ಕನ್ನಡಪ್ರಭ ವಾರ್ತೆ ಮಧುಗಿರಿ
ಭಾನುವಾರ ದೇಗುಲದ ಆವರಣದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.27 ಶುಕ್ರವಾರ ಬೆಳಿಗ್ಗೆ 5.30ಕ್ಕೆ ಜಲದಿ ನಡೆಯಲಿದೆ. ಆ ದಿನದ ಕಾರ್ಯಕ್ರಮದಲ್ಲಿ ಹೊಸದುರ್ಗದ ಕುಂಚಗಿರಿ ಮಠದ ಶ್ರೀ ಶಾಂತವೀರಮಹಾಸ್ವಾಮೀಜಿ ,ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ, ರಾಜ್ಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮೈಸೂರು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಎಂಎಲ್‌ಸಿ ಚಿದಾನಂದ ಎಂ ಗೌಡ, ಶಾಸಕ ಸುರೇಶ್ ಗೌಡ, ಮಾಜಿ ಶಾಸಕ ರಾಜೇಶ್ ಗೌಡ ಭಾಗವಹಿಸುವರು.
28ರ ಶನಿವಾರ ಬೆಳಿಗ್ಗೆ 8ಕ್ಕೆ ಮಹಾಗಣಪತಿ ಪ್ರಾರ್ಥನೆ, ಕಳಸ ಸ್ಥಾಪನೆ, ಶತರುದ್ರ ಪರಾಯಣ ದೇವತಾ ಕಾರ್ಯಗಳು ನಡೆಯಲಿವೆ. ವಿಶೇಷ ಆಹ್ವಾನಿತರಾಗಿ ಎಲೆರಾಂಪುರ ಮಠದ ಶ್ರೀ ಡಾ,ಹನುಮಂತನಾಥಸ್ವಾಮೀಜಿ,ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡ, ಕೇಂದ್ರದ ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ.ಕುಮಾರಸ್ವಾಮಿ,ಮಾಜಿ ಶಾಸಕ ಎಂ.ವಿ.ವೀರಭದ್ರಯ್ಯ ಭಾಗವಹಿಸುವರು.ಫೆ.1ರ ಬೆಳಿಗ್ಗೆ 5ಕ್ಕೆ ಮಹಾಗಣಪತಿ ಪೂಜೆ, ಪ್ರಾಣ ಪ್ರತಿಷ್ಠೆ ಹಾಗೂ ಮತ್ತಿತರೆ ಪೂಜಾ ಕಂಕೈರ್ಯಗಳು ನಡೆಯಲಿವೆ, ಅಂದಿನ ಧಾರ್ಮಿಕ ಕಾರ್ಯಕ್ರಮಕ್ಕೆ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಾಲಾನಂದಸ್ವಾಮೀಜಿ ,ಸ್ಪಟಿಕಪುರಿ ಗುರುಗುಂಡ ಬ್ರಹ್ಮೇಶ್ವರ ಮಠದ ಪೀಠಾಧ್ಯಕ್ಷ ಡಾ.ಶ್ರೀನಂದಾವಧೂತಸ್ವಾಮೀಜಿ,ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್,ಗೃಹ ಸಚಿವ ಡಾ.ಜಿ.ಪರಮೇಶ್ವರ್, ಶಾಸಕರಾದ ಟಿ.ಬಿ.ಜಯಚಂದ್ರ, ಕೆ.ಎನ್.ರಾಜಣ್ಣ, ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಭಾಗವಹಿಸುವರು.
ಟ್ರಸ್ಟ್ ಉಪಾಧ್ಯಕ್ಷ ಎಚ್.ಶಿವರಾಮ್ ಮಾತನಾಡಿ, ನೂತನ ದೇವಸ್ಥಾನದ ನಿರ್ಮಾಣಕ್ಕೆ ಸುಮಾರು 2.5 ಕೋಟಿ ಖರ್ಚು ಮಾಡಲಾಗಿದೆ. ಇದು ಸಂಪೂರ್ಣ ಕಲ್ಲಿನಿಂದ ನಿರ್ಮಿಸಲಾಗಿದೆ. ವನಮನವರ ಕುಲಬಾಂಧವರು ರಾಜ್ಯದಲ್ಲಿ 3 ಸಾವಿರಕ್ಕೂ ಅಧಿಕ ಜನರಿದ್ದು, ನಮ್ಮಲ್ಲಿ 40 ಕುಲಗಳಿವೆ ಮೂರು ದಿನಗಳ ಕಾಲ ನಡೆಯುವ ಶ್ರೀ ಹೊನ್ನೇಶ್ವರಸ್ವಾಮಿ ದೇವತಾ ಕಾರ್ಯದಲ್ಲಿ ಭಕ್ತಾದಿಗಳು ಎಲ್ಲರೂ ಭಾಗವಹಿಸುವಂತೆ ಮನವಿ ಮಾಡಿದರು.