ಬಡ ಜನರಿಗೆ ಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದೇನೆ : ಕಾರ್ಮಿಕ ಸಚಿವ ಸಂತೋಷ್ ಲಾಡ್

KannadaprabhaNewsNetwork |  
Published : Feb 28, 2025, 02:05 AM ISTUpdated : Feb 28, 2025, 11:32 AM IST
ಸಸೆಎಎಎ | Kannada Prabha

ಸಾರಾಂಶ

ಕೆಲಸದ ಒತ್ತಡದಿಂದ ಇಲ್ಲಿವರೆಗೆ ನನ್ನ ಕ್ಷೇತ್ರಕ್ಕೆ ಹೆಚ್ಚಿಗೆ ಸಮಯ ನೀಡಲು ಆಗುತ್ತಿಲ್ಲ, ನಿಮ್ಮಲ್ಲಿ ಕ್ಷೇಮೆ ಕೇಳುತ್ತೇನೆ

ಕಲಘಟಗಿ: ರಾಜಕೀಯಕ್ಕೆ ನಾನು ದುಡ್ಡು ಮಾಡಲು ಬಂದಿಲ್ಲ, ನಮ್ಮಿಂದ ಸಾವಿರಾರು ಬಡ ಜನರಿಗೆ ಅನುಕೂಲವಾಗಲಿ, ರಾಜಕೀಯ ವ್ಯವಸ್ಥೆ ಬದಲಾವಣೆಯಾಗಲಿ, ಸಾಮಾಜಿಕ ನ್ಯಾಯ ನೀಡಬೇಕು, ದೇಶಕ್ಕೆ ಕೊಡುಗೆಯಾಗಿ ನೀಡಿದ ಅಂಬೇಡ್ಕರ್ ಸಂವಿಧಾನ ಜನರಿಗೆ ತಲುಪಿಸಿ, ಬಸವಣ್ಣನವರ ತತ್ವ ಸಿದ್ಧಾಂತ ಸಾರಿ ಹೇಳಬೇಕು ಎಂಬ ಉದ್ದೇಶ ಇಟ್ಟು ನಾನು ರಾಜಕೀಯಕ್ಕೆ ಬಂದಿದ್ದೇನೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ಅವರು ಪಟ್ಟಣದ ಮಡಕಿಹೊನ್ನಳ್ಳಿ ತಮ್ಮ ಅಮೃತ ನಿವಾಸದಲ್ಲಿ ಸಂತೋಷ್ ಲಾಡ್ ಫೌಂಡೇಶನ್ ನಿಂದ್ ಲಾಡ್ ರವರ 50 ನೇ ಜನ್ಮ ದಿನದ ಪ್ರಯುಕ್ತ ಸೋಮವಾರ ಆಯೋಜಿಸಿದ್ದ ತಾಲೂಕಿನ ಪದವಿ ತರಗತಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ, ಆಶಾ ಹಾಗೂ ಗ್ರಾಪಂ ಸಖಿಯರಿಗೆ ₹3 ಸಾವಿರ ಧನಸಹಾಯ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ದೇಶದ ಪರಿಸ್ಥಿತಿ ಚಿಂತಾಜನಕವಾಗುತ್ತಿದೆ, ಎರಡು ಮೂರು ವರ್ಷಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಜಾರಿಗೆ ಬಂದರೆ ಇದರಿಂದ ಒಳ್ಳೇದು ಕೆಟ್ಟದ್ದು ಎರಡು ಇದ್ದು, ಉದ್ಯೋಗ ಹಾಗೂ ಶಿಕ್ಷಣದ ಮೇಲೆ ಬಾರಿ ಪರಿಣಾಮ ಬಿರಬಹುದು ಮುಂದೆ ಬರುವವರು ಎದುರಿಸಬೇಕಾಗುತ್ತದೆ ಬಹಳಷ್ಟು ಬದಲಾವಣೆ ಕಾಣುತ್ತವೆ ಆದರಿಂದ ದೇಶ, ರಾಷ್ಟ್ರ ಹಾಗೂ ಸಮಾಜ ಗಟ್ಟಿಗೊಳ್ಳಬೇಕಾದರೆ ಯುವ ಜನತೆ ಮೇಲೆ ಬಹಳಷ್ಟು ಜವಾಬ್ದಾರಿಯಿದೆ ಎಂದರು.

ಕೆಲಸದ ಒತ್ತಡದಿಂದ ಇಲ್ಲಿವರೆಗೆ ನನ್ನ ಕ್ಷೇತ್ರಕ್ಕೆ ಹೆಚ್ಚಿಗೆ ಸಮಯ ನೀಡಲು ಆಗುತ್ತಿಲ್ಲ, ನಿಮ್ಮಲ್ಲಿ ಕ್ಷೇಮೆ ಕೇಳುತ್ತೇನೆ, ಬರುವ ದಿನಗಳಲ್ಲಿ ಕಲಘಟಗಿ, ಅಳ್ನಾವರ ಕ್ಷೇತ್ರದ ಜನರ ಜೊತೆ ಇದ್ದು ನಿಮ್ಮ ಸಮಸ್ಯೆ ಆಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ದಾನ ಧರ್ಮ ಮಾಡಲು ಹೆಚ್ಚಿನ ಶ್ರೀಮಂತಿಕೆ ಬೇಕಾಗಿಲ್ಲ, ಸಹಾಯ ಮಾಡುವ ಮನಸ್ಥಿತಿ ಹಾಗೂ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.

ನಮ್ಮತನ ಬಿಟ್ಟು ಸಾರ್ವಜನಿಕ ಜೀವನದಲ್ಲಿ ನಾವೆಲ್ಲರೂ ಸಮಾಜದಲ್ಲಿರುವ ಬಡವರಿಗೆ ನಿರ್ಗತಿಕರಿಗೆ ಸಾಧ್ಯವಾದಷ್ಟು ನಮ್ಮಿಂದ ಏನು ಸಹಾಯ ಮಾಡಲು ಸಾಧ್ಯವೂ ಎಂಬುದು ಅರಿತು ನಡೆದರೆ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಹಾಗೂ ಮನರಂಜನೆ ಕಾರ್ಯಕ್ರಮಗಳು ಕಾರ್ಯಕ್ರಮಕ್ಕೆ ಮೆರಗು ತಂದವು. ಹನ್ನೆರಡು ಮಠದ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ, ಜಿಪಂ ಸಿಇಓ ಭುವನೇಶ ಪಾಟೀಲ್, ತಹಸೀಲ್ದಾರ ವೀರೇಶ ಮುಳುಗುಂದಮಠ, ತಾಪಂ ಇಓ ಪರಶುರಾಮ ಸಾವಂತ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್ ಪಾಟೀಲ, ಪಪಂ ಅಧ್ಯಕ್ಷೆ ಶಿಲ್ಪಾ ಪಾಲ್ಕರ, ಸಂತೋಷ್ ಲಾಡ್ ಫೌಂಡೇಶನ್ ಅಧ್ಯಕ್ಷ ಆನಂದ್ ಕಲಾಲ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಆರ್.ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ, ಸಚಿವರ ಆಪ್ತ ಕಾರ್ಯದರ್ಶಿ ಹರಿಶಂಕರ್ ಮಠದ, ಆಪ್ತ ಸಹಾಯಕ ಸೋಮಶೇಖರ್ ಬೆನ್ನೂರ್ ಬಿ.ವೈ ಪಾಟೀಲ, ನರೇಶ ಮಲೆನಾಡು, ವೃಷಭೇಂದ್ರ ಪಟ್ಟಣಶೆಟ್ಟಿ, ಎಸ್.ವಿ.ತಡಸಮಠ, ಬಾಬು ಅಂಚಟಗೇರಿ, ಬಾಳು ಖಾನಾಪುರ, ಹನುಮಂತ ಚವರಗುಡ್ಡ ಇದ್ದರು.

ಕಾರ್ಮಿಕ ಸಚಿವ ಸಂತೋಷ್ ಲಾಡ್ ತಮ್ಮ 50ನೇ ಜನ್ಮದಿನದ ಪ್ರಯುಕ್ತ ಪದವಿ ತರಗತಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹಧನ, ಆಶಾ ಹಾಗೂ ಗ್ರಾಪಂ ಸಖಿಯರಿಗೆ ₹ 3 ಸಾವಿರ ಧನಸಹಾಯ ವಿತರಣೆ ಮಾಡಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ, ಜಿಪಂ ಸಿಇಓ ಭುವನೇಶ ಪಾಟೀಲ್, ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಬಸವಣ್ಣ ಜೀವ ವೈವಿಧ್ಯ ಉದ್ಯಾನವನ
ಕೆಎಂಎಫ್‌ನಲ್ಲಿ ಉದ್ಯೋಗದ ನೆಪದಲ್ಲಿ50 ಲಕ್ಷ ವಂಚನೆ:ಇಬ್ಬರ ವಿರುದ್ಧ ಕೇಸ್‌