ಕನ್ನಡ್ರಭ ವಾರ್ತೆ ವಿಜಯಪುರ
ನಗರದಲ್ಲಿ ಕನ್ಹೇರಿ ಕಾಡಸಿದ್ದೇಶ್ವರ ಶ್ರೀಗಳ ಹೇಳಿಕೆ ಕುರಿತು ಸೋಮವಾರ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಸ್ವಾಮೀಜಿಯವರು ಬರ್ಮೊಡಾ ಹಾಕೋತಾರೋ ಅಂತಾರಲ್ಲ ಅವರು, ಅವರ ಕಣ್ಣಿಗೆ ಕಂಡ ಯಾವ ಸ್ವಾಮೀಜಿ ಹಾಕಿದ್ದಾರೆ? ಅವರೇ ಹೇಳಬೇಕು. ಎಲ್ಲೋ ಒಬ್ಬ ಸ್ವಾಮೀಜಿ ಹಾಗೇ ಕಂಡಿದ್ದಕ್ಕೆ ಎಲ್ಲರನ್ನು ದೂಷಿಸುವುದು ಸರಿಯಲ್ಲ. ಅವರ ಹೇಳಿಕೆ ಬಸವ ತಾಲಿಬಾನಿಗಳು ಎಂದಿದ್ದು ನಾನು ಒಪ್ಪಲ್ಲ. ಅವರು ಮಾತನಾಡಿರುವುದು ಎಲ್ಲೋ ಸರಿ ಇಲ್ಲ ಎಂದರು.
ಸ್ವಾಮೀಜಿಗಳು ರಾಜಕಾರಣದ ಬಗ್ಗೆ ಮಾತನಾಡುವ ವಿಚಾರದ ಬಗ್ಗೆ ಎಸ್.ಟಿ.ಸೋಮಶೇಖರ ಒಂದು ಮಾತನ್ನು ಹೇಳಿದ್ದಾರೆ. ಈ ಹಿಂದಿನಿಂದಲೂ 20, 30 ವರ್ಷಗಳಿಂದಲೂ ಆಯಾ ಸಮಾಜದ ಸ್ವಾಮೀಜಿಗಳು ಮಾತನಾಡಿಕೊಂಡು ಬಂದಿದ್ದಾರೆ. ಮಾತನಾಡಿದ್ದರೆ ತಪ್ಪೇನು ಎಂದು ಸೋಮಶೇಖರ ಅವರು ಹೇಳಿದ್ದಾರೆ. ಮುಖ್ಯಮಂತ್ರಿಯಾಗಲಿ, ಉಪ ಮುಖ್ಯಮಂತ್ರಿಯಾಗಲಿ ಅವರಿಗೆ ಆಶೀರ್ವಾದ ಮಾಡಿಕೊಂಡು ಹೊರಟಿದ್ದೇವೆ. ನಮ್ಮ ರಾಜ್ಯ ಅಭಿವೃದ್ಧಿಯಾಗಲಿ, ಉತ್ತರ ಕರ್ನಾಟಕದ ಅಭಿವೃದ್ಧಿ ಆಗಲಿ ಎಂಬುದು ನಮ್ಮ ಆಶಯ. ಡಿ.ಕೆ.ಶಿವಕುಮಾರ ಸಿಎಂ ಆದರೆ ಉತ್ತರ ಕರ್ನಾಟಕದ ಅಭಿವೃದ್ಧಿ ಆಗುತ್ತದೆ. ಈಗಿರುವ ಸಿಎಂ ನಮಗೆ ಹಚ್ಚಿಕೊಳ್ಳಲ್ಲ. ಡಿ.ಕೆ.ಶಿವಕುಮಾರ ಸಿಎಂ ಆದರೆ ಅವರು ಜನರನ್ನು ಹಚ್ಚಿಕೊಳ್ಳುತ್ತಾರೆ. ಉತ್ತರ ಕರ್ನಾಟಕದ ಅಭಿವೃದ್ಧಿ ಮಾಡುತ್ತಾರೆ ಎಂದು ಮನಗೂಳಿ ಸಂಗನಬಸವ ಸ್ವಾಮೀಜಿ ಹೇಳಿದರು.ಉತ್ತರಕ್ಕೆ ಪ್ರಾಮುಖ್ಯತೆ ಕೊಡಿ:
ಮೊದಲಿನಿಂದಲೂ ಎಲ್ಲ ವಿಚಾರಗಳಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಲೇ ಬಂದಿದೆ. ದಕ್ಷಿಣ ಭಾಗವನ್ನು ಅಭಿವೃದ್ಧಿ ಮಾಡಿದಂತೆ ಉತ್ತರದ ಭಾಗ ಅಭಿವೃದ್ಧಿ ಮಾಡಿಲ್ಲ. ಅಲ್ಲಿ ಕೊಟ್ಟಷ್ಟು ಪ್ರಾಮುಖ್ಯತೆ ಇಲ್ಲಿ ಕೊಡುತ್ತಿಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವುದೇ ಸರ್ಕಾರಗಳು ಸಹ ಉತ್ತರ ಕರ್ನಾಟಕಕ್ಕೆ ನ್ಯಾಯ ಕೊಟ್ಟಿಲ್ಲ. ಚಳಿಗಾಲದ ಅಧಿವೇಶನ ಹೆಸರಿಗೆ ಮಾತ್ರ ಮಾಡುತ್ತಿದ್ದು, ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳೇ ಚರ್ಚೆಗಳಾಗೋದಿಲ್ಲ. ಅತಿವೃಷ್ಟಿ ಅಥವಾ ಅನಾವೃಷ್ಟಿಗೆ ಸಿಲುಕಿದ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಕಲಬುರಗಿಯಂತಹ ಜಿಲ್ಲೆಗಳಿಗೆ ನ್ಯಾಯವೇ ಸಿಗುತ್ತಿಲ್ಲ. ಈ ಬಾರಿಯಾದರೂ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.