ನನಗೆ ಇಬ್ಬಿಬ್ಬರು, ಮೂವರು ಹೆಂಡ್ತಿಯರಿಲ್ಲ, ನಾನು ಯಾರ ಜೊತೆನೂ ಸಂಬಂಧ ಇಟ್ಟುಕೊಂಡಿಲ್ಲ: ಶಾಸಕ

KannadaprabhaNewsNetwork |  
Published : Sep 06, 2025, 01:00 AM ISTUpdated : Sep 06, 2025, 12:47 PM IST
km uday

ಸಾರಾಂಶ

ನನಗೆ ಬೇರೆಯವರ ತರ ಇಬ್ಬರು, ಮೂವರು ಹೆಂಡ್ತಿಯರಿಲ್ಲ. ನಾನು ಯಾರ ಜೊತೆಗೂ ಸಂಬಂಧ ಇಟ್ಟುಕೊಂಡು ಹೈಟೆಕ್ 5 ಸ್ಟಾರ್ ಹೋಟೆಲ್ ನಲ್ಲಿ ಕಾಲ ಕಳಿಯುತ ಕುಳಿತಿಲ್ಲ. ಇವರು ಏನು ಮಹಾರಾಜ ವಂಶಸ್ಥರಾ? ಇವರಿಗೆ ಯೋಗ್ಯತೆ ಏನಿತ್ತು? 

  ಮದ್ದೂರು : ನನಗೆ ಇಬ್ಬಿಬ್ಬರು ಮೂವರೂ ಹೆಂಡ್ತಿಯರಿಲ್ಲ. ನಾನು ಯಾರ ಜೊತೆನೂ ಸಂಬಂಧ ಇಟ್ಟುಕೊಂಡು ಹೈಟೆಕ್ 5 ಸ್ಟಾರ್ ಹೋಟೆಲ್ ನಲ್ಲಿ ಕುಳಿತುಕೊಂಡಿಲ್ಲ. ನಾನು ಕ್ಷೇತ್ರದಲ್ಲೇ ಇದ್ದು ಪ್ರತಿನಿತ್ಯ ಜನ ಸೇವೆಯಲ್ಲಿ ತೊಡಗಿದ್ದೇನೆ. ಎಲ್ಲಿಯೂ ಓಡಿ ಹೋಗಿಲ್ಲ ಎಂದು ಶಾಸಕ ಕೆ.ಎಂ.ಉದಯ್ ಪರೋಕ್ಷವಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ದ ಕಿಡಿಕಾರಿದರು.

ಸಾಮಾಜಿಕ ಜಾಲತಾಣಗಳಲ್ಲಿ ಶಾಸಕ ಕೆ.ಎಂ.ಉದಯ್ ಅವರು ಶಾಸಕ ವೀರೇಂದ್ರ ಪಪ್ಪಿ ಅವರ ಮೇಲೆ ನಡೆದ ಇಡಿ ದಾಳಿಯಿಂದ ಕ್ಷೇತ್ರದಲ್ಲಿ ಕಾಣೆಯಾಗಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕೆ ಅಭಿಮಾನಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿ ಅವಹೇಳನಕಾರಿ ಹೇಳಿಕೆ ನೀಡಿದ್ದ ಹಿನ್ನೆಲೆ ಶಾಸಕರು ಸುದ್ಧಿಗಾರರೊಂದಿಗೆ ತಿರುಗೇಟು ನೀಡಿದರು.

ನಾನು ಕಾಣೆಯಾಗಿದ್ದೀನಾ ಅಥವಾ ಅವರು ಲೀಡರ್ ಕಾಣಿಯಾಗಿದ್ದಾರಾ ಎಂಬುದು ಕ್ಷೇತ್ರದ ಜನತೆಗೆ ಗೊತ್ತಿದೆ. ನಮ್ಮ ಸರ್ಕಾರ ಕೇವಲ 2 ವರ್ಷಗಳಲ್ಲಿ 1200 ಕೋಟಿಗೂ ಹೆಚ್ಚಿನ ಅನುದಾನ ಕೊಟ್ಟಿದ್ದು, ರಸ್ತೆ, ಚರಂಡಿ ಸೇರಿ ಅಗತ್ಯ ಸೌಕರ್ಯಗಳೊಂದಿಗೆ ಅಭಿವೃದ್ಧಿ ಕಾಮಗಾರಿಗಳಿಗೆ ನಿತ್ಯ ಚಾಲನೆ ಕೊಡುತ್ತಿದ್ದೇನೆ. ಜನತೆ ಮಧ್ಯೆ ಇದ್ದು ಸೇವೆ ಮಾಡುತ್ತಿದ್ದೇನೆ ಎಂದರು.

ನನಗೆ ಬೇರೆಯವರ ತರ ಇಬ್ಬರು, ಮೂವರು ಹೆಂಡ್ತಿಯರಿಲ್ಲ. ನಾನು ಯಾರ ಜೊತೆಗೂ ಸಂಬಂಧ ಇಟ್ಟುಕೊಂಡು ಹೈಟೆಕ್ 5 ಸ್ಟಾರ್ ಹೋಟೆಲ್ ನಲ್ಲಿ ಕಾಲ ಕಳಿಯುತ ಕುಳಿತಿಲ್ಲ. ಇವರು ಏನು ಮಹಾರಾಜ ವಂಶಸ್ಥರಾ? ಇವರಿಗೆ ಯೋಗ್ಯತೆ ಏನಿತ್ತು? ಇವರ ಆಸ್ತಿ ಎಷ್ಟಿತ್ತು? ಇವಾಗ ಇವರ ಆಸ್ತಿಗಳು ಎಷ್ಟಿವೆ? ಮೂಟೆ ಒತ್ತು, ಗುಂಡಿ ತೆಗೆದು ಸಂಪಾದನೆ ಮಾಡಿದ್ದಾರಾ ಎಂದು ಕೆಂಡಾಮಂಡಲರಾದರು.

ಎರಡೂ ತಿಂಗಳಿಂದ ಅವರ ಲೀಡರ್ (ಎಚ್ಡಿಕೆ) ಎಲ್ಲಿ ಹೋಗಿದ್ದಾರೆ. ಮಂಡ್ಯದಲ್ಲೇ ಕಾಣ್ತಾನೇ ಇಲ್ಲ. ಎರಡು ವರ್ಷದಿಂದ ಕೇಂದ್ರ ಮಂತ್ರಿಯಾಗಿದ್ದರೂ ಮಂಡ್ಯಕ್ಕೆ ಏನು ಕೊಡುಗೆ ನೀಡುತ್ತಿದ್ದಾರೆ. ನಾನು ನಾಲ್ಕು ವರ್ಷಗಳಿಂದ ನನ್ನ ವ್ಯವಹಾರ, ವಹಿವಾಟುಗಳನ್ನು ನಿಲ್ಲಿಸಿ ಬಿಟ್ಟಿದ್ದೀನಿ. ಇವಾಗ ಸಂಪೂರ್ಣವಾಗಿ ಜನ ಸೇವೆ ಮಾಡೋದಕ್ಕೆ ಬಂದಿದ್ದೇವೆ. ಯಾರೋ ಕ್ರಾಸ್ ಬೀಡ್ ಗಳು ಕೆಲಸ ಇಲ್ಲದವರು ಈ ರೀತಿ ಹೇಳುತ್ತಾರೆ. ಅಂತಹ ತಂದೆಗೆ ಹುಟ್ಟಿದ ಮಕ್ಕಳು ಇಂತಹ ಪೋಸ್ಟ್ ಹಾಕುತ್ತಾರೆ ಅಂತ ತೀಷ್ಣವಾಗಿ ಕೇಂದ್ರ ಸಚಿವ ಎಚ್ಡಿಕೆ ಮತ್ತು ಅಭಿಮಾನಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

PREV
Read more Articles on

Recommended Stories

ಬೆಂಗಳೂರು : ದೀಪಾವಳಿ ವೇಳೆ ವಾಯುಮಾಲಿನ್ಯ ಹೆಚ್ಚಾಗಲಿಲ್ಲ, ಭಾರೀ ಇಳಿಕೆ!
ಹೊಸೂರಿಗೆ ಮೆಟ್ರೋ ವಿಸ್ತರಣೆ ಅಸಾಧ್ಯ : ರಾಜ್ಯ ಸರ್ಕಾರಕ್ಕೆ ಬಿಎಂಆರ್‌ಸಿಎಲ್‌ ವರದಿ