ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಭಕ್ತಿ ಪೂರ್ವಕವಾಗಿ ಕೈವಾರ ತಾತಯ್ಯನವರ ಜಯಂತಿಯನ್ನು ಆಚರಿಸಲಾಯಿತು.

ಸದ್ಗುರು ತಾತಯ್ಯನವರ ಭಾವಚಿತ್ರಕ್ಕೆ ತಹಸೀಲ್ದಾರ್‌ ಕೆ.ಎಂ.ಅರವಿಂದ ಪುಷ್ಪ ನಮನ ಮಾಡಿ ಮಾತನಾಡಿ, ಕೈವಾರ ತಾತಯ್ಯನವರು ಜಾತಿ, ಕುಲ,ಮತ, ಭೇದ ಭಾವವಿಲ್ಲದೆ ಸಮಾಜದಲ್ಲಿ ಸಮಾನತೆಯನ್ನು ತರಬೇಕೆಂದು ಶ್ರಮಿಸಿದವರು. ಯತೀಂದ್ರರ ತತ್ವ ಸಿದ್ಧಾಂತವನ್ನು ಕೇವಲ ಜಯಂತಿಗೆ ಸೀಮಿತವಾಗದೆ, ನಾವುಗಳು ಪ್ರತಿ ದಿನ ಅವರ ಆಧ್ಯಾತ್ಮಿಕ ಜೀವನದ ಆದರ್ಶಗಳನ್ನು ಪಾಲಿಸಬೇಕು ಎಂದರು.ತೀರ್ಥ ಶಾಲೆಯ ಅಧ್ಯಕ್ಷರಾದ ಪ್ರೊ.ಕೆ.ವಿ. ಪ್ರಕಾಶ್ ಮಾತನಾಡಿ, ಕೈವಾರ ತಾತಯ್ಯನವರು ಶ್ರೇಷ್ಠ ಸಂತರಾಗಿ, ಸಮಾಜ ಸುಧಾರಕರಾಗಿ, ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವುದರೊಂದಿಗೆ ಸಮಾಜ ಪರಿವರ್ತನೆ ಮಾಡಲು ಪರಿಶ್ರಮಪಟ್ಟರು ಎಂದರು.ಕಾರ್ಯಕ್ರಮದಲ್ಲಿ ನಗರಸಭಾ ಮಾಜಿ ಸದಸ್ಯರಾದ ವಿ. ರಮೇಶ್, ಮಾರ್ಕೆಟ್ ಮೋಹನ್, ಕೆ.ಎಸ್. ಅನಂತರಾಜು, ಜಿ.ಎಲ್. ಅಶ್ವತ್ಥ ನಾರಾಯಣ, ವಿ. ರವೀಂದ್ರನಾಥ್, ಎಚ್.ವಿ. ವೆಂಕಟೇಶ್, ಜಿ.ಎ.ಪ್ರದೀಪ್, ವೆಂಕಟಾದ್ರಿ,ಗೌರಿ ಕಾಫಿ ರಮೇಶ್, ರಂಗನಾಥ್ ಇದ್ದರು.