- ಬೇಗಾನೆ ರಾಮಯ್ಯ ಅಭಿಮಾನಿ ಬಳಗದಿಂದ ಡಾ.ಆರತಿ ಕೃಷ್ಣ ಅವರಿಗೆ ಅಭಿನಂದನಾ ಕಾರ್ಯಕ್ರಮ
ನಾನು ನರಸಿಂಹರಾಜಪುರದಲ್ಲೇ ಶಿಕ್ಷಣ ಪಡೆದು ಬೆಳೆದಿದ್ದೇನೆ. ಈ ಊರಿನಲ್ಲಿ ನನ್ನ ತಂದೆ ಬೇಗಾನೆ ರಾಮಯ್ಯ ಅವರ ಬಗ್ಗೆ ಅಪಾರ ಗೌರವವಿದೆ ಎಂದು ವಿಧಾನ ಪರಿಷತ್ ನೂತನ ಸದಸ್ಯೆ ಡಾ.ಆರತಿ ಕೃಷ್ಣ ತಿಳಿಸಿದರು.
ಪ್ರಥಮ ಬಾರಿಗೆ ಎನ್.ಆರ್.ಪುರಕ್ಕೆ ಆಗಮಿಸಿದ ಡಾ.ಆರತಿ ಕೃಷ್ಣ ಅವರಿಗೆ ಶನಿವಾರ ಪ್ರವಾಸಿ ಮಂದಿರದಲ್ಲಿ ಬೇಗಾನೆ ರಾಮಯ್ಯ ಅಭಿಮಾನಿ ಬಳಗದಿಂದ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ನನ್ನ ರಾಜಕೀಯ ಜೀವನಕ್ಕೂ ಎನ್.ಆರ್.ಪುರ ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಅಭಿಮಾನಿ ಬಳಗ ಮೂಲಕ ಹಲವು ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.ಬೇಗಾನೆ ರಾಮಯ್ಯ ಅಭಿಮಾನಿ ಬಳಗದ ಪ್ರಧಾನ ಸಂಚಾಲಕ ಅಭಿನವ ಗಿರಿರಾಜ್ ಮಾತನಾಡಿ, ಬೇಗಾನೆ ರಾಮಯ್ಯ ಸಚಿವರಾಗಿದ್ದಾಗ ಮಲೆನಾಡು ಭಾಗದಲ್ಲಿ ಕುಡಿಯುವ ನೀರಿನ ಕ್ರಾಂತಿ ಮಾಡಿದ್ದರು. ಗ್ರಾಮೀಣ ಭಾಗದಲ್ಲಿ ಬೋರ್ ವೆಲ್ ಕೊರೆಸಿ ಬೋರ್ ವೆಲ್ ರಾಮಯ್ಯ ಎಂದು ಪ್ರಸಿದ್ಧಿ ಪಡೆದಿದ್ದರು. ಮುಂದಿನ ದಿನಗಳಲ್ಲಿ ಅವರ ಹೆಸರು ಶಾಶ್ವತವಾಗಿ ಉಳಿಯುವಂತಹ ಕಾರ್ಯಕ್ರಮ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಬೇಗಾನೆ ರಾಮಯ್ಯ ಅಭಿಮಾನಿ ಬಳಗದ ಸಹ ಸಂಚಾಲಕ ಕೆ.ಎ.ಅಬೂಬಕರ್, ಅಭಿಮಾನಿ ಬಳಗದ ನಿರ್ದೇಶಕರುಗಳಾದ ಪಿ.ಆರ್.ಸದಾಶಿವ, ಪ್ರಶಾಂತ ಶೆಟ್ಟಿ, ಹಾತೂರು ಪ್ರಭಾಕರ್, ಕೆ.ಎಂ.ಸುಂದರೇಶ್, ಗೇರ್ ಬೈಲು ನಟರಾಜ್ ಹಾಗೂ ಇತರ ಪದಾಧಿಕಾರಿಗಳು ಇದ್ದರು.