ರಾಜಕೀಯದಲ್ಲಿ ನನ್ನನ್ನು ಕಡೆಗಣಿಸುವ ಕಾರ್ಯ ನಡೆಯುತ್ತ ಬಂದಿದೆ: ಸಂಸದ ಜಗದೀಶ ಶೆಟ್ಟರ್

KannadaprabhaNewsNetwork |  
Published : Jul 13, 2026, 01:00 AM IST
ಜಗದೀಶ ಶೆಟ್ಟರ್‌ | Kannada Prabha

ಸಾರಾಂಶ

ನನ್ನ ರಾಜಕೀಯ ರಂಗದಲ್ಲಿ ಸಾಕ್ಷಟು ಏಳು, ಬೀಳು ಎಲ್ಲವನ್ನೂ ಅನುಭವಿಸಿದ್ದೇನೆ. ರಾಜಕೀಯದಲ್ಲಿ ಈಗಲೂ ನನ್ನನ್ನು ಕಡೆಗಣಿಸುವ ಕಾರ್ಯ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ್ ತೇವ್ರ ಬೇಸರ ವ್ಯಕ್ತಪಡಿಸಿದರು.

ಹುಬ್ಬಳ್ಳಿ: ನನ್ನ ರಾಜಕೀಯ ರಂಗದಲ್ಲಿ ಸಾಕ್ಷಟು ಏಳು, ಬೀಳು ಎಲ್ಲವನ್ನೂ ಅನುಭವಿಸಿದ್ದೇನೆ. ರಾಜಕೀಯದಲ್ಲಿ ಈಗಲೂ ನನ್ನನ್ನು ಕಡೆಗಣಿಸುವ ಕಾರ್ಯ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ್ ತೇವ್ರ ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದಿಂದ ಭಾನುವಾರ ಇಲ್ಲಿನ ಲಿಂಗರಾಜ ನಗರದಲ್ಲಿರುವ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ರಾಜಕೀಯ ಪಕ್ಷ ನನ್ನನ್ನು ಬಳಸಿಕೊಂಡು ಬೆಳೆಯಿತು. ಬಳಿಕ ನನ್ನನ್ನೇ ಕಡೆಗಣಿಸುವ ಕಾರ್ಯ ಮಾಡಿತು. ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗಲೆಲ್ಲ ಅದನ್ನು ಸವಾಲಾಗಿ ಸ್ವೀಕರಿಸಿ ಮುನ್ನುಗ್ಗುತ್ತಿರುವೆ. ಸಮಾಜ ಬಾಂಧವರ ಆಶೀರ್ವಾದದಿಂದಲೇ ನಾನು ಇಂದು ಈ ಸ್ಥಾನದಲ್ಲಿರುವೆ ಎಂದು ಬಣಜಿಗ ಸಮುದಾಯಕ್ಕೆ ಧನ್ಯವಾದ ಹೇಳಿದರೆ.

ವೀರಶೈವ -ಲಿಂಗಾಯತ ಧರ್ಮವಾಗಲಿ

ಲಿಂಗಾಯತ ಸ್ವತಂತ್ರ್ಯ ಧರ್ಮ ಮಾಡಿ ಹಿಂದುಳಿದ ವರ್ಗಕ್ಕೆ ಸೇರಿಸುವ ಬದಲು ಸಮಗ್ರ ವೀರಶೈವ- ಲಿಂಗಾಯತ ಧರ್ಮವನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಕಾರ್ಯವಾಗಬೇಕು. ಇದಕ್ಕೆಲ್ಲ ಸಮಾಜ ಬಾಂಧವರು ಹೋರಾಡಬೇಕಿದೆ. ಒಂದು ವೇಳೆ ನಾವೆಲ್ಲರೂ ಒಂದಾಗದಿದ್ದರೆ ನಮ್ಮಲ್ಲಿಯೇ ಒಡಕು ಉಂಟುಮಾಡಿ ಬೇರೆಯವರು ಇದರ ಲಾಭ ಪಡೆದುಕೊಳ್ಳಲಿದ್ದಾರೆ ಎಂದು ಎಚ್ಚರಿಸಿದರು.

ವೀರಶೈವ- ಲಿಂಗಾಯತ ಎರಡೂ ಒಂದೇ ಆಗಿದ್ದು, ಕೆಲವರು ಸಮಾಜದಲ್ಲಿ ಗೊಂದಲ ಸೃಷ್ಟಿಸುತ್ತಿರುವುದರಿಂದ ಒಡೆದ ಮನೆಯಂತಾಗಿದೆ. ಇದನ್ನು ಸರಿಪಡಿಸುವ ಕಾರ್ಯ ಸಮಾಜದ ಮಠಾಧೀಶರಿಂದ ನಡೆಯಬೇಕಿದೆ. ವೀರಶೈವ- ಲಿಂಗಾಯತ ಸಮಾಜದ ಮಠಾಧೀಶರು ಒಂದೆಡೆ ಸೇರಿ ಚರ್ಚಿಸಿ ಸಮಸ್ಯೆ ಪರಿಹರಿಸುವ ಕಾರ್ಯ ಮಾಡಬೇಕಿದೆ ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.

ವೀರಶೈವ- ಲಿಂಗಾಯತ ಸಮಾಜ ಬಾಂಧವರು ನಾವೆಲ್ಲರೂ ಒಂದಾಗಿದ್ದೇವೆ. ಆದರೆ, ಕೆಲವರು ನಮ್ಮಲ್ಲಿ ಒಡಕು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ವೀರಶೈವ ಮತ್ತು ಲಿಂಗಾಯತ ಎರಡೂ ಬೇರೆ ಬೇರೆ, ಸ್ವತಂತ್ರ ಧರ್ಮ ಎಂದು ಜನರಲ್ಲಿ ಗೊಂದಲ ಸೃಷ್ಟಿಮೂಡಿಸಲಾಗುತ್ತಿದೆ. ಇದನ್ನು ತಗೆದುಹಾಕುವ ಕೆಲಸವಾಗಬೇಕಿದೆ. ಮೊದಲು ಎಲ್ಲ ಮಠಾಧೀಶರು ಒಂದಾಗಬೇಕಿದೆ. ನಿಮ್ಮಲ್ಲಿರುವ ಸಮಸ್ಯೆಗಳನ್ನು ಕುರಿತು ಚರ್ಚಿಸಿ ಪರಿಹರಿಸಿಕೊಳ್ಳುವಂತಾಗಲಿ ಎಂದರು.ಪಿಆರ್‌ಸಿ ನೀಡುವುದು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರಲ್ಲ: ಶೆಟ್ಟರ

ಹುಬ್ಬಳ್ಳಿ: ಶಾಶ್ವತ ನಿವಾಸ ಪ್ರಮಾಣಪತ್ರ (ಪಿಆರ್‌ಸಿ) ನೀಡುವುದು ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ. ಇದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಸೇರಿದೆ ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿ ನಡೆಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಈ ಹಿಂದೆ ರಾಜ್ಯ ಸರ್ಕಾರಗಳು ಜಾತಿ ಸಮೀಕ್ಷೆ ನಡೆಸಿದ್ದರೂ ಅದಕ್ಕೆ ಸಾಂವಿಧಾನಿಕ ಮಾನ್ಯತೆ ಇಲ್ಲ. ಅದೇ ರೀತಿ ರಾಜ್ಯ ಸರ್ಕಾರ ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವುದು ಕಾನೂನು ಹಾಗೂ ಸಂವಿಧಾನಕ್ಕೆ ವಿರುದ್ಧವಾಗಿದೆ. ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದರೆ ಅಂತಹ ಆದೇಶ ರದ್ದಾಗುವ ಸಾಧ್ಯತೆ ಇದೆ ಎಂದರು.ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು ಬಿಜೆಪಿ ತಮ್ಮ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಇದು ವಿರೋಧ ಪಕ್ಷಗಳು ಆತಂಕದಿಂದ ಸೃಷ್ಟಿಸಲಾಗುತ್ತಿರುವ ಅಪಪ್ರಚಾರವಾಗಿದೆ ಎಂದರು.

ಬಾಂಗ್ಲಾದೇಶಿ ಅಕ್ರಮ ವಲಸಿಗರ ವಿಚಾರದಲ್ಲಿ ರಾಜ್ಯ ಸರ್ಕಾರದ ತುಷ್ಟೀಕರಣ ನೀತಿಯೇ ಸಮಸ್ಯೆಗೆ ಕಾರಣವಾಗಿದೆ. ಪಶ್ಚಿಮ ಬಂಗಾಳದಲ್ಲಿ ಅಕ್ರಮ ವಲಸೆಗೆ ಅವಕಾಶ ನೀಡಿದ ಪರಿಣಾಮ ಅನೇಕರು ದೇಶದೊಳಗೆ ಬಂದಿದ್ದಾರೆ. ಕರ್ನಾಟಕದಲ್ಲಿ ಅಕ್ರಮ ವಲಸಿಗರು ಇದ್ದರೆ ಅದನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವುದು ರಾಜ್ಯದ ಗೃಹ ಇಲಾಖೆಯ ಜವಾಬ್ದಾರಿಯಾಗಿದೆ. ರಾಜ್ಯ ಗೃಹ ಇಲಾಖೆ ಸಮರ್ಥವಾಗಿ ಕಾರ್ಯನಿರ್ವಹಿಸದ ಕಾರಣ ಇಂತಹ ಚಟುವಟಿಕೆ ನಡೆಯುತ್ತಿವೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರ್ಯಾಯ ಬೆಳೆಯಿಂದ ಮಣ್ಣಿನ ಫಲವತ್ತತೆ ಹೆಚ್ಚಳ
ಗದಗ ಜಿಲ್ಲೆಯ 898 ಮಕ್ಕಳಲ್ಲಿ ಅಪೌಷ್ಟಿಕತೆ!