ಏಳು ಸಾವಿರ ಮದ್ಯದ ಅಂಗಡಿ ತೆರೆದಿದ್ದೆ ಸಿದ್ದು ಸಾಧನೆ

KannadaprabhaNewsNetwork |  
Published : May 20, 2026, 12:15 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್   | Kannada Prabha

ಸಾರಾಂಶ

ಚಿತ್ರದುರ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂಸದ ಗೋವಿಂದ ಕಾರಜೋಳ ಮಾತನಾಡಿದರು.

ಚಿತ್ರದುರ್ಗದಲ್ಲಿ ಸಂಸದ ಗೋವಿಂದ ಕಾರಜೋಳ ಲೇವಡಿ । ಗ್ಯಾರಂಟಿ ಹೆಸರಲ್ಲಿ 7.64 ಲಕ್ಷ ಕೋಟಿ ಸಾಲಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಯಾವ ಪುರುಷಾರ್ಥಕ್ಕಾಗಿ ಸಿದ್ದರಾಮಯ್ಯ ಸಾಧನೆ ಸಮಾವೇಶ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಏಳು ಸಾವಿರ ಮದ್ಯದ ಅಂಗಡಿ ತೆರೆದು, ಗ್ಯಾರಂಟಿ ಹೆಸರಲ್ಲಿ 7.64 ಲಕ್ಷ ಕೋಟಿ ರು. ಸಾಲ ಮಾಡಿದ್ದೇ ಸಾಧನೆಯೇ ಎಂದು ಸಂಸದ ಗೋವಿಂದ ಕಾರಜೋಳ ಲೇವಡಿ ಮಾಡಿದರು.

ಇಲ್ಲಿನ ಸಂಸದರ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಆಸೆ ತೋರಿಸಿ, ಬಡವರ ಮನಗೆದ್ದು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ ಅಭಿವೃದ್ಧಿ ಮರೆತು ಭ್ರಷ್ಟಾಚಾರದಲ್ಲಿ ಮುಳುಗಿದೆ. ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿದ್ದು ಅವರಿಗೆ ರಕ್ಷಣೆ ಇಲ್ಲದಂತಾಗಿದೆ.

ರಾಜ್ಯದಲ್ಲಿ‌ ಕುಡಿಯುವ ನೀರಿನ ಅಭಾವ ಇದೆ. ಸಮರ್ಪಕ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶ್ವವೇ ಮೆಚ್ಚಿದ್ದು ಅವರೇ ನಿಜವಾದ ಅಹಿಂದ ನಾಯಕ. ಸಿದ್ದರಾಮಯ್ಯ ಡೋಂಗಿ ಅಹಿಂದ ನಾಯಕ. ಎಸ್ಸಿ, ಎಸ್ಟಿ ಜನಾಂಗದ ಅಭಿವೃದ್ಧಿಗೆ‌ 2‌4 ಸಾವಿರ ಕೋಟಿ ರು. ಮೀಸಲಿಟ್ಟಿದ್ದೇವೆ ಎನ್ನುತ್ತಾರೆ. ಜನರಿಗೆ ತಲುಪಿಸಲಾಗಿರುವುದರ ಬಗ್ಗೆ ಖಚಿತತೆ ಇಲ್ಲ ಎಂದು ದೂರಿದರು.

ಕೇರಳ ಸಿಎಂ ಆಯ್ಕೆ ನಂತರ ಕಾಂಗ್ರೆಸ್‌ನಲ್ಲಿ ಮೂರು ಬಣಗಳಾಗಿವೆ. ದಲಿತ ಸಿಎಂ ಕೂಗು ಎಬ್ಬಿಸಲಾಗುತ್ತಿದೆ. ಕುರ್ಚಿಗೆ ಕಂಟಕ‌ ಬಂದಿದೆ ಎಂಬ ಕಾರಣಕ್ಕೆ ತುಮಕೂರು ಸಮಾವೇಶ ಮಾಡಲಾಗುತ್ತಿದೆ. 1.50 ಲಕ್ಷ ಹಕ್ಕುಪತ್ರ ವಿತರಣೆ ಮಾಡುತ್ತೇವೆ ಎಂದು ಹೇಳಿ 8 ಸಾವಿರ ಜನ ಸೇರುವ ಮೈದಾನ ಆಯ್ಕೆ ಮಾಡಿಕೊಳ್ಳಲಾಗಿದೆ. ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಬಿಟ್ಟರೆ ಅಲ್ಲಿ ಯಾರೂ ಇಲ್ಲವೆಂದರು.

ಇರಾನ್, ಇಸ್ರೇಲ್, ಅಮೇರಿಕಾ ನಡುವಿನ ಯುದ್ಧದ ಕಾರಣಕ್ಕೆ ಬಂಗಾರ ಖರೀದಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಬಂಗಾರ ಹಾಗೂ ಆಯಿಲ್ ಅನ್ನು ಡಾಲರ್ಸ್ ಕೊಟ್ಟು ಹೊರದೇಶಗಳಿಂದ ಖರೀಧಿಸಲಾಗುತ್ತಿದೆ. ಇದರಿಂದ ರೂಪಾಯಿ‌ ಮೌಲ್ಯ‌ ಕಡಿಮೆ‌ ಆಗುತ್ತಿದೆ. ಉಳಿತಾಯ ನಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದಿದ್ದು ಮೋದಿ‌ಯವರು ನೆನಪಿಸಿದ್ದಾರೆ. 1964-65ರಲ್ಲಿ ಅಂದಿನ‌ ಪ್ರಧಾನಿ ಶಾಸ್ತ್ರೀ ಜಿ ಸೋಮವಾರ ಒಂದು ಹೊತ್ತು ಊಟ ಬಿಡಿ‌ ಎಂದು‌ ಹೇಳಿದ್ದರು. ದೇಶದ ಜನ ಕಟ್ಟುನಿಟ್ಟಾಗಿ ಪಾಲನೆ ಮಾಡಿದ್ದರು.

ಈ ವಾಸ್ತವಗಳು ಗೊತ್ತಿಲ್ಲದ ಕಾಂಗ್ರೆಸ್ಸಿಗರು ಸುಖಾಸುಮ್ಮನೆ ಟೀಕೆ ಮಾಡುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಅಧಿಕಾರದಲ್ಲಿರುವ ಸಿದ್ದರಾಮಯ್ಯ ದುಂದುವೆಚ್ಚಕ್ಕೆ ಕಡಿವಾಣ ಹಾಕಲಿಲ್ಲ.‌ಒಂದೆ ಒಂದು ಅಭಿವೃದ್ಧಿ‌ಕೆಲಸ ಆಗಿಲ್ಲ. 48 ಸಾವಿರ ಕೋಟಿ‌ ದುರುಪಯೋಗ ಮಾಡಿ‌ ವೋಟ್ ಬ್ಯಾಂಕ್ ರಾಜಕಾರಣ ಮಾಡಿದ್ದಾರೆ ಎಂದು ಕಾರಜೋಳ ದೂರಿದರು.

ಈ ವೇಳೆ ವಿಪ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಮಾಜಿ ಅಧ್ಯಕ್ಷ ಎ.ಮುರಳಿ, ಡಾ.ಸಿದ್ದಾರ್ಥ್, ಪರಶುರಾಂ, ಮೋಹನ್, ಸಂಪತ್, ವೆಂಕಟೇಸ ಯಾದವ್, ಚಾಲುಕ್ಯ ನವೀನ್, ರಾಜಣ್ಣ, ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇರಳಕ್ಕೆ ಸಾಗಿಸುತ್ತಿದ್ದ 19 ಗೋವುಗಳ ರಕ್ಷಣೆ
ಚನ್ನಗಿರಿಯಲ್ಲಿ ದಸ್ತಾವೇಜು ಬರಹಗಾರರ ಸಂಘ ಪ್ರತಿಭಟನೆ