ರಾಮನಗರ: ಮಂಡ್ಯ-ಮದ್ದೂರು ಬಳಿ 5 ಸಾವಿರ ಎಕರೆ ಜಾಗ ನಾನು ಕೊಡಿಸುತ್ತೇನೆ. ಕೇಂದ್ರ ಸಚಿವ ಕುಮಾರಸ್ವಾಮಿಯವರು ಅಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆ ಮಾಡಲಿ. ಜಾಗ ಕೊಡಿಸದಿದ್ದರೆ ನಾನೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಸವಾಲು ಹಾಕಿದರು.
ಕುಮಾರಸ್ವಾಮಿಗೆ ಪದ್ಮಶ್ರೀ ಕೊಡ್ಬೇಕು:
ಈಗ ರಾಮನಗರ ಮತ್ತು ಚನ್ನಪಟ್ಟಣದವರ ಖುಣ ತೀರಿಸೋದು ಬೇಡ. ಮಂಡ್ಯಕ್ಕೆ ಹೋಗಿದ್ದಾರಲ್ಲ, ಆ ಜನರ ಋಣವನ್ನಾದರು ತೀರಿಸಲಿ. ಮಂಡ್ಯದಲ್ಲಿ ಪ್ರಚಾರ ಮಾಡುವಾಗ 10 ನಿಮಿಷದಲ್ಲಿ ಮೇಕೆದಾಟು ಯೋಜನೆ ಮಾಡಿಸುತ್ತೇನೆ ಅಂದಿದ್ದರು. ಈಗ ಅದರ ಬಗ್ಗೆ ಮಾತನಾಡುತ್ತಲೇ ಇಲ್ಲ. ಮೇಕೆದಾಟು ಯೋಜನೆಯಿಂದ ನಮ್ಮ ಜಿಲ್ಲೆಗೆ ಅನುಕೂಲ ಇಲ್ಲ. ಅವರು ಹುಟ್ಟಿದ ಜಿಲ್ಲೆ ಹಾಸನ, ಈಗ ಸಂಸದರಾಗಿರುವ ಮಂಡ್ಯ ಜಿಲ್ಲೆಗೆ ಅನುಕೂಲ. ಕೆಲಸ ಮಾಡದೆ ಡೌವ್ ಮಾಡಿಕೊಂಡು ತಿರುಗಾಡುತ್ತಿದ್ದಾರೆ. ಸುಳ್ಳು ಹೇಳುವುದರಲ್ಲಿ, ಅಸೂಯೆ ಪಡುವುದರಲ್ಲಿ ಕುಮಾರಸ್ವಾಮಿಗೆ ಪದ್ಮಶ್ರೀ ಕೊಡಿಸಬೇಕು ಎಂದು ಸುರೇಶ್ ವ್ಯಂಗ್ಯವಾಡಿದರು.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಇಲ್ಲಿ ಒಂದೇ ಒಂದು ಸೇತುವೆ ಮಾಡಲಿಲ್ಲ. 25 ವರ್ಷ ರಾಜಕೀಯ ಮಾಡಿ ಯಾವುದೇ ಅಭಿವೃದ್ಧಿ ಮಾಡಲಿಲ್ಲ. ಅಭಿವೃದ್ಧಿ ಅಂದರೆ ಮಾಧ್ಯಮಗಳಿಗೆ ಭಾಷಣ ಮಾಡಿ ಹೋಗೋದಲ್ಲ. ಋಣ ತೀರಿಸೋದು ಅಂದರೆ ಹಳ್ಳಿಹಳ್ಳಿಗೆ ಹೋಗಿ ಕೆಲಸ ಮಾಡಬೇಕು. ಕೇಂದ್ರದಲ್ಲೂ ಕೆಲಸ ಇಲ್ಲ, ರಾಜ್ಯದಲ್ಲೂ ಕೆಲಸ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿದಂತೆ ಐದು ಗ್ಯಾರಂಟಿ ಜಾರಿ ಮಾಡಿ ಹೊಸ ಕ್ರಾಂತಿ ಸೃಷ್ಟಿಸಿ, ಪ್ರತಿ ಕುಟುಂಬಕ್ಕೂ ತಲುಪಿಸುವ ಕೆಲಸ ಮಾಡಿದ್ದೇವೆಯೇ ಹೊರತು, ಒಂದು ಜಾತಿ, ಒಂದು ಧರ್ಮ ಅಥವಾ ಒಂದು ಪಕ್ಷಕ್ಕೆ ಸೀಮಿತ ಮಾಡಿಲ್ಲ. ಕರ್ನಾಟಕದಲ್ಲಿರುವ ಎಲ್ಲರನ್ನು ಒಂದು ಎಂದು ಭಾವಿಸಿ ಗ್ಯಾರಂಟಿ ಯೋಜನೆ ನೀಡಿದ್ದೇವೆ. ರಾಜ್ಯದಲ್ಲಿ ಸುಮಾರು 1.70 ಕೋಟಿ ಕುಟುಂಬಗಳಿದ್ದು, ಅದರಲ್ಲಿ 1.50 ಕೋಟಿ ಕುಟುಂಬಗಳು ಗ್ಯಾರಂಟಿ ಲಾಭ ಪಡೆದಿವೆ. ಪ್ರತಿ ಕುಟುಂಬಕ್ಕೆ 74 ರಿಂದ 76 ಸಾವಿರ ಹಣ ತಲುಪಿದೆ. ಆದರೂ ರಾಜ್ಯ ಸರ್ಕಾರ ದಿವಾಳಿಯಾಗಿದೆ ಅಂತ ಟೀಕೆ ಮಾಡುತ್ತಿದ್ದಾರೆ. ಸರ್ಕಾರ ದಿವಾಳಿಯಾಗಿಲ್ಲ. ಸರ್ಕಾರ ಪ್ರತಿ ಮನೆಯ ಜ್ಯೋತಿ ಬೆಳಗುತ್ತಿದೆ ಎಂದು ಹೇಳಿದರು.
ಹಾಲಿನ ದರ ಹೆಚ್ಚಳ ಮಾಡಿದರೂ ಟೀಕೆ ಮಾಡುವ ವಿರೋಧ ಪಕ್ಷಗಳು ಪೆಟ್ರೋಲ್, ಡೀಸೆಲ್, ವಿಸ್ಕಿ, ಗ್ಯಾಸ್ ಬೆಲೆ ಹೆಚ್ಚಾದಾಗ ಸುಮ್ಮನಿದ್ದವರು ರೈತರಿಗೆ ಅನುಕೂಲ ಮಾಡಿಕೊಟ್ಟರೆ ಬೀದಿಗಿಳಿದು ಹೋರಾಡ್ತಾರೆ ಎಂದು ಬಿಜೆಪಿ - ಜೆಡಿಎಸ್ ನಾಯಕರ ವಿರುದ್ಧ ಕಿಡಿಕಾರಿದರು.
ಕೋಟ್ .............
-ಡಿ.ಕೆ.ಸುರೇಶ್ , ಅಧ್ಯಕ್ಷರು, ಬಮೂಲ್
ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಯರೇಹಳ್ಳಿ ಗ್ರಾಮದಲ್ಲಿ ವೇದಿಕೆ ಕಾರ್ಯಕ್ರಮವನ್ನು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಉದ್ಘಾಟಿಸಿದರು.