ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಹಾಲಪ್ಪ ಆಚಾರ
ಈ ತಾಲೂಕು ಬಹಳ ಎತ್ತರಕ್ಕಿದೆ, ಸತ್ಯಹರಿಶ್ಚಂದ್ರ ಬಂದರೂ ನೀರು ತರಲು ಆಗುವುದಿಲ್ಲ ಎಂದು ಈ ಮಾಜಿ ಸಚಿವ ರಾಯರಡ್ಡಿ ಹೇಳಿದ್ದರೂ ನಾನು ಸಚಿವನಿದ್ದಾಗ ಹೇಗಾದರೂ ಮಾಡಿ ತಾಲೂಕಿನ ಕೆರೆಗಳಿಗೆ ಕೃಷ್ಣೆಯ ನೀರು ತುಂಬಿಸಿದ ತೃಪ್ತಿ ನನಗಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.
ತಾಲೂಕಿನ ತರಲಕಟ್ಟಿ ಗ್ರಾಮದ ಕೆರೆಗೆ ಕೃಷ್ಣಾ ನದಿ ನೀರು ಬಂದು ತುಂಬಿದ ಹಿನ್ನೆಲೆಯಲ್ಲಿ ಮಂಗಳವಾರ ರೈತರು ಆಯೋಜಿಸಿದ್ದ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಮಾತನಾಡಿದ ಅವರು, ಬೇವೂರು ಗ್ರಾಮದಲ್ಲಿ ಕೃಷ್ಣಾ ಬಿ ಸ್ಕೀಂ ಯೋಜನೆಗೆ ಅಡಿಗಲ್ಲು ಹಾಕಿದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಅಡಿಗಲ್ಲು ಅಲ್ಲ ಅಡ್ಡಗಾಲು ಎಂದು ಟೀಕಿಸಿದರೂ ನಾನು ನೀರು ತಂದು ತುಂಬಿಸಲು ಹೇಗೆ ಸಾಧ್ಯವಾಯಿತು. ಇಚ್ಛಾಶಕ್ತಿ ಇದ್ದರೆ ಏನೆಲ್ಲ ಮಾಡಲು ಸಾಧ್ಯ ಎಂದರು.ಈ ಕ್ಷೇತ್ರದಲ್ಲಿ ೨೦ವರ್ಷ ಆಡಳಿತ ನಡೆಸಿದವರು ಅಕ್ಕಪಕ್ಕದಲ್ಲಿರುವ ತುಂಗೆ, ಕೃಷ್ಣೆಯಿಂದ ನೀರು ತಂದು ಎಂದೂ ಈ ತಾಲೂಕನ್ನುನೀರಾವರಿಯನ್ನಾಗಿ ಮಾಡಬಹುದಿತ್ತು. ಆದರೆ ರೈತರ ಪರ ಕಾಳಜಿ ಇಲ್ಲದಿರುವುದಕ್ಕೆ ಕೆರೆ ನಿರ್ಮಾಣವಾಗಲಿ, ಕೆರೆಗೆ ನೀರು ತುಂಬಿಸುವ ಯೋಜನೆಯಾಗಲಿ ಮಾಡಲಿಲ್ಲ. ನಾನು ಅಧಿಕಾರಕ್ಕಾಗಿ ರಾಜಕಾರಣ ಮಾಡಿಲ್ಲ. ಜನತೆಯ ಆಶೋತ್ತರಕ್ಕೆ ಸ್ಪಂದಿಸಿ ಇಚ್ಛಾಶಕ್ತಿಯಿಂದ ಕೃಷ್ಣೆಯ ನೀರನ್ನು ತಂದು ಕೆರೆ ತುಂಬಿಸಲು ಕ್ಷೇತ್ರದ ಜನರ ಸಹಕಾರದಿಂದ ಸಾಧ್ಯವಾಯಿತು ಎಂದು ಶಾಸಕ ಬಸವರಾಜ ರಾಯರಡ್ಡಿ ವಿರುದ್ದ ಹರಿಹಾಯ್ದರು.
ಕಲಾವಿದ ಶ್ರೀಕಾಂತಗೌಡ ಪಾಟೀಲ, ವೀರಣ್ಣ ಹುಬ್ಬಳ್ಳಿ, ಹನುಮಂತ ಕನಕಗಿರಿ, ಶರಣಪ್ಪ ಹೊಸ್ಕೇರಿ, ಶಂಕ್ರಪ್ಪ ಸುರಪುರ, ಅಯ್ಯನಗೌಡ ಕೆಂಚಮ್ಮಮನವರ ಮಾತನಾಡಿದರು.