ನಿಮ್ಮೊಂದಿಗೆ ನಾನಿರುತ್ತೇನೆ, ನನ್ನೊಂದಿಗೆ ನೀವಿರಿ: ವಿ. ಸೋಮಣ್ಣ

KannadaprabhaNewsNetwork | Published : Aug 5, 2024 12:33 AM

ಸಾರಾಂಶ

ತುಮಕೂರು ಸಂಸದನಾಗಿ ನನ್ನನ್ನು ಆಯ್ಕೆ ಮಾಡಿರುವ ಜನರ ಋಣ ತೀರಿಸಬೇಕಿದೆ. ಸಚಿವನಾಗಿ ಸಾಧ್ಯವಾದಷ್ಟೂ ಕೆಲಸಗಳನ್ನು ಮಾಡುವತ್ತ ನನ್ನ ಗಮನ ಇದೆ. ಎಂದೆಂದೂ ನಿಮ್ಮೊಂದಿಗೆ ನಾನಿರುತ್ತೇನೆ.

ಕನ್ನಡಪ್ರಭ ವಾರ್ತೆ ತುಮಕೂರುತುಮಕೂರು ಸಂಸದನಾಗಿ ನನ್ನನ್ನು ಆಯ್ಕೆ ಮಾಡಿರುವ ಜನರ ಋಣ ತೀರಿಸಬೇಕಿದೆ. ಸಚಿವನಾಗಿ ಸಾಧ್ಯವಾದಷ್ಟೂ ಕೆಲಸಗಳನ್ನು ಮಾಡುವತ್ತ ನನ್ನ ಗಮನ ಇದೆ. ಎಂದೆಂದೂ ನಿಮ್ಮೊಂದಿಗೆ ನಾನಿರುತ್ತೇನೆ.. ನನ್ನೊಂದಿಗೆ ನೀವಿದ್ದು ಸಹಕಾರ ನೀಡಿ ಎಂದು ಕೇಂದ್ರ ರೈಲ್ವೇ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.ಆಗಸ್ಟ್ 18 ರಂದು ನಿಗದಿಯಾಗಿದ್ದ ತುಮಕೂರು ಜಿಲ್ಲಾ ರೈಲ್ವೇ ಪ್ರಯಾಣಿಕರ ವೇದಿಕೆಯ ದಶಮಾನೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭೇಟಿ ಮಾಡಿದ ವೇದಿಕೆಯ ಪದಾಧಿಕಾರಿಗಳಿಗೆ ಸಚಿವ ಸೋಮಣ್ಣ ಅವರು ಮೇಲಿನಂತೆ ಸೂಚನೆ ನೀಡಿದರು. ಸಚಿವರ ಸೂಚನೆಯಂತೆ ದಶಮಾನೋತ್ಸವ ಕಾರ್ಯಕ್ರಮವನ್ನು ಮುಂದೂಡಲಾಯಿತು. ಇದೇ ವೇಳೆ ವೇದಿಕೆಯ ಬೇಡಿಕೆಯಂತೆ ತುಮಕೂರು, ಬೆಂಗಳೂರು ನಡುವೆ ನಿರಂತರ ಸಂಚಾರದ ಡೆಮೋ ರೈಲು ಆರಂಭ, ತುಮಕೂರಿನಲ್ಲಿ ವಂದೇ ಭಾರತ್ ನಿಲುಗಡೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಸಾಧ್ಯವಾದಷ್ಟೂ ಬೇಗ ತುಮಕೂರು ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡುತ್ತೇನೆ. ಇದರೊಂದಿಗೆ ತುಮಕೂರು,ರಾಯದುರ್ಗ ಮತ್ತು ತುಮಕೂರು,ದಾವಣಗೆರೆ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಪ್ರಮುಖ ಕೆಲಸಗಳನ್ನು ಮಾಡಲಾಗುತ್ತಿದೆ. ಈ ಬಗ್ಗೆ ಸದ್ಯದಲ್ಲೇ ಸಂಪೂರ್ಣ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದರು.ವೇದಿಕೆ ದಶಮಾನೋತ್ಸವ ಸಮಿತಿ ಅಧ್ಯಕ್ಷ ಬಿ.ಕೆ. ಜಯಪ್ರಕಾಶ್, ಕಾರ್ಯದರ್ಶಿ ಕರಣಂ ರಮೇಶ್, ಪದಾಧಿಕಾರಿಗಳಾದ ಸಿ. ನಾಗರಾಜ್, ಆರ್. ರಘು ಮತ್ತು ವೀರೇಶ್ ಎಚ್.ಆರ್. ಅವರು ಬೆಂಗಳೂರಿನ ಸಚಿವರ ನಿವಾಸದಲ್ಲಿ ಭೇಟಿಯಾಗಿದ್ದರು.ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆಯ ಫಲಿತಾಂಶ: ತುಮಕೂರು ಜಿಲ್ಲಾ ರೈಲ್ವೇ ಪ್ರಯಾಣಿಕರ ವೇದಿಕೆಯ ದಶಮಾನೋತ್ಸವದ ಅಂಗವಾಗಿ ತುಮಕೂರು ನಗರದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆಯ ಫಲಿತಾಂಶವನ್ನು ವೇದಿಕೆ ಪ್ರಕಟಿಸಿದೆ.ಪ್ರಬಂಧ ಸ್ಪರ್ಧೆಯಲ್ಲಿ ವಿದ್ಯಾನಿಕೇತನ ಶಾಲೆಯ ಹತ್ತನೇ ತರಗತಿ ಎ ವಿಭಾಗದ ವಿದ್ಯಾರ್ಥಿ ತೇಜಸ್ವಿ ಎಸ್ ಪ್ರಥಮ, ಎಂಪ್ರೆಸ್ ಪ್ರೌಢಶಾಲೆಯ ಹತ್ತನೇ ತರಗತಿ ಸಿ ವಿಭಾಗದ ಉಮಾದೇವಿ ಎಚ್.ಆರ್. ದ್ವಿತೀಯ, ವಿದ್ಯಾನಿಕೇತನ ಶಾಲೆಯ ಹತ್ತನೇ ತರಗತಿ ಬಿ ವಿಭಾಗದ ಭೂಮಿಕಾ ಪಿ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ. ಹಿರೇಹಳ್ಳಿಯ ಪ್ರುಡೆನ್ಸ್ ಇಂಟರ್‌ನ್ಯಾಷನಲ್ ಶಾಲೆಯ ಎಂಟನೇ ತರಗತಿ ಡಿ ವಿಭಾಗದ ಸಂಪದ ಎಲ್.ಎಸ್., ಕಾಳಿದಾಸ ಪ್ರೌಢಶಾಲೆಯ ಒಂಭತ್ತನೇ ತರಗತಿಯ ಎ ವಿಭಾಗದ ರೇವತಿ ಮತ್ತು ಚೈತ್ರ, ವಿದ್ಯಾನಿಕೇತನ ಶಾಲೆಯ ಹತ್ತನೇ ತರಗತಿಯ ಬಿ ವಿಭಾಗದ ವೈಷ್ಣವಿ ಆರ್, ಸಿದ್ಧಾರ್ಥ ಗ್ರಾಮಾಂತರ ಶಾಲೆಯ ಹತ್ತನೇ ತರಗತಿ ಬಿ ವಿಭಾಗದ ಬೃಂದಾ ಎಂ.ಎಸ್. ಸಮಾಧಾನಕರ ಬಹುಮಾನ ಪಡೆದುಕೊಂಡಿದ್ದಾರೆ.ಚಿತ್ರಕಲೆ ವಿಭಾಗದಲ್ಲಿ ವಿದ್ಯಾನಿಕೇತನ ಶಾಲೆಯ ಒಂಭತ್ತನೇ ತರಗತಿಯ ವೈಷ್ಣವಿ ಎಂ ಅವರ ಚಿತ್ರ ಪ್ರಥಮ ಬಹುಮಾನ, ಅಂಕಿತ ಶಾಲೆಯ ಹತ್ತನೇ ತರಗತಿಯ ಮನಸ್ವಿ ಡಿ ದ್ವಿತೀಯ ಬಹುಮಾನ ಹಾಗೂ ಸಿದ್ಧಗಂಗಾ ಮಠದ ಪ್ರೌಢಶಾಲೆಯ ಹತ್ತನೇ ತರಗತಿ ಎ ವಿಭಾಗದ ಸಾತ್ವಿಕ್ ಗೌಡ ಎಚ್. ಎಸ್. ತೃತೀಯ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ.ಬಸವೇಶ್ವರ ಪಬ್ಲಿಕ್ ಶಾಲೆಯ ಎಂಟನೇ ತರಗತಿ ಡಿ ವಿಭಾಗದ ಪ್ರೇರಣ ಆರ್, ಚೇತನ ವಿದ್ಯಾಮಂದಿರದ ಒಂಭತ್ತನೇ ತರಗತಿಯ ಮದೀನಾ, ವಿದ್ಯಾನಿಕೇತನ ಪ್ರೌಢಶಾಲೆಯ ಎಂಟನೇ ತರಗತಿ ಬಿ ವಿಭಾಗದ ಪ್ರಥಮ್ ಶ್ರೀರಾಮ್, ಎಂಪ್ರೆಸ್ ಪ್ರೌಢಶಾಲೆಯ ಹತ್ತನೇ ತರಗತಿಯ ಸುಶೀಲಾ, ಸರಸ್ವತಿಪುರಂನ ವಿದ್ಯಾನಿಕೇತನ ಶಾಲೆಯ ಒಂಭತ್ತನೇ ತರಗತಿ ಬಿ ವಿಭಾಗದ ಸುಷ್ಮಿತಾ ಪಿ.ಟಿ., ಮತ್ತು ಶ್ರೀ ಸಿದ್ಧಗಂಗಾ ಪ್ರೌಢಶಾಲೆಯ ಎಂಟನೇ ತರಗತಿ ಬಿ ವಿಭಾಗದ ಮನಿಷಾ ಕೆ.ಎಂ ಸಮಾಧಾನಕರ ಬಹುಮಾನ ಪಡೆದುಕೊಂಡಿದ್ದಾರೆ.ವಿಜೇತರಿಗೆ ತುಮಕೂರು ಜಿಲ್ಲಾ ರೈಲ್ವೇ ಪ್ರಯಾಣಿಕರ ವೇದಿಕೆಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಬಹುಮಾನಗಳನ್ನು ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Share this article