಡಿದ ಸಚಿವರು, 377ರಲ್ಲಿ ಏನಿದೆ. ಕಾನೂನಾತ್ಮಕವಾಗಿ ಏನು ನಡೆಯಬೇಕು ಅದು ನಡೆಯುತ್ತದೆ. ಇದರಲ್ಲಿ ಯಾರದೂ ಹಸ್ತಕ್ಷೇಪ ಒತ್ತಡ ಹಾಕಲು ನಾವು ಬಿಡುವುದಿಲ್ಲ. ತನಿಖಾಧಿಕಾರಿಗಳು ಸ್ವತಂತ್ರರಿದ್ದಾರೆ. ಇಂತಹ ಪ್ರಕರಣದಿಂದ ಹಿರಿಯರಾದ ದೇವೆಗೌಡರಿಗೆ ಈ ಇಳಿ ವಯಸ್ಸಿನಲ್ಲಿ ಮಾನಸಿಕವಾಗಿ ಹಿಂಸೆ ಆಗುತ್ತಿರುವುದು ನೋವಿನ ವಿಷಯ ಎಂದರು.

ಹಾಸನ ಜಿಲ್ಲೆಯಲ್ಲಿ ನಡೆಯುತ್ತಿರುವ ಘಟನೆ ನಿಜಕ್ಕೂ ಮಾನವ ಕುಲ ತಲೆ ತಗ್ಗಿಸುವಂತಾಗಿದೆ. ನಾನು ಉಸ್ತುವಾರಿಯಾದ ನಂತರ ಅಲ್ಲಿನ ಸಂತ್ರಸ್ತರು ಧೈರ್ಯದಿಂದ ಬಂದು ತಮಗಾದ ಅನ್ಯಾಯ ಹೇಳುತ್ತಿದ್ದಾರೆ. ಅದರ ಪರಿಣಾಮ ತಪ್ಪಿತಸ್ಥರಿಗೆ ಶಿಕ್ಷೆ ಕೊಡುವ ಪ್ರಕ್ರಿಯೆ ಆರಂಭಗೊಂಡಿದೆ. ಅಲ್ಲಿ ಬಹಳಷ್ಟು ವರ್ಷಗಳಿಂದ ಇಂತಹ ಪ್ರಕರಣಗಳು ನಿರಂತರವಾಗಿ ನಡೆದುಕೊಂಡು ಬಂದಿವೆ. ಇದೀಗ ಕಾನೂನು ತನ್ನ ಕೆಲಸ ಮುಂದುವರಿಸಿದೆ ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ