ತಂದೆ ಮಾರ್ಗದಲ್ಲಿ ಬಿಜೆಪಿ ಸಂಘಟನೆ ಮಾಡುವೆ: ಅರುಣ ಕಾರಜೋಳ

KannadaprabhaNewsNetwork |  
Published : Jun 25, 2025, 12:34 AM IST
ಬಿಜೆಪಿ ಯುವ ಧುರೀಣ ಅರುಣ ಗೋವಿಂದ ಕಾರಜೋಳ ಅವರು ತಮ್ಮ 47ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು | Kannada Prabha

ಸಾರಾಂಶ

ನಮ್ಮ ತಂದೆ ಮಾಜಿ ಡಿಸಿಎಂ, ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಅವರ ಆರ್ಶೀವಾದ ಹಾಗೂ ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆದುಕೊಂಡು ಬಿಜೆಪಿ ಸಂಘಟನೆ ಮಾಡುತ್ತಿದ್ದೇನೆ, ನಾನೂ ಕೂಡ ಅವರಂತೆ ಸಮಾಜ ಮತ್ತು ಜನಸೇವೆ ಮಾಡಬೇಕೆಂದು ಕನಸು ಕಂಡಿದ್ದೇನೆ. ಜನರ ಸಹಾಯ ಮತ್ತು ಸಹಕಾರ ನನ್ನ ಮೇಲೆ ಯಾವತ್ತಿಗೂ ಇದೆ. ಅದನ್ನು ಉಳಿಸಿಕೊಂಡು ಹೋಗುವುದು ನನ್ನ ಜವಾಬ್ದಾರಿಯಾಗಿದೆ ಎಂದು ಬಿಜೆಪಿ ಯುವ ಧುರೀಣ ಅರುಣ ಗೋವಿಂದ ಕಾರಜೋಳ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ನಮ್ಮ ತಂದೆ ಮಾಜಿ ಡಿಸಿಎಂ, ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಅವರ ಆರ್ಶೀವಾದ ಹಾಗೂ ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆದುಕೊಂಡು ಬಿಜೆಪಿ ಸಂಘಟನೆ ಮಾಡುತ್ತಿದ್ದೇನೆ, ನಾನೂ ಕೂಡ ಅವರಂತೆ ಸಮಾಜ ಮತ್ತು ಜನಸೇವೆ ಮಾಡಬೇಕೆಂದು ಕನಸು ಕಂಡಿದ್ದೇನೆ. ಜನರ ಸಹಾಯ ಮತ್ತು ಸಹಕಾರ ನನ್ನ ಮೇಲೆ ಯಾವತ್ತಿಗೂ ಇದೆ. ಅದನ್ನು ಉಳಿಸಿಕೊಂಡು ಹೋಗುವುದು ನನ್ನ ಜವಾಬ್ದಾರಿಯಾಗಿದೆ ಎಂದು ಬಿಜೆಪಿ ಯುವ ಧುರೀಣ ಅರುಣ ಗೋವಿಂದ ಕಾರಜೋಳ ಹೇಳಿದರು.

ನಗರದ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ತಮ್ಮ 47ನೇ ಜನ್ಮ ದಿನಾಚರಣೆ ಆಚರಿಸಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಅಭಿಮಾನಿ ಬಳಗದವರು, ಆತ್ಮೀಯ ಮಿತ್ರರು, ಬಿಜೆಪಿ ಮುಖಂಡರು, ಕಾರ್ಯಕರ್ತರು, ನಾಗರಿಕರು ನನ್ನ ಮೇಲಿನ ಅಭಿಮಾನ ಮತ್ತು ಪ್ರೀತಿಯಿಂದ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕೆ ಋಣಿಯಾಗಿದ್ದೇನೆ ಎಂದು ಹೇಳಿದರು.ಮುಧೋಳ ಮತಕ್ಷೇತ್ರದ ಜನತೆ ನನ್ನ ತಂದೆಯನ್ನು ಬೆಳೆಸಿದಂತೆ ನನ್ನನ್ನೂ ಸಹ ಬೆಳೆಸುತ್ತಿದ್ದಾರೆ. ನಾನು ಚಿರಋಣಿಯಾಗಿರುತ್ತೇನೆ. ಕ್ಷೇತ್ರದ ಜನರು ನನ್ನ ಮೇಲೆ ಅಪಾರ ನಂಬಿಕೆ, ವಿಶ್ವಾಸ, ಪ್ರೀತಿ ಇದೆ, ನಾನು ಕೂಡಾ ಕ್ಷೇತ್ರದ ಜನತೆಯ ಸೇವೆ ಮಾಡುವ ಹಂಬಲ ನನ್ನದಿದೆ, ಅವಕಾಶ ಸಿಕ್ಕರೆ ಅದನ್ನು ಸದ್ಬಳಕೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.

ನನ್ನ 47ನೇ ಜನ್ಮದಿನ ನಿಮಿತ್ತ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ನಗರದ ಗಣಪತಿ ದೇವಸ್ಥಾನ ಹಾಗೂ ದತ್ತ ಮಂದಿರದಲ್ಲಿ ವಿಶೇಷ ಪೂಜೆ ಆಯೋಜಿಸಿ ನನಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿರುವುದಕ್ಕೆ ಅವರಿಗೆಲ್ಲರಿಗೂ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಅರುಣ ಕಾರಜೋಳ ಅವರ ತಾಯಿ ಶಾಂತಾದೇವಿ, ಪುತ್ನಿ ಪುಷ್ಪಾ ಹಾಗೂ ಮಕ್ಕಳು, ಬಿಜೆಪಿ ಮುಖಂಡರಾದ ಕೆ.ಆರ್. ಮಾಚಪ್ಪನವರ, ಹನುಮಂತ ತುಳಸಿಗೇರಿ, ಶ್ರೀಕಾಂತ ಗುಜ್ಜನ್ನವರ, ರಾಜು ಯಡಹಳ್ಳಿ, ರವಿ ಮಾಚಪ್ಪನವರ, ಮುಕುಂದ ನಿಂಬಾಳಕರ, ಎಂ.ಎಸ್. ಹಂಚಿನಾಳ, ಹೊಳಬಸು ಬಟಕುರ್ಕಿ, ಕಲ್ಲಪ್ಪಣ್ಣ ಸಬರದ, ಸಂಗಣ್ಣ ಕಾತರಕಿ, ಲೋಕಣ್ಣ ಕತ್ತಿ, ಲಕ್ಷ್ಮಣ ಚಿನ್ನಣ್ಣವರ, ಸದಾಶಿವ ತೇಲಿ, ಡಾ.ರವಿ ನಂದಗಾಂವ, ಬಸವರಾಜ ಮಳಲಿ, ಕಲ್ಮೇಶ ಗೋಸಾರ, ನಾಗಪ್ಪ ಅಂಬಿ, ಶ್ರೀಶೈಲ ಚಿನ್ನಣ್ಣವರ, ಸದಾಶಿವ ಇಟಕನ್ನವರ, ವಿವೇಕಾನಂದ ಪಾಟೀಲ, ಲಕ್ಷ್ಮಣ ರಾಘಣ್ಣವರ, ರಾಘು ಶಿಂಧೆ, ರಾಜಶೇಖರ ಭರಮೋಜಿ, ವೆಂಕಪ್ಪ ಲೆಂಕಣ್ಣವರ, ಚಿದಾನಂದ ಪಂಚಕಟ್ಟಿಮಠ, ವಿವೇಕಾನಂದ ಹವಳಖೋಡ, ವೀರೇಶ ಪಂಚಕಟ್ಟಿಮಠ ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು, ಹಿತೈಷಿಗಳು ಅರುಣ ಗೋ. ಕಾರಜೋಳ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿದರು.

PREV

Recommended Stories

ಭಕ್ತರ ಸಹಕಾರದಿಂದ ದೇವಸ್ಥಾನದಲ್ಲಿ ಹೊಸತನ
ಪತ್ನಿ ಮೇಲೆ ಹಲ್ಲೆಗೈದು ಅರ್ಧ ತಲೆ ಬೋಳಿಸಿದ ಪತಿ