ಕನ್ನಡಪ್ರಭ ವಾರ್ತೆ ಹುಣಸೂರು
ಹನಗೋಡು ಗ್ರಾಮದ ದೊಡ್ಡಕಟ್ಟೆ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಚಿಕ್ಕಮ್ಮ– ದೊಡ್ಡಮ್ಮ ದೇವಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ದೇವಾಲಯಗಳು ಕೇವಲ ಪೂಜೆ– ಪುನಸ್ಕಾರಗಳಿಗೆ ಸೀಮಿತವಾಗದೇ, ಸಮಾಜದಲ್ಲಿ ಐಕ್ಯತೆ, ಸಹಕಾರ ಮತ್ತು ಸೌಹಾರ್ಧತೆಯ ಸಂಕೇತವಾಗಬೇಕು, ಗ್ರಾಮದಲ್ಲಿ ಧಾರ್ಮಿಕ ಚಟುವಟಿಕೆಗಳು ನಡೆಯುವಾಗ ಜನರು ಜಾತಿ, ಮತ ಭೇದ ಮರೆತು ಒಗ್ಗಟ್ಟಿನಿಂದ ಭಾಗವಹಿಸುವುದು ಅತ್ಯಂತ ಮುಖ್ಯ ಎಂದು ತಿಳಿಸಿದರು.ಇಂದಿನ ಯುಗದಲ್ಲಿ ಅನಾವಶ್ಯಕ ಅಂಧಶ್ರದ್ಧೆಗಳಿಗೆ ಒಳಗಾಗದೆ, ದೇವಾಲಯಗಳನ್ನು ಮಾನಸಿಕ ಶಾಂತಿ ಪಡೆಯುವ ತಾಣಗಳಾಗಿ ಹಾಗೂ ಸಮಾಜಮುಖಿ ಕಾರ್ಯಗಳ ಕೇಂದ್ರಗಳಾಗಿ ಬಳಸಿಕೊಳ್ಳಬೇಕು ಎಂದರು.
ಗ್ರಾಮದ ಯುವ ಉದ್ಯಮಿ ಡಾ.ಎಚ್.ವಿ. ಕಾರ್ತಿಕ್ ವೆಂಕಟಪ್ಪ ಮಾತನಾಡಿ, ಗ್ರಾಮಸ್ಥರು ಪರಸ್ಪರ ಸೌಹಾರ್ಧತೆಯಿಂದ ಬದುಕಿ, ದೇವಾಲಯವನ್ನು ಸಂಸ್ಕಾರ ಕೇಂದ್ರವನ್ನಾಗಿ ರೂಪಿಸಿಕೊಳ್ಳಬೇಕು ಎಂದರು.
ಗ್ರಾಮಾಭಿವೃದ್ಧಿ ಮತ್ತು ಸಾಂಸ್ಕೃತಿಕ ಬೆಳವಣಿಗೆಯಲ್ಲಿ ದೇವಾಲಯಗಳ ಪಾತ್ರ ಮಹತ್ವದ್ದಾಗಿದ್ದು, ಎಲ್ಲರೂ ಜಾತ್ಯಾತೀತ ಹಾಗೂ ಧರ್ಮತೀತ ಮನೋಭಾವದಿಂದ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಬೇಕು ಎಂದರು.
ಈ ವೇಳೆ ಹಿನಕಲ್ ನಿಂದ ಕರೆ ತಂದಿದ್ದ ಬಸವೇಶ್ವರ ದೇವಾಲಯದ ಆರ್ಚಕರಾಗಿ ಸೇವೆ ಸಲ್ಲಿಸಲು ಗ್ರಾಮದ ದಿನೇಶ ಗೌಡ ಅವರನ್ನು ಗುರುತಿಸಿಕೊಟ್ಟಿತ್ತು. ಕಾರ್ಯಕ್ರಮದಲ್ಲಿ ಹುಣಸೂರು ಹುಡಾ ಅಧ್ಯಕ್ಷ ಎಚ್.ಪಿ. ಅಮರನಾಥ್, ಡಾ. ಐಶ್ವರ್ಯ ಕಾರ್ತಿಕ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಲ್ಕುಣಿಕೆ ರಾಘು, ಅಕ್ರಮ ಸಕ್ರಮ ಸಮಿತಿ ಸದಸ್ಯ ಎಚ್.ಎಸ್. ಕುಮಾರ್, ಗ್ರಾಮದ ಹಿರಿಯರಾದ ಎಚ್.ಎಸ್. ವೆಂಕಟಪ್ಪ, ಯೋಗರಾಜ್, ಹನುಮಂತು, ನಂಜಪ್ಪ, ಸ್ವಾಮಿಗೌಡ, ಶಿವಣ್ಣೇಗೌಡ, ಶೇಖರ, ಕೃಷ್ಣೇಗೌಡ, ಎಳೆನೀರು ನಂಜಪ್ಪ, ಗ್ರಾಪಂ ಸದಸ್ಯರಾದ ಶಿವಣ್ಣ, ಸಂತೋಷ, ಛಾಯ ನಾಗೇಗೌಡ ಸೇರಿದಂತೆ ದೇವಾಲಯ ಸೇವಾ ಸಮಿತಿ ಹಾಗೂ ವಿನಾಯಕ ಸೇವಾ ಬಳಗದ ಎಲ್ಲಾ ಸದಸ್ಯರು, ಮಹಿಳೆಯರು ಹಾಗೂ ಗ್ರಾಮಸ್ಥರು ಇದ್ದರು.