ಚಿತ್ರದುರ್ಗ: ಶಾಸಕ ಎಂ.ಚಂದ್ರಪ್ಪ ಅವರ ಪುತ್ರ ರಘು ಚಂದನ್‌ಗೆ ಯಾವುದೇ ಬಗೆಯ ಟಿಕೆಟ್ ಭರವಸೆ ನೀಡಿಲ್ಲ ಮಾಜಿ ಸಚಿವ ಹಾಗೂ ಚಿತ್ರದುರ್ಗ ಲೋಕಸಭೆ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಹೇಳಿದರು.
ರಾಜ್ಯ ರಾಜಕಾರಣದಲ್ಲಿ ಮುಂದುವರಿಯುವ ಹಿನ್ನಲೆ ಎ.ನಾರಾಯಣಸ್ವಾಮಿ ಚುನಾವಣಾ ಕಣದಿಂದ ಹಿಂದೆ ಸರಿದರು. ಹಾಗಾಗಿ ಪಕ್ಷ ನನ್ನತ್ತ ನೋಡಿತು. ಬಿಜೆಪಿ ಪಕ್ಷವನ್ನು ನಾನು ತಾಯಿ ಸ್ಥಾನದಲ್ಲಿ ನೋಡುತ್ತೇನೆ. ನಾವೆಲ್ಲರೂ ಸೇರಿ ಪ್ರಾಮಾಣಿಕವಾಗಿ ಚುನಾವಣೆ ಮಾಡಬೇಕು ಎಂದರು.
ಇಂದು ಮಾಜಿ ಪ್ರಧಾನಿ ದೇವೇಗೌಡರು ಬಿಜೆಪಿ, ಜೆಡಿಎಸ್ ಪಕ್ಷದ ಸಭೆ ನಡೆಸಿದ್ದಾರೆ. ಎರಡು ಪಕ್ಷದ ಕಾರ್ಯಕರ್ತರು ಹಾಲು-ಜೇನಿನಂತೆ ಬೆರೆತು ಚುನಾವಣೆ ನಡೆಸುವಂತೆ ಮನವಿ ಮಾಡಿದ್ದಾರೆ. ರಘುಚಂದನ್ ಬೆಂಬಲಿಗರ ಗಲಾಟೆಯ ಪಕ್ಷದ ಹಿರಿಯರು ಗಮನಿಸುತ್ತಾರೆ. ಬಿ.ಎಸ್.ಯಡಿಯೂರಪ್ಪ ನನ್ನಂತಹವರ ನೂರಾರು ಜನರ ಬೆಳೆಸಿದ್ದಾರೆ. ಅವರನ್ನು ಬ್ಲಾಕ್ ಮೇಲ್ ಮಾಡಲು ಸಾಧ್ಯವಿಲ್ಲವೆಂದು ಕಾರಜೋಳ ಹೇಳಿದರು.