ಕೈ ಸಂಸದರ ಕುರಿತು ನಿಮ್ಮ ಕಳವಳಗಮನಿಸಿದ್ದೇನೆ: ಗೌಡಗೆ ಸೋನಿಯಾ

KannadaprabhaNewsNetwork |  
Published : Mar 18, 2026, 02:00 AM IST
ಪೋಟೊ17.11: ಕೊಪ್ಪಳ ನಗರದ ಗಾಣಿಗ ಭವನದಲ್ಲಿ ತಿರುಳನ್ನಡ ಸಾಹಿತಿಗಳ ಸಹಕಾರ ಸಂಘ ನಿ, ಗಾಣದ ಕಣ್ಣಪ್ಪ ಪತ್ತಿನ ಸಹಕಾರ ಸಂಘ ನಿ.ಕೊಪ್ಪಳ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ ಪ್ರೊ ಕೋರಗಲ್ ವಿರೂಪಾಕ್ಷಪ್ಪನವರ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. | Kannada Prabha

ಸಾರಾಂಶ

ಪ್ರತಿಪಕ್ಷಗಳು, ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್‌ ಸದಸ್ಯರಿಂದ ಸಂಸತ್‌ ಕಲಾಪಕ್ಕೆ ಆಗುತ್ತಿರುವ ತೀವ್ರ ಅಡ್ಡಿ ಬಗ್ಗೆ ಕಳವಳ ವ್ಯಕ್ತಪಡಿಸಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಬರೆದ ಪತ್ರಕ್ಕೆ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಸ್ಪಂದಿಸಿದ್ದಾರೆ.

ನವದೆಹಲಿ: ಪ್ರತಿಪಕ್ಷಗಳು, ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್‌ ಸದಸ್ಯರಿಂದ ಸಂಸತ್‌ ಕಲಾಪಕ್ಕೆ ಆಗುತ್ತಿರುವ ತೀವ್ರ ಅಡ್ಡಿ ಬಗ್ಗೆ ಕಳವಳ ವ್ಯಕ್ತಪಡಿಸಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಬರೆದ ಪತ್ರಕ್ಕೆ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಸ್ಪಂದಿಸಿದ್ದಾರೆ. ನಿಮ್ಮ ಕಳವಳವನ್ನು ದಾಖಲಿಸಿಕೊಂಡಿದ್ದೇನೆ. ನಿಮಗೆ ಯುಗಾದಿ ಹಬ್ಬದ ಶುಭಾಶಯಗಳು ಎಂದು ಹೇಳಿ ದೇವೇಗೌಡರಿಗೆ ವಾಪಸ್ ಪತ್ರ ಬರೆದಿದ್ದಾರೆ.

ಸೋನಿಯಾ ಗಾಂಧಿ ಅವರಿಗೆ ಸೋಮವಾರ ಎರಡು ಪುಟಗಳ ಪತ್ರ ಬರೆದಿದ್ದ ದೇವೇಗೌಡ ಅವರು, ಇತ್ತೀಚೆಗೆ ಸಂಸತ್ತಿನಲ್ಲಿ ಪ್ರತಿಪಕ್ಷಗಳು, ಅದರಲ್ಲೂ ಮುಖ್ಯವಾಗಿ ಪದೇ ಪದೆ ಕಲಾಪಕ್ಕೆ ಅಡ್ಡಿಮಾಡುತ್ತಿರುವುದು, ಪ್ರತಿಭಟನೆ ವೇಳೆ ತೋರುತ್ತಿರುವ ವರ್ತನೆ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದರು. ವಿರೋಧ ಪಕ್ಷದ ನಾಯಕನ ನೇತೃತ್ವದಲ್ಲಿ ಕಾಂಗ್ರೆಸ್‌ ಸದಸ್ಯರು ಅತೀ ಸಂಸತ್ತಿನ ಒಳಗೆ ಮತ್ತು ಆವರಣದಲ್ಲಿ ಮಿತಿಮೀರಿ ಅಡಚಣೆಗಳನ್ನು ಸೃಷ್ಟಿಸಿದ್ದಾರೆ ಎಂದು ಭಾವಿಸಿದ್ದೇನೆ. ಪ್ರತಿಭಟನೆ ನಡೆಸುವುದು ತಪ್ಪಲ್ಲ, ಆದರೆ, ಸಂಸತ್ತಿನ ಮೆಟ್ಟಿಲುಗಳ ಮೇಲೆ ಚಹಾ, ಬಿಸ್ಕತ್ತು ಸೇವಿಸುವುದು ಸಂಸದೀಯ ಸದಾಚಾರವನ್ನು ಬಿಂಬಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಜತೆಗೆ, ಇಂಥ ವರ್ತನೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.

ದೇವೇಗೌಡರ ಪತ್ರ ಓದಿ ಮಂಗಳವಾರ ವಾಪಸ್ ಪತ್ರ ಬರೆದಿರುವ ಸೋನಿಯಾ ಗಾಂಧಿ, ‘ನಿಮ್ಮ ಪತ್ರ ನನಗೆ ಮಾ.16ರಂದು ತಲುಪಿದೆ. ಅದನ್ನು ಎಚ್ಚರಿಕೆಯಿಂದ ಓದಿದ್ದೇನೆ ಮತ್ತು ನೀವು ವ್ಯಕ್ತಪಡಿಸಿರುವ ಕಳವಳವನ್ನು ನಾನು ದಾಖಲಿಸಿಕೊಂಡಿದ್ದೇನೆ. ನಿಮಗೆ ಯುಗಾದಿ ಹಬ್ಬದ ಶುಭಾಶಯಗಳು’ ಎಂದು ಚುಟುಕಾಗಿ ಪ್ರತಿಕ್ರಿಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನ್ಯಾಯದಿಂದ ಸಂಪಾದಿಸಿದರೆ ಅವನತಿಗೆ ಆಹ್ವಾನ
ಎಚ್‌.ಪಿ.ವಿ ಲಸಿಕೆ ಗರ್ಭ ಕಂಠ ಕ್ಯಾನ್ಸರ್ ನಿಯಂತ್ರಣಕ್ಕೆ ಪರಿಣಾಮಕಾರಿ: ಡಾ.ನರಸಿಂಹಮೂರ್ತಿ