
ಕನ್ನಡಪ್ರಭ ವಾರ್ತೆ, ತುಮಕೂರು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ದೇವಾಲಯದ ಗುರ್ಭಗುಡಿ ಮತ್ತು ಗೋಪುರ ಕಟ್ಟಿಸಿಕೊಡುವಂತೆ ಕೋರಿ ಕೊಂಡ ಹಿನ್ನೆಲೆಯಲ್ಲಿ ಒಪ್ಪಿಕೊಂಡು,ಕಾಮಗಾರಿ ಕೈಗೆತ್ತಿಕೊಂಡಿದ್ದೇನೆ.ಶೇ90ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದರು.
ಹೆತ್ತೇನಹಳ್ಳಿ ಮಾರಮ್ಮನ ವರಿಗೆ 5.50 ಗ್ರಾಂ ನ ಹೊಸ ತಾಳಿ ಮಾಡಿಸಿ, ಗೌರಿಶಂಕರ್ ಅವರ ಮೂಲಕ ದೇವಿಯ ಆರ್ಚಕರಿಗೆ ನೀಡಿದ್ದೇ. ಈ ವೇಳೆ ನನ್ನ ಅಭಿವೃದ್ದಿ ಕಾರ್ಯಗಳನ್ನು ಮಾಜಿ ಶಾಸಕರು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಪ್ರಶಂಶೆ ವ್ಯಕ್ತಪಡಿಸಿದ್ದರು. ಈ ಘಟನೆ ನಂತರ ನನ್ನನ್ನು ಕೆಲವರು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಕೆಲಸ ಮಾಡುತ್ತಿದ್ದು, ತಾಳಿಯೇ ಕಳೆದು ಹೋಗಿಲ್ಲ, ಜಗದೀಶ್ ನೀಡಿರುವುದು ಕೇವಲ 7.35 ಲಕ್ಷ ಮಾತ್ರ ಎಂದು ಹೇಳುತ್ತಿದ್ದಾರೆ. ನಾನು 24 ಲಕ್ಷ ರೂಗಳನ್ನು ನಗದು ರೂಪದಲ್ಲಿ ನೀಡಿರುವುದಕ್ಕೆ ನನ್ನ ಬಳಿ ದಾಖಲೆ ಇದೆ. ಅಲ್ಲದೆ ತಹಶೀಲ್ದಾರರಿಗೆ 2 ಲಕ್ಷ ರು ನೀಡಿದ್ದೇನೆ. ಮೂರು ಲಕ್ಷ ರುಗಳನ್ನು ಗೋಪುರದ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆದಾರರಿಗೆ ನೀಡಿದ್ದೇನೆ. ಇದುವರೆಗೂ ಒಟ್ಟು 31 ಲಕ್ಷ ರುಗಳನ್ನು ನೀಡಿದ್ದೇನೆ ಎಂದು ದಾಖಲೆಗಳನ್ನು ಉದ್ಯಮಿ ಜಗದೀಶ್ ಪ್ರದರ್ಶಿಸಿದರು.ಹೆತ್ತೇನಹಳ್ಳಿ ಮಾರಮ್ಮ ದೇವಿಯ ದೇವಾಲಯದಲ್ಲಿ ಕಳ್ಳತನ ನಡೆದ ಮಾಹಿತಿ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಒಟ್ಟಾರೆ 46 ಗ್ರಾಂ ಚಿನ್ನದ ವಡವೆ ಕಳ್ಳತನವಾಗಿದೆ. ತದ ನಂತರ 14 ಗ್ರಾಂ ಸಿಕ್ಕಿದೆ ಎಂದು ಹೇಳಿದ್ದಾರೆ. ಅದು ಎಲ್ಲಿತ್ತು, ಹೇಗೆ ಅಲ್ಲಿಗೆ ಬಂತು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಎಂದರು.
ನಾನು ಮತ್ತು ಭಕ್ತರು ಸೇರಿ ದೇವಾಲಯದ ರಾಜಗೋಪರ ನಿರ್ಮಾಣ ಮಾಡಬೇಕು ಎಂಬ ಆಸೆಯಿದೆ.ಆದರೆ ಶಾಸಕರು ಸರಕಾರದ ಅನುದಾನದಲ್ಲಿ ನಿರ್ಮಿಸುವುದಾಗಿ ತಿಳಿಸಿದ್ದಾರೆ.ಒಂದು ವೇಳೆ ಅವರು ನಿರ್ಮಾಣ ಮಾಡಿದರೆ ಸಂತೋಷ, ಅಗತ್ಯವೆನಿಸಿದರೆ ನಾವು ಕೈಜೋಡಿಸಲು ಸಿದ್ದ. ಒಟ್ಟಾರೆ ತಾಯಿಯ ಸೇವೆಗೆ ನಾನು ಮತ್ತು ನನ್ನ ಕುಟುಂಬ ಸದಾ ಸಿದ್ದವಿದ್ದೇವೆ ಎಂದರು.