ಕನ್ನಡಪ್ರಭ ವಾರ್ತೆ ವಿಜಯಪುರ
17ನೇ ದಿನಕ್ಕೆ ಕಾಲಿಟ್ಟ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಭೇಟಿ ನೀಡಿ, ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, 150 ಎಕರೆ ಜಮೀನು ಹೊಂದಿರುವ ಏಕೈಕ ಜಿಲ್ಲೆ ನಮ್ಮದು. ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಎಲ್ಲಾ ಅವಕಾಶಗಳಿವೆ. ಕಳೆದ 17 ದಿನಗಳಿಂದ ನ್ಯಾಯಯುತವಾದ ಹೋರಾಟ ಮಾಡುತ್ತಿದ್ದೀರಿ. ಜಿಲ್ಲೆಯ ಶಾಸಕನಾಗಿ ನನ್ನ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ ನಿಮ್ಮ ಹೋರಾಟದಲ್ಲಿ ನಾನು ನಿಮ್ಮೊಂದಿಗೆ ಇರುತ್ತೇನೆ ಎಂದು ಭರವಸೆ ನೀಡಿದರು.
ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ಅಧ್ಯಕ್ಷ ವಿಜಯ ಜಾಧವ, ಬಂಜರಾ ಸಮುದಾಯದ ಮುಖಂಡರಾದ ರಾಜಪಾಲ ಚವ್ಹಾಣ, ಮಹೀಂದ್ರಕುಮಾರ ನಾಯಕ, ರಾಜಕುಮಾರ ಜಾಧವ, ಶೈಲಜಾ ಚವ್ಹಾಣ, ಡಾ.ರವಿದಾಸ ಜಾಧವ, ಅನಿಲ ರಾಠೋಡ ಸೇರಿದಂತೆ ಹಲವರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. ಹೋರಾಟ ಸಮಿತಿಯ ಅರವಿಂದ ಕುಲಕರ್ಣಿ, ಭಗವಾನರೆಡ್ಡಿ, ಅನಿಲ ಹೊಸಮನಿ, ಸುರೇಶ ಬಿಜಾಪುರ, ಭರತಕುಮಾರ.ಹೆಚ್.ಟಿ, ಮಲ್ಲಿಕಾರ್ಜುನ ಬಟಗಿ, ಮಲ್ಲಿಕಾರ್ಜುನ ಕೆಂಗನಾಳ, ಲಕ್ಷ್ಮಣ ಕಂಬಾಗಿ, ಸಿದ್ದಲಿಂಗ ಬಾಗೇವಾಡಿ, ಗೀತಾ.ಎಚ್, ಶಿವಬಾಳಮ್ಮು ಕೊಂಡಗೂಳಿ, ಕಾವೇರಿ ರಜಪೂತ, ದಸ್ತಗೀರ ಉಕ್ಕಲಿ, ಅಕ್ಷಯ ಅಜಮನಿ ಉಪಸ್ಥಿತರಿದ್ದರು.