ರಾಣಿಬೆನ್ನೂರು: ಪರಿಶಿಷ್ಟ ವರ್ಗದ ಜನರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡುವ ಸಕಲ ಸವಲತ್ತುಗಳನ್ನು ಪಡೆದುಕೊಂಡು ಸಮಾಜದಲ್ಲಿ ಸದೃಢರಾಗಬೇಕು ಎಂದು ಜಿಲ್ಲಾ ಪರಿಶಿಷ್ಟ ವರ್ಗದ ನೋಡಲ್ ಅಧಿಕಾರಿ ಫೀರಸಾಬ್ ತಿಳಿಸಿದರು.ತಾಲೂಕಿನ ಯಕಲಾಸಪುರ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಏರ್ಪಡಿಸಿದ್ದ ಧರ್ತಿ ಆಬಾ ಜನಭಾಗಿದಾರ ಅಭಿಯಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿರೇಕೆರೂರು: ಬುಡಕಟ್ಟು ಜನರು ಸರ್ಕಾರದ ಯೋಜನೆಗಳು, ಸೌಲಭ್ಯಗಳನ್ನು ಪಡೆಯಲು ಈ ಅಭಿಯಾನ ಸಹಕಾರಿಯಾಗಲಿದೆ ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.ತಾಲೂಕಿನ ಅಲದಕಟ್ಟಿ ಗ್ರಾಮದ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಧರ್ತಿ ಆಬಾ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಧರ್ತಿ ಆಬಾ ಕಾರ್ಯಕ್ರಮದ ಉದ್ದೇಶ ಪರಿಶಿಷ್ಟ ಪಂಗಡದ ಸವಲತ್ತುಗಳನ್ನು ಪಡೆಯಲು ಸಂಬಂಧಿಸಿದ 17 ಇಲಾಖೆಗಳಿಂದ ದಾಖಲೆಗಳನ್ನು ಪಡೆಯುವುದಾಗಿದೆ. ಈಗಾಗಲೇ ಆರೋಗ್ಯ ಇಲಾಖೆಯಿಂದ ನ್ಯೂಮೋನಿಯಾ ಕುರಿತು ತಪಾಸಣೆ ಮಾಡಿದ್ದು, ಯಾವುದೇ ಪ್ರಕರಣ ದಾಖಲಾಗಿಲ್ಲವೆಂದು ತಿಳಿಸಿದರು.ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾವೇರಿ ಕಚೇರಿಯ ತನಿಖಾ ಸಹಾಯಕರಾದ ಪಿ.ಎಚ್. ನದಾಫ್ ಮಾತನಾಡಿ, ಪರಿಶಿಷ್ಟ ವರ್ಗದ ಜನಾಂಗದವರ ಏಳಿಗೆಗಾಗಿ ಕೇಂದ್ರ ಸರ್ಕಾರ ಧರ್ತಿ ಆಬಾ ಯೋಜನೆ ಜಾರಿಗೆ ತಂದಿದೆ ಎಂದರು.ತಹಸೀಲ್ದಾರ್ ಪ್ರಭಾಕರಗೌಡ ಮಾತನಾಡಿದರು. ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಮೆಹಬೂಬ್ ಸಾಬ್ ನದಾಫ್, ತಾಪಂ ಇಒ ರವಿ ಎನ್., ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಬುರುಡಿಕಟ್ಟಿ, ಪ್ರಭು, ವೀರಭದ್ರಗೌಡಗೌಡರ, ಪಿಡಿಒ ಸೊರಟೂರ್, ಸಹಾಯಕ ಕೃಷಿ ನಿರ್ದೇಶಕ ಜಿತೇಂದ್ರ ಗೌಡಪ್ಪಳವರ್, ತಾಲೂಕು ಆರೋಗ್ಯ ಅಧಿಕಾರಿ ಜೆಡ್.ಆರ್. ಮಕಾಂದಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಡಿ ಜಯಶ್ರೀ ಪಾಟೀಲ್, ವೀರಭದ್ರಗೌಡರ್ ಮಾದೇವ್‌ಗೌಡ ಪಾಟೀಲ್, ಕಾಳಿಂಗಪ್ಪ ಬೂದಿಹಾಳ, ವೀರನಗೌಡ ಪಾಟೀಲ್, ಮಹಾಂತೇಶ್ ಕೆಂಗನವರ, ನಾಗಪ್ಪ ಹೆಗ್ಗೇರಿ ಇತರರು ಇದ್ದರು.