ನಾ ಕಂಡ ನೈಜ ದೇವರು ಸಿದ್ಧಗಂಗಾ ಶಿವಕುಮಾರರು: ಮಾಜಿ ಸಂಸದ ಬಿ.ಎನ್ ಬಚ್ಚೇಗೌಡ

KannadaprabhaNewsNetwork | Published : Jan 22, 2025 12:30 AM

ಸಾರಾಂಶ

ತಾಲೂಕಿನಲ್ಲಿರುವ ಎಲ್ಲಾ ಸಮುದಾಯದ ಸಂಘಟನೆಗಳು ಒಟ್ಟಾಗಿ ಸೇರಿ ಸಂಘಟಿತರಾಗಿ ಸಮಾಜಕ್ಕೆ ನಮ್ಮಿಂದ ಏನು ಕೊಡುಗೆ ಕೊಡಬಹುದು ಎಂಬುದರ ಬಗ್ಗೆ ಚರ್ಚೆಯಾಗಬೇಕು, ಸಮುದಾಯದ ಬೃಹತ್ ಸಮಾವೇಶ ಹಮ್ಮಿಕೊಳ್ಳುವ ಮೂಲಕ ಸಮುದಾಯದ ಶಕ್ತಿ ಪ್ರದರ್ಶನ ಮಾಡೋಣ ಎಂದು ತಿಳಿಸಿದರು.ವೀರಶೈವ ಸೇವಾ ಸಮಾಜ ವತಿಯಿಂದ ಸುಮಾರು 5 ಸಾವಿರ ಭಕ್ತರಿಗೆ ಅನ್ನದಾಸೋಹ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಹೊಸಕೋಟೆ

ಲಕ್ಷಾಂತರ ವಿದ್ಯಾರ್ಥಿಗಳಿಗೆ ತ್ರಿವಿಧ ದಾಸೋಹದ ಮೂಲಕ ದೇವರಾದ ಶ್ರೀ ಶಿವಕುಮಾರ ಮಹಾಸ್ವಾಮಿಗಳೇ ನಾ ಕಂಡ ನಿಜವಾದ ದೇವರು ಎಂದು ಮಾಜಿ ಸಂಸದ ಬಿ. ಎನ್. ಬಚ್ಚೇಗೌಡ ತಿಳಿಸಿದರು.

ನಗರದ ಬಸವೇಶ್ವರ ವೃತ್ತದಲ್ಲಿ ವೀರಶೈವ ಸೇವಾ ಸಮಾಜದ ವತಿಯಿಂದ ನಡೆದ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿಯವರ 6ನೇ ವರ್ಷದ ಪುಣ್ಯ ಸ್ಮರಣಾರ್ಥ ದಾಸೋಹ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಿದ್ಧಗಂಗೆಯ ಸಿದ್ಧಪುರುಷರಾಗಿ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಸಹಸ್ರಾರು ವಿದ್ಯಾರ್ಥಿಗಳಿಗೆ ದಾಸೋಹ, ವಸತಿ, ಉಚಿತ ಶಿಕ್ಷಣ ಕೊಡುವ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ, ಇಂದಿಗೂ ಮಠದಲ್ಲಿ ಶಿಕ್ಷಣ ದಾಸೋಹ ಮುಂದುವರಿದಿದೆ. ಈ ನಿಟ್ಟಿನಲ್ಲಿ ವೀರಶೈವ ಸಮಾಜ ಸಂಘಟಿತರಾಗಬೇಕು. ಮಠಗಳಿಗೆ ಭೇಟಿ ನೀಡುವ ಮೂಲಕ ಮಠದ ಇತಿಹಾಸ ತಿಳಿಯಬೇಕು ಎಂದರು.

ನಾಗಲಾಪುರ ವೀರಸಿಂಹಾಸನ ಮಠದ ಶ್ರೀ ತೇಜೇಶಲಿಂಗ ಸ್ವಾಮೀಜಿ ಮಾತನಾಡಿ, ಶ್ರೀ ಶಿವಕುಮಾರ ಸ್ವಾಮೀಜಿ ಅವರು ಜಾತಿ, ಧರ್ಮ ಬೇಧವಿಲ್ಲದೆ ಸೇವೆ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದರು ಎಂದು ತಿಳಿಸಿದರು.

ತಾಲೂಕಿನಲ್ಲಿರುವ ಎಲ್ಲಾ ಸಮುದಾಯದ ಸಂಘಟನೆಗಳು ಒಟ್ಟಾಗಿ ಸೇರಿ ಸಂಘಟಿತರಾಗಿ ಸಮಾಜಕ್ಕೆ ನಮ್ಮಿಂದ ಏನು ಕೊಡುಗೆ ಕೊಡಬಹುದು ಎಂಬುದರ ಬಗ್ಗೆ ಚರ್ಚೆಯಾಗಬೇಕು, ಸಮುದಾಯದ ಬೃಹತ್ ಸಮಾವೇಶ ಹಮ್ಮಿಕೊಳ್ಳುವ ಮೂಲಕ ಸಮುದಾಯದ ಶಕ್ತಿ ಪ್ರದರ್ಶನ ಮಾಡೋಣ ಎಂದು ತಿಳಿಸಿದರು.ವೀರಶೈವ ಸೇವಾ ಸಮಾಜ ವತಿಯಿಂದ ಸುಮಾರು 5 ಸಾವಿರ ಭಕ್ತರಿಗೆ ಅನ್ನದಾಸೋಹ ಹಮ್ಮಿಕೊಳ್ಳಲಾಗಿತ್ತು.

ನಗರ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಭೈರೇಗೌಡ, ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಡಿ.ಎಸ್. ರಾಜ್ ಕುಮಾರ್, ಬಿಎಂಆರ್ ಡಿಎ ಅಧ್ಯಕ್ಷ ಕೇಶವಮೂರ್ತಿ, ಸದಸ್ಯ ಡಾ.ಎಚ್.ಎಂ. ಸುಬ್ಬರಾಜ್, ಹಿರಿಯ ಮುಖಂಡ ರುದ್ರಾರಾಧ್ಯ, ಟಿ.ಎಸ್ ರಾಜಶೇಖರ್, ವೀರಶೈವ ಸೇವಾ ಸಮಾಜ ಅಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಪರಮೇಶ್, ಉಪಾಧ್ಯಕ್ಷರಾದ ಮಾದೇಶ್, ಸಾಗರ್, ಖಜಾಂಜಿ ಎಸ್‌ಎನ್ ಮಂಜುನಾಥ್, ಸದಸ್ಯರಾದ ಕಾರ್ತಿಕ್, ವಿಜಯ್, ಶೇಖರ್, ಆನಂದ್, ಪೃಥ್ವಿರಾಜ್, ದಿನೇಶ್, ಸಿಪಿ ನವೀನ್, ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.

Share this article