ಹೊಸದುಗ೯: ಮಾದಿಗ ಜನಾಂಗಕ್ಕೆ ಒಳ ಮೀಸಲಾತಿ ಜಾರಿಗೆ ನನ್ನ ಸಂಪೂಣ೯ ಬೆಂಬಲ ಇದೆ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ತಿಳಿಸಿದರು.
ಮಾದಿಗ ಮಹಾಸಭಾ ವತಿಯಿಂದ ಸುಪ್ರೀಂ ಕೋಟ್೯ ಆದೇಶದಂತೆ ಒಳ ಮೀಸಲಾತಿಯನ್ನು ಶೀಘ್ರ ಜಾರಿಗೊಳಿಸುವಂತೆ ಒತ್ತಾಯಿಸಿ ಮಲ್ಲೇನಹಳ್ಳಿ ಗೇಟ್‌ನಿಂದ ಬೆಲಗೂರು ಶಾಸಕರ ಮನೆವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆ ಕಾರ್ಯಕ್ರಮದಲ್ಲಿ ಬೆಲಗೂರಿನ ತಮ್ಮ ನಿವಾಸದಲ್ಲಿ ಮನವಿ ಸ್ವೀಕರಿಸಿ ಮಾತನಾಡಿದರು.ಮಾದಿಗ ಜನಾಂಗವು ಸಮಾರು ವಷ೯ಗಳಿಂದ ಪ್ರತೇಕ ಮೀಸಲಾತಿ ವಿಷಯಕ್ಕೆ ಹೋರಾಟ ಮಾಡುತ್ತಿದ್ದಾರೆ. ಈ ಹಿಂದೆ ಚುನಾವಣೆಯ ಸಂದಭ೯ದಲ್ಲಿ ನಮ್ಮ ಸಕಾ೯ರ ಅಧಿಕಾರಕ್ಕೆ ಬಂದ ತಕ್ಷಣ ಒಳ ಮೀಸಲಾತಿ ಜಾರಿಗೆ ತರುವುದಾಗಿ ಹೇಳಿತ್ತು. ಅದರಂತೆ ಸುಪ್ರೀಂ ಕೋಟ್೯ ಕೂಡ ಪರಿಶಿಷ್ಟ ಜಾತಿಯವರಿಗೆ ಮೀಸಲಾತಿ ವರ್ಗೀಕರಣ ಆಯಾ ರಾಜ್ಯಗಳು ಮಾಡಬಹುದು ಎಂದು ಆದೇಶ ಮಾಡಿದೆ. ಕಾಂಗ್ರೆಸ್ ಪಕ್ಷದ ಒಳಗೆ ಏನೇ ಗೊಂದಲಗಳಿದ್ದರೂ, ಅದಕ್ಕೆ ಕಿವಿಗೊಡದೆ ಕೊಟ್ಟ ಮಾತಿನಂತೆ ಜಾರಿ ಮಾಡಬೇಕು. ಮಾದಿಗ ಜನಾಂಗದವರು ಶತಮಾನಗಳಿಂದ ಎಲ್ಲಾ ವಿಧದಲ್ಲಿ ಮೀಸಲಾತಿಯ ಅವಕಾಶ ಸಿಗದೆ ನೊಂದಿದ್ದಾರೆ. ಇವರು ನ್ಯಾಯ ಕೇಳುವುದರಲ್ಲಿ ತಪ್ಪಿಲ್ಲ. ಈ ಬಗ್ಗೆ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮತ್ತು ಸದನದಲ್ಲಿ ಬೆಂಬಲಿಸುವುದಾಗಿ ತಿಳಿಸಿದರು.
ಮಾದಿಗ ಮಹಾಸಭಾದ ಮುಖಂಡ ಶಂಕರಪ್ಪ ಹೆಗ್ಗೆರೆ ಮಾತನಾಡಿ, ಪರಿಶಿಷ್ಟ ಜಾತಿಯವರಿಗೆ ಮೀಸಲಾತಿ ವರ್ಗೀಕರಣ ಮಾಡಬೇಕೆಂದು ಸುಪ್ರೀಂ ಕೋಟ್೯ ಆದೇಶ ಮಾಡಿದರೂ ರಾಜ್ಯ ಸರ್ಕಾರ ಜಾರಿಗೊಳಿಸುವಲ್ಲಿ ವಿಳಂಬ ಧೋರಣೆ ತೋರುತ್ತಿರುವುದು ಸರಿಯಲ್ಲ. ಮೀಸಲಾತಿಯಲ್ಲಿ ವಂಚಿತವಾಗಿ ನೊಂದುಬೆಂದಿರುವ ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಜಾರಿಗೊಳಿಸಿ ಸಕಾ೯ರ ಸಮಾಜದ ಪ್ರೀತಿ ಉಳಿಸಿ ಕೊಳ್ಳಬೇಕು, ಇಲ್ಲವೆಂದಲ್ಲಿ ಮುಂದಿನ ಹೋರಾಟಗಳು ಬಹಳ ಉಘ್ರವಾಗಿರುತ್ತವೆ ಎಂದು ಎಚ್ಚರಿಸಿದರು.ಚಿತ್ರದುಗ೯ ಜಿಲ್ಲಾ ಮಾದಿಗ ಮಹಾಸಭಾ ದ ಮುಖ್ಯಸ್ಥ ಪ್ರಕಾಶ್ ಮೂತಿ೯, ಹಿರಿಯರಾದ ದೊಡ್ಡಘಟ್ಟ ಎಂ.ಲಕ್ಷ್ಮಣ್ , ನಾಕೀಕೆರೆ ತಿಪ್ಪಯ್ಯ ಮಾತನಾಡಿದರು.
ಪಾದಯಾತ್ರೆಯಲ್ಲಿ ಮಾಜಿ ಜಿಪಂ ಉಪಾಧ್ಯಕ್ಷ ಇಟಿಗೆಹಳ್ಳಿ ಆರ್.ರಾಜಪ್ಪ, ಸಮಾಜದ ಮುಖಂಡರುಗಳಾದ ಕೈನಡು ಚಂದ್ರಪ್ಪ, ಲಕ್ಕಿಹಳ್ಳಿ ಮುದ್ದಪ್ಪ, ಶ್ರೀರಾಂಪುರ ಕೃಷ್ಣಮೂತಿ೯, ಶಿವಣ್ಣ , ದೇವಿಗೆರೆ ಮಲ್ಲಿಕಾರ್ಜುನ, ಬೆಲಗೂರು ರಾಘವೇಂದ್ರ , ಮಳಲಿ ಶೇಖರಪ್ಪ, ಆದ್ರಿಕಟ್ಟೆ ಕುಮಾರಪ್ಪ, ಎಂ.ಜಿ.ದಿಬ್ಬ ಕೃಷ್ಣಮೂತಿ೯, ವಕೀಲ ಜ್ಞಾನೇಶ್ , ದ.ಸಂ.ಸಂ ಸಂಚಾಲಕ ಗಿರೀಶ್ ಮಣ್ಣಮ್ಮ , ಹೇಮಾವತಿ , ಪೀಲಾಪುರ ಸ್ತ್ರೀ ಶಕ್ತಿ ಮಹಿಳೆಯರು ಸೇರಿದಂತೆ ತಾಲೂಕಿನ ಎಲ್ಲಾ ಮಾದಿಗ ಸಮಾಜದ ಬಂಧುಗಳು ಭಾಗವಹಿಸಿದ್ದರು.