ಕಳೆದ 50 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿರುವ ನನಗೆ ರಾಜಕೀಯ ಮಜಲು ಮತ್ತು ಸಹಕಾರದ ಬಗ್ಗೆ ತಿಳಿದಿದ್ದು ನನಗೆ ಆ ಕ್ಷೇತ್ರ ಸಾಕಷ್ಟು ಪಾಠ ತಿಳಿಸಿದೆ. ಕಳೆದ ಅವಧಿಯಲ್ಲಿ ಬ್ಯಾಂಕ್ ಅಧ್ಯಕ್ಷನಾಗಿದ್ದಜಿ.ಡಿ. ಹರೀಶ್ ಗೌಡ ರೈತಪರ ಕೆಲಸ ಮಾಡಿ ನಾಡಿಗೆ ಮಾದರಿಯಾಗಿದ್ದಾನೆ.
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಎಂಸಿಡಿಸಿಸಿ ಬ್ಯಾಂಕ್ ಚುನಾವಣೆ ನಡೆಸುವಂತೆ ಜೆಡಿಎಸ್ ಪಕ್ಷದ ಮುಖಂಡರು ಸೂಚನೆ ನೀಡದ ಹಿನ್ನೆಲೆಯಲ್ಲಿ ನಾನು ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿದಿದ್ದೇನೆ ಎಂದು ಶಾಸಕ ಜಿ.ಟಿ. ದೇವೇಗೌಡ ಸ್ಪಷ್ಟನೆ ನೀಡಿದರು.
ಸಾಲಿಗ್ರಾಮ ತಾಲೂಕು ಹರದನಹಳ್ಳಿ ನಡೆದ ಎಚ್.ಎನ್. ವಿಜಯ್ ಅವರ ಜನ್ಮ ದಿನಾಚರಣೆ ಪೂರ್ವಭಾವಿ ಸಭೆಯ ನಂತರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಹಕಾರದಲ್ಲಿ ರಾಜಕೀಯ ಬೆರೆತರೆ ಆ ಕ್ಷೇತ್ರ ಸರ್ವನಾಶವಾಗುತ್ತದೆ ಎಂದರು.
ಕಳೆದ 50 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿರುವ ನನಗೆ ರಾಜಕೀಯ ಮಜಲು ಮತ್ತು ಸಹಕಾರದ ಬಗ್ಗೆ ತಿಳಿದಿದ್ದು ನನಗೆ ಆ ಕ್ಷೇತ್ರ ಸಾಕಷ್ಟು ಪಾಠ ತಿಳಿಸಿದೆ. ಕಳೆದ ಅವಧಿಯಲ್ಲಿ ಬ್ಯಾಂಕ್ ಅಧ್ಯಕ್ಷನಾಗಿದ್ದಜಿ.ಡಿ. ಹರೀಶ್ ಗೌಡ ರೈತಪರ ಕೆಲಸ ಮಾಡಿ ನಾಡಿಗೆ ಮಾದರಿಯಾಗಿದ್ದಾನೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಮುಂದಿನ ಅವಧಿಗೆ ಆಯ್ಕೆಯಾಗುವವರು ರಾಜಕೀಯ ಮಾಡದೆ ಜನಸೇವೆ ಮಾಡಿ ಎಂದು ಸಲಹೆ ನೀಡಿದರು.
ದಿ. ಮಾಜಿ ಪ್ರಧಾನಿ ಜವಹರಲಾಲ್ ನೆಹರು ಅವರ ಕಾಲದಿಂದಲ್ಲೂ ಸಹಕಾರ ಕ್ಷೇತ್ರ ರೈತರ ಧ್ವನಿಯಾಗಿದ್ದು ಭವಿಷ್ಯದ ನಾವೆಲ್ಲರೂ ಹಿರಿಯರ ಆಶಯ ಮತ್ತು ಸಹಕಾರಿಗಳ ಆಶಯ ಪಾಲಿಸಿ ಸುಂದರ ಜೀವನ ನಡೆಸುವುದರ ಮೂಲಕ ಸಮಾನತೆಯ ಬದುಕು ನಡೆಸಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದ್ದರು.
ಗಂಡು ಮಕ್ಕಳ ಮೇಲಿನ ಲೈಂಗಿಕ ಶೋಷಣೆ ವಿರುದ್ಧ ಅರಿವು
ಕನ್ನಡಪ್ರಭ ವಾರ್ತೆ ಮೈಸೂರು
ಒಡನಾಡಿ ಸೇವಾ ಸಂಸ್ಥೆಯು ಗಂಡು ಮಕ್ಕಳ ಮೇಲಿನ ಲೈಂಗಿಕ ಶೋಷಣೆಯ ವಿರುದ್ಧ ಮಂಚೇಗೌಡನಕೊಪ್ಪಲು ಸರ್ಕಾರಿ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜಿನಲ್ಲಿ ಅರಿವು ಕಾರ್ಯಕ್ರಮ ಆಯೋಜಿಸಿತ್ತು.
ಶಾಲಾ, ಕಾಲೇಜು, ಹಳ್ಳಿಗಳು, ಕೊಳಗೇರಿಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಸಂವಾದಗಳ ಮೂಲಕ ಅರಿವು ಉಂಟು ಮಾಡುತ್ತಿದ್ದು, ಈ ಬಗ್ಗೆ ಎಚ್ಚರಿಕೆಯ ಗಂಟೆ ಮೊಳಗಿಸುತ್ತಿದೆ.
ಕಾಲೇಜಿನ ಪ್ರಾಂಶುಪಾಲರ ಸಹಕಾರದೊಡನೆ ಕನ್ನಡ ಉಪನ್ಯಾಸಕ ಶ್ರೀಕಂಠಯ್ಯ, ಇತಿಹಾಸ ಉಪನ್ಯಾಸಕ ಪೂರ್ಣಚಂದ್ರ ಅವರು ಕಾರ್ಯಕ್ರಮ ಆಯೋಜಿಸಿದ್ದರು.
ಸುಮಾರು 200ಕ್ಕೂ ಹೆಚ್ಚು ಆಸಕ್ತ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಒಡನಾಡಿಯ ಕಾರ್ಯಕರ್ತರಾದ ಶಶಾಂಕ್, ನಾಜಿಯಾ ಬಾನು, ತರಬೇತು ಪಡೆದ ಒಡನಾಡಿಯ ಮಹದೇವಿ, ಸಂಜನಾ, ಚೈತ್ರಾ, ದೀಪಿಕಾ, ಹೇಮಾ, ಸೂರ್ಯ, ಯಲ್ಲಪ್ಪ, ಡೇವಿಡ್, ಪೃಥ್ವಿರಾಜ್ ಹಾಗೂ ಶ್ರೀಧರ್ ಪಾಲ್ಗೊಂಡಿದ್ದರು ಎಂದು ಒಡನಾಡಿಯ ಸ್ಟ್ಯಾನ್ಲಿ- ಪರಶು ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.