ಕ್ಷೇತ್ರದ ಅಭಿವೃದ್ಧಿ ಮೂಲಕ ಋಣ ತೀರಿಸುತ್ತೇನೆ: ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್

KannadaprabhaNewsNetwork |  
Published : Oct 20, 2025, 01:04 AM IST
ಪೊಟೋ ಪೈಲ್ ನೇಮ್ 19ಎಸ್‌ಜಿವಿ೧  ತಾಲೂಕಿನ ಕುನ್ನೂರು ಗ್ರಾಮ ಪಂಚಾಯಿತಿ ವಿವಿಧ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿ, ಗ್ರಾಮ ಪಂಚಾಯತ ಆವರಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್ ಅವರನ್ನು ಸನ್ಮಾನಿಸಿ ಗೌರವಿಸಿದರು. | Kannada Prabha

ಸಾರಾಂಶ

ಜನಸೇವೆ ಮಾಡಲು ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ ನಿಮ್ಮೆಲ್ಲರ ಋಣವನ್ನು ಕ್ಷೇತ್ರವನ್ನು ಅಭಿವೃದ್ಧಿ ಮಾಡುವ ಮೂಲಕ ತೀರಿಸುತ್ತೇನೆ ಎಂದು ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್ ಹೇಳಿದರು.

ಶಿಗ್ಗಾಂವಿ: ಜನಸೇವೆ ಮಾಡಲು ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ ನಿಮ್ಮೆಲ್ಲರ ಋಣವನ್ನು ಕ್ಷೇತ್ರವನ್ನು ಅಭಿವೃದ್ಧಿ ಮಾಡುವ ಮೂಲಕ ತೀರಿಸುತ್ತೇನೆ ಎಂದು ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್ ಹೇಳಿದರು.ತಾಲೂಕಿನ ಕುನ್ನೂರು ಗ್ರಾಮ ಪಂಚಾಯಿತಿ ವಿವಿಧ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿ, ಗ್ರಾಮ ಪಂಚಾಯತ ಆವರಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಕ್ಷೇತ್ರದಲ್ಲಿ ಇನ್ನೂ ಸಾಕಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳು ಆಗಬೇಕಿದೆ, ಗ್ರಾಮಗಳಲ್ಲಿ ಸಂಚರಿಸುವಾಗ ಹಲವಾರು ಸಮಸ್ಯೆಗಳನ್ನಿಟ್ಟುಕೊಂಡು ಜನರು ಬೇಡಿಕೆ ಅರ್ಜಿ ಸಲ್ಲಿಸುತ್ತಿದ್ದಾರೆ. ಇದನ್ನೆಲ್ಲಾ ನೋಡಿದಾಗ ಜನರ ಸಮಸ್ಯೆಗಳು ಸ್ಪಷ್ಟವಾಗಿ ಗೊತ್ತಾಗುತ್ತವೆ. ಸರ್ಕಾರದಿಂದ ಹೆಚ್ಚಿನ ಅನುದಾನ ತರುವ ಮೂಲಕ ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತೇನೆ ಎಂದರು.

ಸಾಮಾನ್ಯ ರೈತರ ಮಕ್ಕಳು, ಕಾರ್ಮಿಕರ ಮಕ್ಕಳು, ಬಡವರ ಮಕ್ಕಳಿಗೆ ಕನ್ನಡದೊಂದಿಗೆ ಇಂಗ್ಲಿಷ್ ಮಾಧ್ಯಮ ಶಿಕ್ಷಣವೂ ಸಿಗಬೇಕು ಎನ್ನುವ ದೃಷ್ಟಿಯಿಂದ ಶಿಕ್ಷಣದ ಮೇಲಿರುವ ಕಾಳಜಿಯಿಂದ ಇದೀಗ ೩ ಕೆಪಿಎಸ್‌ಸಿ ಶಾಲೆಯನ್ನು ಮಂಜೂರು ಮಾಡಲಾಗಿದ್ದು, ಇದರಲ್ಲಿ ಎಲ್‌ಕೆಜಿಯಿಂದ ಪಿಯುಸಿ ವರಗೂ ಇಂಗ್ಲಿಷ್ ಮಾಧ್ಯಮದಲ್ಲಿ ಇಲ್ಲಿಯೇ ಕಲಿಯಬಹುದಾಗಿದೆ. ಕೋಣನಕೇರಿ, ಹಿರೇಬೆಂಡಿಗೇರಿ, ಮಾವೂರ ಇಂಗ್ಲಿಷ ಮಾಧ್ಯಮ ಶಾಲೆಗಳನ್ನು ಮಂಜೂರಿಸಲಾಗಿದೆ. ಮುಂದಿನ ದಿನಮಾನಗಳಲ್ಲಿ ಗ್ರಾಮ ಪಂಚಾಯತಿಗೊಂದರಂತೆ ಸರ್ಕಾರಿ ಇಂಗ್ಲಿಷ್ ಮಾಧ್ಯಮ ಶಾಲೆ ತರುವ ಉದ್ದೇಶವಿದೆ ಎಂದರು.

ಬಸ್ ನಿಲ್ದಾಣ ಹಾಳಾಗಿದ್ದು ನೂತನ ಬಸ್ ನಿಲ್ದಾಣ, ಸ್ಥಳೀಯವಾಗಿ ಬ್ಯಾಂಕ್ ವ್ಯವಸ್ಥೆಯನ್ನು ಕಲ್ಪಿಸುವ ಹಾಗೂ ಹಾನಗಲ್ ಹುಬ್ಬಳ್ಳಿ ರಸ್ತೆಯ ಸ್ಮಶಾನದಿಂದ ಕಲಸಾರದವರೆಗೆ ಸಿಸಿ ಚರಂಡಿಯನ್ನು ನಿರ್ಮಿಸುವುದು, ವಸತಿ ನಿಲಯವನ್ನು ಸೇರಿದಂತೆ ತಾವು ಕೊಟ್ಟ ಮನವಿಗೆ ಹಂತ ಹಂತವಾಗಿ ಸ್ಪಂದಿಸುವುದಾಗಿ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಉಪ್ಪಾರ ವಹಿಸಿದ್ದರು.ಇದೆ ಸಂದರ್ಭದಲ್ಲಿ ಗ್ರಾಮದ ಚನ್ನವೀರಸ್ವಾಮಿ (ಚಿಮ್ಮೂ) ಹಿರೇಮಠ ಯುವ ಬಳಗದಿಂದ ಹಾಗೂ ಗ್ರಾಮ ಪಂಚಾಯತಿ ಪರವಾಗಿ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು.ತಾಲೂಕು ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ಎಸ್‌.ಎಫ್. ಮಣಕಟ್ಟಿ, ಜಿಲ್ಲಾ ಉಪಾಧ್ಯಕ್ಷ ಗುಡ್ಡಪ್ಪ ಜಲದಿ, ಬಾಬರ ಬುವಾಜಿ, ಯುವ ಮುಖಂಡ ಆನಂದ ಲಮಾಣಿ, ಗ್ರಾಪಂ ಸದಸ್ಯ ಡಿ.ಆರ್. ಬೊಮ್ಮನಳ್ಳಿ , ಮೈಲಾರೆಪ್ಪ ಇಂದೂರ, ಚಂದ್ರಣ್ಣಾ, ಜಿ.ಪಂ. ಮಾಜಿ ಸದಸ್ಯ ರಮೇಶ ದುಗ್ಗತ್ತಿ, ಅಣ್ಣಪ್ಪ ಲಮಾಣಿ, ಮಾಬೂಸಾಬ ಜಿಗಳೂರ, ನಾಷೀರಾಬಾನು ಬಂಕಾಪೂರ, ನಿಂಗಪ್ಪ ಮಾದರ, ಶಂಕರಗೌಡ (ಮುತ್ತು) ಬಿ. ಪಾಟೀಲ, ಸುಮಂತಗೌಡ ಪಾಟೀಲ, ಜೈಲಾನಿ ಮತ್ತೇಖಾನ, ಈರಪ್ಪ ಗೋಣಿ, ಸುಬಾಸ ಮರಿಸಿದ್ದಣ್ಣವರ, ಅಬ್ಬಾಸಲಿ ಮತ್ತೇಖಾನ, ಅಸ್ಲಾಂ ತಡಸ, ಅನೀಸ್ ಬೊಮ್ಮನಲ್ಲಿ, ಅಬ್ದುಲ್ ಮತ್ತೇಖಾನ್, ಬಾಬೂಲಾಲ ತಡಸ, ಇಮಾಮಸಾಬ ಕುರಟ್ಟಿ, ರಾಯಪ್ಪ ಸಾವಂತಣ್ಣವರ, ಗ್ರಾ.ಪಂ.ಸಿಬ್ಬಂದಿ ವರ್ಗ ಸೇರಿದಂತೆ ಹಲವಾರು ಮುಖಂಡರು ಗ್ರಾಮಸ್ಥರು ಇದ್ದರು.ಗ್ರಾ.ಪಂ. ಸದಸ್ಯ ಲಕ್ಷ್ಮಣ್ಣಾ ಬೇಂಡಲಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾರ್ಜುನ ಮಾಳೋಜನವರ ಕಾರ್ಯಕ್ರಮ ನಿರುಪಿಸಿದರು. ಶಿಗ್ಗಾಂವಿ- ಸವಣೂರ ಸಾಕಷ್ಟು ಅಭಿವೃದ್ಧಿ ಹೊಂದಿದೆ ಎಂದು ಹೇಳುತ್ತಾರೆ. ಪ್ರತಿಯೊಂದು ಕಾರ್ಯಕ್ರಮದಲ್ಲಿಯೂ ನೂರಾರು ಮನವಿಗಳು ಅಭಿವೃದ್ಧಿಗಾಗಿ ಬರುತ್ತಿವೆ. ಕೇಳಿದ್ದ ಕೆಲಸ ತಕ್ಷಣವಾಗಿ ಸ್ಪಂದಿಸುತ್ತೇನೆ ಎಂದು ಶಾಸಕ ಯಾಶೀರಅಹ್ಮದಖಾನ್ ಪಠಾಣ ಹೇಳಿದರು.

PREV

Recommended Stories

ಖಾಸಗಿ ಸಂಘಟನೆಗಳಿಗೆ ನಿಷೇಧ ಹೇರಿದ್ದು ಜಗದೀಶ್‌ ಶೆಟ್ಟರ್‌ : ಪರಂ
ಕರ್ನಾಟಕಕ್ಕೆ ₹385 ಕೋಟಿ ಕೇಂದ್ರೀಯ ನೆರೆ ಪರಿಹಾರ