ಬಿ. ಶೇಖರ್ ಗೋಪಿನಾಥಂ
ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದ ಈಡಿಗ- ಬಿಲ್ಲವ ಮತ್ತು ಅದರ ಉಪ ಜಾತಿಗಳ ಕುಲಶಾಸ್ತ್ರೀಯ ಅಧ್ಯಯನವನ್ನು ಮೈಸೂರು ವಿಶ್ವವಿದ್ಯಾನಿಲಯವು ಆರಂಭಿಸಿದೆ.
ರಾಜ್ಯ ಸರ್ಕಾರದ ಡಿ. ದೇವರಾಜ ಅರಸು ಸಂಶೋಧನಾ ಸಂಸ್ಥೆ ಪ್ರಾಯೋಜಕತ್ವದಲ್ಲಿ ಮೈಸೂರು ವಿವಿ ಸಾಮಾಜಿಕ ಒಳಗೊಳ್ಳುವಿಕೆ ಅಧ್ಯಯನ ಕೇಂದ್ರವು (ಸಿಎಸ್‌ಎಸ್‌ಐ) ಈ ಕುಲಶಾಸ್ತ್ರೀಯ ಅಧ್ಯಯನವನ್ನು ಕೈಗೊಂಡಿದೆ. ಈ ಸಂಬಂಧ ಎಲ್ಲಾ ಪೂರ್ವ ಸಿದ್ಧತೆಗಳು ಪೂರ್ಣಗೊಳಿಸಿ ಸಂಶೋಧನಾ ತಂಡವನ್ನು ಸಹ ರಚಿಸಲಾಗಿದೆ.ಈಗಾಗಲೇ ರಾಜ್ಯ ಸರ್ಕಾರವು 18.75 ಲಕ್ಷ ರೂ. ಮೈಸೂರು ವಿವಿಗೆ ಬಿಡುಗಡೆ ಮಾಡಿದೆ. ಇದಕ್ಕೆ ಬೇಕಾದ ಫೈಲೆಟ್ ಅಧ್ಯಯನ ಮುಗಿದಿದ್ದು, ಅಧ್ಯಯನದ ರೂಪರೇಷೆಯನ್ನು ಸಹ ಅಂತಿಮಗೊಳಿಸಲಾಗಿದೆ.
ಈ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ಕುರಿತು ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ಸಹ ನಡೆದಿತ್ತು. ಒಳ ಮೀಸಲಾತಿಯ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಈಡಿಗ- ಬಿಲ್ಲವ ಉಪಜಾತಿಗಳ ಕುಲಶಾಸ್ತ್ರೀಯ ಅಧ್ಯಯನ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ.
ಸರ್ಕಾರದ ಪಟ್ಟಿ ಕ್ರಮ ಸಂಖ್ಯೆ 155 ಅನ್ವಯ ಈಡಿಗ- ಬಿಲ್ಲವ ಸಮುದಾಯವು ಈಡಿಗ, ಬೆಳ್ಚಡ್, ಪೂಜಾರಿ, ದೇಶ ಭಂಡಾರಿ, ಇಡಿಗ, ಎಲಿಗಾ, ಇಲಿಗಾ ಹಳೇ ಪೈಕ್, ಹಳೇಪೈಕಾರು, ಬಿಲ್ಲವ, ದೇವರ್, ಮಲೆಯಾಳಿ ಬಿಲ್ಲವ, ದೀವರ್, ದೇವರಮಕ್ಕಳು, ದಿವರಮಕ್ಕಳು, ನಾಮಧಾರಿ, ಕಲಾಲ್, ಗೌಂಡ್ಲಾ, ಗೂಂಡ್ಲಾ, ಥಿಯಾನ್, ತಿಯ್ಯನ್, ತಿಯಾನ್, ಈಜವ, ತಿಯ್ಯ, ನಾಡರ್, ಗಮಲ್ಲ ಎಂಬ 26 ಉಪಜಾತಿಗಳನ್ನು ಹೊಂದಿದೆ.
----
ಫೋಟೋ- 24ಎಂವೈಎಸ್35
ಕಳೆದ ಆರ್ಥಿಕ ವರ್ಷದಲ್ಲಿ ಆರಂಭವಾಗಬೇಕಿದ್ದ ಅಧ್ಯಯನ ತಾಂತ್ರಿಕ ಕಾರಣಗಳಿಂದ ವಿಳಂಬಗೊಂಡಿತ್ತು. ರಾಜ್ಯ ಸರ್ಕಾರ ಈಗಾಗಲೇ ಒಟ್ಟು 18.75 ಲಕ್ಷಗಳನ್ನು ವಿವಿಗೆ ಬಿಡುಗಡೆ ಮಾಡಿದೆ. ಪ್ರತಿ ಜಿಲ್ಲೆಯಲ್ಲಿರುವ ಈ ಸಮುದಾಯದ ಸಾಮಾಜಿಕ ಆರ್ಥಿಕ ಮತ್ತು ಸಾಂಸ್ಕೃತಿಕ ಅಂಶಗಳ ಕುರಿತು ಆಳವಾದ ಮಾಹಿತಿ ಸಂಗ್ರಹಿಸಲಾಗುವುದು. ಅಧ್ಯಯನಕ್ಕೆ 18 ತಿಂಗಳಿಗಿಂತ ಹೆಚ್ಚಿನ ಸಮಯ ಬೇಕಾಗಿದೆ. ವರದಿಯೊಂದಿಗೆ ಸಮುದಾಯದ ಸಾಕ್ಷ್ಯಚಿತ್ರವನ್ನು ಸಹ ತಯಾರಿಸಬೇಕಾಗಿದೆ.