ರೈತರ ಸಂಕಷ್ಟ ಗೇಲಿ ಮಾಡುವ ಜಾಯಮಾನವಿಲ್ಲ: ಶಾಸಕ ಅಲ್ಲಂಪ್ರಭು

KannadaprabhaNewsNetwork |  
Published : Aug 27, 2026, 01:30 AM IST
ಫೋಟೋ- ಅಲ್ಲಂ 1 ಮತ್ತು ಅಲ್ಲಂ 2 | Kannada Prabha

ಸಾರಾಂಶ

ಇತ್ತೀಚೆಗೆ ನಡೆದ ಮುಂಗಾರು ಅಧಿವೇಶನದಲ್ಲಿ ರೈತರ ಸಮಸ್ಯೆ ಬಗ್ಗೆ ಚರ್ಚಿಸುವ ಕುರಿತು ತಮ್ಮ ಭಾವುಕ ಮಾತನ್ನೇ ನಾಟಕವೆಂದು ಗೇಲಿ ಮಾಡಿರುವ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್‌ ರೇವೂರ್‌ ಅವರಿಗೆ ಕಲಬುರಗಿ ಹಾಲಿ ಶಾಸಕ ಅಲ್ಲಂಪ್ರಭು ಪಾಟೀಲ್‌ ತಿರುಗೇಟು ನೀಡಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ.ಇತ್ತೀಚೆಗೆ ನಡೆದ ಮುಂಗಾರು ಅಧಿವೇಶನದಲ್ಲಿ ರೈತರ ಸಮಸ್ಯೆ ಬಗ್ಗೆ ಚರ್ಚಿಸುವ ಕುರಿತು ತಮ್ಮ ಭಾವುಕ ಮಾತನ್ನೇ ನಾಟಕವೆಂದು ಗೇಲಿ ಮಾಡಿರುವ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್‌ ರೇವೂರ್‌ ಅವರಿಗೆ ಕಲಬುರಗಿ ಹಾಲಿ ಶಾಸಕ ಅಲ್ಲಂಪ್ರಭು ಪಾಟೀಲ್‌ ತಿರುಗೇಟು ನೀಡಿದರು.ಕಲಬುರಗಿಯಲ್ಲಿ ಬರ ಬಿದ್ದಿದೆ, ಅನ್ನದಾತನ ಗೋಳು ಕೇಳೋರಿಲ್ಲ, ಸಚಿವ ನಾಗೇಂದ್ರ ಪ್ರಕರಣ ಮುಂದಿಟ್ಟು ಸದನದ ಚರ್ಚೆ ತಡೆಯಬೇಡಿ. ರೈತರ ಬಗ್ಗೆ ಚರ್ಚಿಸೋಣ ಬನ್ನಿರೆಂದು ನಾನು ಎಲ್ಲರನ್ನು ಕರೆದಿದ್ದೆ. ಅದೇ ಮಾತನ್ನೇ ನಮ್ಮ ರೇವೂರ್‌ ಗೌಡರು ಗೇಲಿ ಮಾಡಿ ಸದನದಲ್ಲಿ ನಾನು ನಾಟಕ ಮಾಡಿದ್ದೇನೆ ಎಂದಿದ್ದಾರೆ. ರೈತರ ಬಗ್ಗೆ ನಾಟಕ ಮಾಡುವ ಜಾಯಮಾನ ನನ್ನದಲ್ಲ ಎಂದು ಅಲ್ಲಂಪ್ರಭು ಸುದ್ದಿಗೋಷ್ಠಿಯಲ್ಲಿ ಖಾರವಾಗಿ ಪ್ರತ್ಯುತ್ತರಿಸಿದರು.ತಾವು ಶಾಸಕರಾಗಿ ಬಂದ ನಂತರ 3 ವರ್ಷಗಳಲ್ಲಿ ಬೆಳೆಹಾನಿ, ಬೆಳೆವಿಮೆ, ಪರಿಹಾರದಂತಹ ಪ್ರಕರಣಗಳಲ್ಲಿ ಕಲುಬುರಗಿಯ 90 ಸಾವಿರ ರೈತರಿಗ 130 ಕೋಟಿ ರು. ಪರಿಹಾರ ಪಾವತಿಯಾಗಿದೆ. ಉಚಿತ ಬೀಜ, ಬೀಜಗಳ ಕಿರುಚೀಲ, ಕೃಷಿ ಯಂತ್ರೋಪಕರಣಗಳು, ಹನಿ ನೀರಾವರಿ, ತಂತುರು ನೀರಾವರಿಯಂತಹ ಸವಲತ್ತುಗಳು ನೂರಾರು ರೈತರಿಗೆ ದೊರಕುವಂತೆ ಮಾಡಿದ್ದೇನೆ ಎಂದು ಹೇಳಿದರು.ಪಟ್ಟಣದಲ್ಲಿ 25 ಎಕರೆಯಲ್ಲಿ ಕೆರೆ ನಿರ್ಮಿಸಿ ನೀರು ನಿಲ್ಲಿಸುವ ಪ್ರಯತ್ನ ಮಾಡಲಾಗಿದೆ. ದತ್ತಾತ್ರೇಯ ಪಾಟೀಲ್ ರೇವೂರ್‌ ಅವರಿದ್ದಾಗ 2018- 19 ರಿಂದ 2020 21ರ 3 ವರ್ಷದಲ್ಲಿ ರೈತರಿಗೆ 10. 84 ಕೋಟಿ ಮಾತ್ರ ಪಾವತಿಯಾಗಿದೆ. ತಮ್ಮ ಶಾಸಕ ಅವದಿಯಲ್ಲಿ 130 ಕೋಟಿ ರು ಪಾತಿಯಾಗಿದೆ ಎಂದರು.ಮಾಜಿ ಶಾಸಕರಿಗೆ ಸವಾಲು: ಸಣ್ಣ ನೀರಾವರಿ ಇಲಾಖೆಯಡಿಯಲ್ಲಿ 8 ಕೋಟಿ ರು ವೆಚ್ಚದಲ್ಲಿ ಅಣೆಕಟ್ಟೆ, 6.14 ಕೋಟಿ ರು ವೆಚ್ಚದಲ್ಲಿ ಕೆರೆ, 1. 2 ಕೋಟಿ ರು ವೆಚ್ಚದಲ್ಲಿ ತೆರೆದ ಬಾವಿ, ಹುಣಸಿಹಡಗೀಲ್‌ ಕೆರೆ ಅಭಿವೃದ್ಧಿ ಕಾಮಗಾರಿಗೆ 1 ಕೋಟಿ ರು, ರೈತರ ಜಮೀನಿಗೆ ನೀರಾವರಿಗೆ 1 ಕೋಟಿ ರು, ಗಂಗಾ ಕಲ್ಯಾಣದಲ್ಲಿ 40 ರೈತರಿಗೆ ಕೊಳವೆ ಬಾವಿ ಸಹಿತ 3 ವರ್ಷದಲ್ಲಿ ಸಾಕಷ್ಟು ರೈತರ ಪರ ಕೆಲಸ ಮಾಡಿದ್ದೇನೆ. ಆದರೆ ದತ್ತಾತ್ರೇಯ ರೇವೂರ್‌ ಮಾಡಿದ ಸಾಧನೆ ತೆರೆದಿಡಲಿ ಎಂದು ಶಾಸಕ ಅಲ್ಲಂಪ್ರಭು ಪಾಟೀಲ್‌ ಸವಾಲು ಹಾಕಿದರು.

ಕಾಂಗ್ರೆಸ್‌ ಪಕ್ಷಕ್ಕೆ ಸಿಎ ನಿವೇಶನ ನೀಡಿರುವ ಬಗ್ಗೆ ಮಾತನಾಡಿದ ಶಾಸಕ, ಹಿಂದೆ ಬಿಜೆಪಿ ಸರ್ಕಾರದಲ್ಲಿ ಸಂಘ ಪರಿವಾರದವರಿಗೆ, ಸಂಸ್ಥೆಗಳಿಗೆ ನಗರದಲ್ಲೇ 3 ನಿವೇಶನ, ಸಿರಸಗಿ ಬಲಿ 7 ಎಕರೆ ಜಾಗ ನೀಡಲಾಗಿದೆ. ಇದೆಲ್ಲವೂ ಗೊತ್ತಿರುವಾಗ ಕಾಂಗ್ರೆಸ್‌ ಭವನದ ಸಿಎ ಸೈಟ್‌ ಬಗ್ಗೆ ಅವರು ಆಕ್ಷೇಪಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲ ಸಮುದಾಯದವರಿಗೂ ಭವನಕ್ಕೆ ನಿವೇಶನ ನೀಡುತ್ತಿದ್ದಾರೆ. ಇದೊಂದು ಜನೋಪಯೋಗಿ ಕೆಲಸ ಎಂದು ಶಾಸಕ ಅಲ್ಲಂಪ್ರಭು ಪಾಟೀಲ್‌ ಹೇಳಿದರು.

ಮೇಯರ್‌ ವರ್ಷಾ ಜಾನೆ, ದಶರಥ ಬಾಬೂ ಒಂಟಿ, ಪ್ರಶಾಂತ ಕೋರಳ್ಳಿ, ಸಂಗಮೇಶ ನಾಗನಳ್ಳಿ, ಭೀಮರಾಯಗೌಡ ಮೇಳಕುಂದಾ, ಸಂತೋಷ ಪಾಟೀಲ್‌ ದಣ್ಣೂರ, ಶಿವಕುಮಾರ್‌ ಬಾಳಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಂತ್ರಿ ಪಟ್ಟಕ್ಕಾಗಿ ರೈತರಿಗೆ ಮಧು, ಎಸ್ಸೆಸ್ಸೆಂ ಅನ್ಯಾಯ
ಗುಟ್ಕಾ, ಪಾನ್ ಮಸಾಲ ನಿಷೇಧ ವಿರೋಧಿಸಿ ಹೋರಾಟ ಶುರು