ಕನ್ನಡಪ್ರಭ ವಾರ್ತೆ ಹೊಸದುರ್ಗ
ಈ ಹಿಂದೆ ಕುರುಬ ಸಮಾಜದ ಉಮಾದೇವಿ, ಪಾಂಡುರಂಗಪ್ಪ ಅವರನ್ನು ಸೋಲಿಸಿದ್ದೇವೆ ಎಂದು ಸಮಾಜದ ಅಧ್ಯಕ್ಷರೇ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಹಾಗಾದರೆ ಸಮಾಜ ಒಬ್ಬ ವ್ಯಕ್ತಿಯ ಮೇಲೆ ಇದೆಯೇ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯದಲ್ಲಿ ಬೇರೆಯವರಿಗೆ ಮುಂದೆ ಬರಲು ಅವಕಾಶವೇ ಇಲ್ಲವೇ?. ತಾಲೂಕಿನ ಹಳ್ಳಿಗಳಿಗೆ ಶಿವುರವರು ಹೋದಾಗ ಅಹಿತಕರ ಘಟನೆಗಳು ನಡೆದರೆ ನೇರವಾಗಿ ಅವರೆ ಕಾರಣ ಎಂದು ಹೇಳುವ ಮೂಲಕ ನನ್ನನ್ನು ಎಚ್ಚರಿಸಿದ್ದಾರೆ. ನಿಮ್ಮ ಈ ಹೇಳಿಕೆ ಎಷ್ಟರಮಟ್ಟಿಗೆ ಸರಿ. ಕುರುಬ ಸಮಾಜದೊಂದಿಗೆ ಎಂಟು ವರ್ಷಗಳಿಂದ ಜೊತೆಗಿದ್ದೇನೆ. ಅಧ್ಯಕ್ಷರು ಕಾಲಲ್ಲಿ ತೋರಿಸಿದ್ದನ್ನು ತಲೆ ಮೇಲೆ ಹೊತ್ತು ಮಾಡಿದ್ದೇನೆ. ಸಮಾಜದ ವಿರುದ್ಧ ಯಾವೊಂದು ಪದವನ್ನು ಮಾತಾಡಿಲ್ಲ ಹಾಗಾದರೆ ಕುರುಬ ಸಮಾಜದಲ್ಲಿ ಗೋವಿಂದಪ್ಪನವರಿಗೆ ಬಿಟ್ಟು ಬೇರೆಯವರಿಗೆ ರಕ್ಷಣೆ ಇಲ್ಲವೇ ಎಂದು ಅಧ್ಯಕ್ಷರನ್ನು ಪ್ರಶ್ನಿಸಿದರು.
ನನಗೆ ಕಾಂಗ್ರೆಸ್ ಪಕ್ಷದಲ್ಲಿ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಶಾಸಕರಿಗೆ ನೇರವಾಗಿಯೇ ಹೇಳಿ ಹೊರ ಬಂದಿದ್ದೇನೆ. ನನ್ನ ಬಗ್ಗೆ ಸಾಕಷ್ಟು ಮಾತನಾಡಿದರು, ನೋವುಗಳನ್ನು ನುಂಗಿಕೊಂಡು ಬಂದಿದ್ದೇನೆ. ಒಬ್ಬ ವ್ಯಕ್ತಿಯ ಬಗ್ಗೆ ಮಾತನಾಡಿದ್ದಕ್ಕೆ ಸಮಾಜಕ್ಕೆ ಎಳೆದುಕೊಂಡು ಬಂದಿರುವುದು ಎತ್ತರ ಮಟ್ಟಿಗೆ ಸರಿ? ನಾನು ಕೂಡ ಸಮಾಜದ ವ್ಯಕ್ತಿ ಅಲ್ಲವೇ? ನಾನೆಂದಿಗೂ ಸಮಾಜ ಒಡೆಯುವ ಕೆಲಸ ಮಾಡುವುದಿಲ್ಲ ಎಂದರು.ಚಿತ್ರದುರ್ಗ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರವಿಕುಮಾರ್ ಹೇಳಿಕೆಗೆ ಪ್ರತಿಕ್ರಿಸಿದ ಅವರು, ಬಿಜೆಪಿ ಪಕ್ಷದಿಂದಲೇ ಸಕ್ರಿಯ ಸದಸ್ಯತ್ವ ಮಾಡಿರುವುದಕ್ಕೆ ಗುರುತಿನ ಚೀಟಿ ನೀಡಿದ್ದಾರೆ. ಬಿಜೆಪಿಗೆ 1309 ಜನರನ್ನು ಸದಸ್ಯತ್ವ ಮಾಡಿಸಿದ್ದೇನೆ. ಈ ಹಿಂದೆ ನಿಮ್ಮನ್ನು ಕಾರ್ಯದರ್ಶಿ ಸ್ಥಾನದಿಂದ ಕಿತ್ತಾಕಲಾಗಿತ್ತು. ಇದೀಗ ನಿಮಗೆ ಯಾವ ಮಾನದಂಡದ ಮೇಲೆ ಉಪಾಧ್ಯಕ್ಷ ಸ್ಥಾನ ಕೊಟ್ಟಿದ್ದಾರೋ ಗೊತ್ತಿಲ್ಲ. 2008 ರಿಂದಲೂ ಬಿಜೆಪಿ ಪಕ್ಷದಲ್ಲಿದ್ದೆ. 2018ರಲ್ಲಿ ಲಿಂಗಮೂರ್ತಿಯವರಿಗೆ ಟಿಕೆಟ್ ಸಿಗದಿದ್ದ ಕಾರಣಕ್ಕೆ ಪಕ್ಷ ತೊರದಿದ್ದೆ. ಮತ್ತೆ ಬಂದಿದ್ದೇನೆ. ಪಕ್ಷದ ಸೇವೆ ಮಾಡಲು ಸಾಮಾನ್ಯ ಕಾರ್ಯಕರ್ತನಾಗಿದ್ದರೆ ಸಾಕು. ರವಿಕುಮಾರ್ ಸಕ್ರಿಯ ಸದಸ್ಯರೇ ಅಥವಾ ಇಲ್ಲವೇ ಎಂಬುದನ್ನ ಮೊದಲು ತೋರಿಸಲಿ. ನೀವೆಷ್ಟು ಜನರನ್ನು ಸದಸ್ಯರನ್ನಾಗಿ ಮಾಡಿದ್ದೀರಿ ಎಂದು ಪ್ರಶ್ನಿಸಿದರು.