ಕನ್ನಡಪ್ರಭ ವಾರ್ತೆ ಕೋಲಾರಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಇಬ್ಬರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬೆಳೆಸಿದ್ದು ಇಬ್ಬರೂ ಅರ್ಹರಿದ್ದಾರೆ. ಮುಖ್ಯಮಂತ್ರಿ ಯಾರಾಗಿರಬೇಕು ಎಂಬುದು ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟ ವಿಷಯ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ನುಡಿದರು.ಕೋಲಾರಕ್ಕೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿ, ಇಬ್ಬರೂ ಪಕ್ಷದ ಹೈ ಕಮಾಂಡ್ ಮಾತಿಗೆ ಬದ್ದ ಎಂದಿದ್ದಾರೆ. ಇದರಿಂದಾಗಿ ಗೊಂದಲ ನಿವಾರಣೆ ಮಾಡಲು ಅನುಕೂಲ ಆಗಲಿದೆ. ಪಕ್ಷದ ಹಿತ ದೃಷ್ಟಿಯಿಂದ ಶೀಘ್ರವೇ ಈಗಿನ ಗೊಂದಲಕ್ಕೆ ಇತಿಶ್ರೀ ಹಾಡಬೇಕು ಎಂಬುದು ನಮ್ಮ ಸಲಹೆ ಎಂದರು.
ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರುತ್ತೇವೆ. ಇಲ್ಲವಾದಲ್ಲಿ ಸಿದ್ದರಾಮಯ್ಯರಿಗೆ ಶಕ್ತಿ ಕೊಟ್ಟು ಮತ್ತೆ ಮುಂದುವರೆಸಲಿ. ಅವರು ಪಕ್ಷ ಹಾಗೂ ಸರ್ಕಾರವನ್ನು ಸರಿಯಾಗಿ ನಡೆಸುತ್ತಿದ್ದಾರೆ ಎಂದು ಹೇಳಿದರು.
ಗ್ಯಾರಂಟಿಗಳನ್ನ ಕೊಡುವ ಮೂಲಕ ಒಳ್ಳೆಯ ಕಾರ್ಯಕ್ರಮ ಕೊಟ್ಟಿದ್ದಾರೆ. ೨೦೨೮ ಕ್ಕೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಶ್ರಮಿಸಬೇಕಿದೆ. ಎಲ್ಲಾ ಧರ್ಮದ ಜನ ನಮಗೆ ಬೆಂಬಲ ಕೊಟ್ಟ ಹಿನ್ನೆಲೆ ನಮಗೆ ೧೪೦ ಶಾಸಕರ ಬಲವಿದೆ. ಅದನ್ನ ಉಳಿಸಿಕೊಂಡು ಮತ್ತೆ ಅಧಿಕಾರಕ್ಕೆ ಬರಲು ಶ್ರಮ ವಹಿಸಬೇಕಿದೆ ಎಂದು ನುಡಿದರು.ಹೈಕಮಾಂಡ್ ಗೊಂದಲ ನಿವಾರಿಸಲಿಅಹಿಂದ ನಾಯಕರ ಡಿನ್ನರ್ ಮೀಟಿಂಗ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಹರಿಪ್ರಸಾದ್ ಹಾಗೂ ನಾನು ಆಪ್ತರು, ಅವರು ದೆಹಲಿಯಲ್ಲಿ ಪಾರ್ಟಿಯಲ್ಲಿ ಕೆಲಸ ಮಾಡುತ್ತಾ ಲೀಡರ್ ಆಗಿದ್ದಾರೆ. ನಾವು ಆಗಲೂ ಊಟ ತಿಂಡಿಗೆ ಸೇರುತ್ತೇವೆ, ಗುರುವಾರ ಸಿಎಂ ಮನೆಯಲ್ಲಿ ಸಿಕ್ಕಾಗ ಬನ್ನಿ ಎಂದು ಕರೆದಿದರು, ಅಲ್ಲಿಯೂ ಸಹ ಸದ್ಯದ ಗೊಂದಲ ಕುರಿತು ನಾವೆಲ್ಲಾ ಹೈ ಕಮಾಂಡ್ ಗೆ ತಿಳಿಸೋಣ ಎಂದಷ್ಟೇ ತಿಂಡಿಯ ವೇಳೆ ರಾಜಕೀಯ ಮಾತನಾಡಿದ್ವಿ. ಒಪ್ಪಂದ ಆಗಿತ್ತೋ ಇಲ್ವೋ ನಮಗೆ ಗೊತ್ತಿಲ್ಲ, ಆಗ ನಾವು ಇಲ್ಲ. ಆದರೆ ಸದ್ಯದ ಗೊಂದಲ ನಿವಾರಣೆ ಮಾಡುವ ನಿಟ್ಟಿನಲ್ಲಿ ಇಬ್ಬರನ್ನ ಕರೆಸಿ ಮಾತನಾಡಿ ಎಂದು ಹೈಕಮಾಂಡ್‌ಗೆ ಮನವಿ ಮಾಡಲಿದ್ದೇವೆ ಎಂದರು.
ಖರ್ಗೆಯವರನ್ನೇ ಸಿಎಂ ಮಾಡಲಾಗಲಿಲ್ಲದಲಿತ ಸಿಎಂ ವಿಚಾರ ಪ್ರತಿಕ್ರಿಯಿಸಿದ ಅವರು, ದಲಿತ ಸಿಎಂ ವಿಚಾರ ಇವತ್ತು ನಿನ್ನೆಯದಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ಬಿಸಿಸಿಐ ಅಧ್ಯಕ್ಷರಾಗಿದರು, ಸಿಎಲ್‌ಪಿ ಲೀಡರ್, ಮಂತ್ರಿ ಆಗಿದರೂ, ರಾಜಕೀಯದಲ್ಲಿ ೫೦ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರನ್ನೇ ನಾವು ಮಾಡಿಕೊಳ್ಳಲಿಕ್ಕೆ ಆಗಿಲ್ಲ, ಕೇಳುವುದಂತೂ ನಡೆಯುತ್ತಲೆ ಇದೆ. ಅಂತಹ ಸೀನಿಯರ್ ಲೀಡರ್‌ಗೆ ನಾವು ಮಾಡಲಿಲ್ಲ, ಮುಂದೇನ್ ಆಗುತ್ತೆ ಅನ್ನೋದನ್ನ ನೋಡೋಣ. ಈಗ ಅವರೆ ತೀರ್ಮಾನ ಮಾಡುವ ಸ್ಥಾನದಲ್ಲಿದ್ದಾರೆ. ಖರ್ಗೆ ಮಾತ್ರವಲ್ಲ ಸೋನಿಯಾ, ರಾಹುಲ್, ವೇಣು ಗೋಪಾಲ್, ಸುರ್ಜೆವಾಲ ಇದ್ದಾರೆ. ಅವರು ಕರೆದು ಮಾತನಾಡಲಿದ್ದಾರೆ, ಕರೆದು ಮಾತನಾಡಿದಾಗ ಆ ವಿಚಾರ ಬರಬಹುದು ಎಂದರು. ಸಿಎಂ ಸ್ಥಾನದ ಆಕಾಂಕ್ಷಿಗಳು
ಧರ್ಮ ಸಿಂಗ್ ಮುಖ್ಯಮಂತ್ರಿ ಇದ್ದಾಗಲೆ ನಾವು ಕೇಳಿದ್ದವು, ನಂಬರ್ ಗೇಮ್ ಕಾಂಗ್ರೆಸ್‌ನಲ್ಲಿ ಬರಲ್ಲ. ಅವರವರ ವೈಯಕ್ತಿಕ ಅಭಿಪ್ರಾಯಗಳನ್ನ ಅವರು ಹೇಳಿದ್ದಾರೆ. ನೀವು ಅರ್ಹರಲ್ಲ ಅನ್ನೋ ವಿಚಾರಕ್ಕೆ ಖರ್ಗೆಗಿಂತಲೂ ಅರ್ಹರೇನಪ್ಪ. ಖರ್ಗೆ ಆದಮೇಲೆ ನಾನೂ ಸಹ ಸೀನಿಯರ್ ಇದ್ದೀನಿ, ಪರಮೇಶ್ವರ್ ಸಹ ಡಿಸಿಎಂ, ಗೃಹ ಸಚಿವರಾಗಿ, ೮ ವರ್ಷ ಕೆಪಿಸಿಸಿ ಅಧ್ಯಕ್ಷರಾಗಿದ್ದವರು, ಸತೀಶ್ ಜಾರಕಿಹೊಳಿ ಸಹ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡುತ್ತೇನೆ ಎನ್ನುತ್ತಿದ್ದಾರೆ. ಎಲ್ಲರೂ ಆಕಾಂಕ್ಷಿಗಳೆ. ಆದರೂ ಹೈ ಕಮಾಂಡ್ ಮಾತಿಗೆ ನಾವೆಲ್ಲ ಬದ್ದ ಎಂದರು.ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷ ಏನೇ ಕೆಲಸ ಕೊಟ್ರೂ ನಿಭಾಯಿಸುತ್ತೇನೆ ಎಂದರು.