ಹುಬ್ಬಳ್ಳಿ:
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿವೇಶನದ ಸಂದರ್ಭದಲ್ಲಿ ವಿದೇಶ ಪ್ರವಾಸಕ್ಕೆ ಹೋಗುವ ಕುರಿತು ಚರ್ಚೆ ನಡೆಯಿತು. ನೀವೂ ಬನ್ನಿ, ನೀವೂ ಬನ್ನಿ ಎಂದು ಕೆಲವು ಸ್ನೇಹಿತರು ಹೇಳಿದರು. ಆಯಿತು ನೋಡೋಣ ಎಂದಿದ್ದೆ. ಆದರೆ, ವೈಯಕ್ತಿಕ ಹಣದಲ್ಲಿ ಪ್ರವಾಸ ಹೊರಟರೂ ಅದು ಸುದ್ದಿ ಆಗುತ್ತೆ ಎಂದುಕೊಂಡಿರಲಿಲ್ಲ. ಹೀಗಾಗಿ ನಾನು ಪ್ರವಾಸವನ್ನು ರದ್ದು ಮಾಡಿದ್ದೇನೆ. ಉಳಿದವರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.
ರಾಜ್ಯದಲ್ಲಿ ಅಧಿಕಾರ ಹಸ್ತಾಂತರ ವಿಚಾರವಾಗಿ ಎದ್ದಿರುವ ಸುದ್ದಿ ಕೇವಲ ಊಹಾಪೋಹ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಎಲ್ಲ ಸಚಿವ, ಶಾಸಕರೂ ಒಗ್ಗಟ್ಟಾಗಿದ್ದೇವೆ. ಜನ ಸೇವೆಯಲ್ಲಿ ನಮ್ಮನ್ನು ತೊಡಗಿಸಿಕೊಂಡಿದ್ದೇವೆ. ಅಧಿಕಾರ ಹಸ್ತಾಂತರ, ಹಂಚಿಕೆಯ ಬಗ್ಗೆ ಬಹಿರಂಗವಾಗಿ ಮಾತನಾಡದಂತೆ ವರಿಷ್ಠರು ಸೂಚನೆ ನೀಡಿದ್ದಾರೆ. ಅಧಿಕಾರ ಹಸ್ತಾಂತರ, ಬದಲಾವಣೆಯಂತಹ ಸುಳ್ಳು ಸುದ್ದಿಗಳಿಗೆ ಕೇಂದ್ರದ ವರಿಷ್ಠರು ಸ್ಪಷ್ಟನೆ ನೀಡುತ್ತಾರೆ ಎಂದಿರುವ ಅವರು, ನಮ್ಮಲ್ಲಿ ಬಣ ರಾಜಕೀಯ ಇಲ್ಲವೇ ಇಲ್ಲ. ಇರುವುದೊಂದೇ ಅದು ಕಾಂಗ್ರೆಸ್ ಬಣ. ಕಾಂಗ್ರೆಸ್ ರಾಜ್ಯದಲ್ಲಿ ಸದೃಢವಾಗಿದ್ದು, 2028ರಲ್ಲೂ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ನಾನೂ ಪ್ರವಾಸಕ್ಕೆ ಹೋಗುತ್ತಿಲ್ಲ: ಅಬ್ಬಯ್ಯಕೆಲ ಕಮಿಟಿಗಳಲ್ಲಿ ನಿರ್ಧಾರ ಕೈಗೊಂಡು ಅಧ್ಯಯನ ಪ್ರವಾಸಕ್ಕೆ ವಿದೇಶಕ್ಕೆ ಹೋಗುವುದು ವಾಡಿಕೆ. ಆದರೆ, ನಮ್ಮ ಮಂಡಳಿಯಿಂದ ಪ್ರವಾಸಕ್ಕೆ ಹೊರಟಿಲ್ಲ ಎಂದು ಶಾಸಕ, ಸ್ಲಂ ಬೋರ್ಡ್ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಹೇಳಿದರು.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಪದ್ಧತಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಶಾಸಕರು, ಸಚಿವರು ವಿದೇಶಗಳಿಗೆ ಅಧ್ಯಯನ ಪ್ರವಾಸ ಕೈಗೊಳ್ಳುವುದು ಸಾಮಾನ್ಯ. ಅದರಂತೆ ಕೆಲವು ಶಾಸಕರು ವಿದೇಶಕ್ಕೆ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಆದರೆ, ನಾನು ವಿದೇಶ ಪ್ರವಾಸಕ್ಕೆ ತೆರಳುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.ಡಿಕೆಶಿ ದೆಹಲಿ ಭೇಟಿ ಸಹಜ ಪ್ರಕ್ರಿಯೆ