ರೈತರಿಗೆ ಧ್ವನಿಯಾಗಿ ನಿಲ್ಲುತ್ತೇನೆ: ರಾಜೂಗೌಡ

KannadaprabhaNewsNetwork |  
Published : Oct 30, 2026, 01:15 AM IST
ನ.30 ರವರೆಗೆ ಕಾಲುವೆಗಳಿಗೆ ನೀರು ಹರಿಸಬೇಕೆಂದು ನಾರಾಯಣಪುರದ ಕೃಷ್ಣಾ ಭಾಗ್ಯ ಜಲ ನಿಗಮದ (ಕೆಬಿಜೆಎನ್‌ಎಲ್) ಕಚೇರಿಯ ಮುಂದೆ ಕಳೆದ 5 ದಿನಗಳಿಂದ ಜರುಗುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ಸ್ಥಳಕ್ಕೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವರಾದ ನರಸಿಂಹನಾಯಕ (ರಾಜೂಗೌಡ) ಭೇಟಿ ನೀಡಿ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. | Kannada Prabha

ಸಾರಾಂಶ

I will stand as a voice for the farmers: Rajugowda

- ಕಾಲುವೆಗಳಿಗೆ ನೀರು ಹರಿಸಲು ಆಗ್ರಹಿಸಿ ರೈತರ ಧರಣಿ । ಸ್ಥಳಕ್ಕೆ ಮಾಜಿ ಸಚಿವ ರಾಜೂಗೌಡ ಭೇಟಿಕನ್ನಡಪ್ರಭ ವಾರ್ತೆ ಕೊಡೇಕಲ್

ನ.30 ರವರೆಗೆ ಕಾಲುವೆಗಳಿಗೆ ನೀರು ಹರಿಸಬೇಕೆಂದು ನಾರಾಯಣಪುರದ ಕೃಷ್ಣಾ ಭಾಗ್ಯ ಜಲ ನಿಗಮದ (ಕೆಬಿಜೆಎನ್‌ಎಲ್) ಕಚೇರಿಯ ಮುಂದೆ ಕಳೆದ 5 ದಿನಗಳಿಂದ ಜರುಗುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ಸ್ಥಳಕ್ಕೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವರಾದ ನರಸಿಂಹನಾಯಕ (ರಾಜೂಗೌಡ) ಭೇಟಿ ನೀಡಿ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಧರಣಿನಿರತ ರೈತರೊಂದಿಗೆ ಮಾತನಾಡಿದ ಅವರು, ರೈತರ ಸಮಸ್ಯೆಗಳಿಗೆ ಸರ್ಕಾರ ಕೂಡಲೇ ಸ್ಪಂದಿಸುವುದು ಅತ್ಯಂತ ಅಗತ್ಯವಾಗಿದೆ. ಕೃಷಿ ಚಟುವಟಿಕೆಗಳಿಗೆ ನೀರು ದೊರೆಯದೆ ರೈತರು ಸಂಕಷ್ಟ ಎದುರಿಸುವಂತಾಗಬಾರದು. ರೈತರ ನ್ಯಾಯಯುತ ಬೇಡಿಕೆಗಳಿಗೆ ಸಂಬಂಧಪಟ್ಟವರು ಸೂಕ್ತವಾಗಿ ಸ್ಪಂದಿಸಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಅಧಿಕಾರ ಇರಲಿ ಇಲ್ಲದಿರಲಿ ಯಾವುದೇ ಸಂದರ್ಭದಲ್ಲಿ ರೈತರು ನನ್ನನ್ನು ಕರೆದರೂ, ರೈತರ ಧ್ವನಿಯಾಗಿ ಅವರ ಪರವಾಗಿ ನಿಲ್ಲುತ್ತೇನೆ ಎಂದು ಭರವಸೆ ನೀಡುವ ಮೂಲಕ ರೈತರಿಗೆ ಧೈರ್ಯ ತುಂಬಿದರು.

ಮಣ್ಣಿನ ಮಕ್ಕಳ ಹಿತ ಕಾಪಾಡಿ:

ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರ ಅವಧಿಯಲ್ಲಿ ಇದೇ ತರಹದ ಬರ ಸ್ಥಿತಿ ಎದುರಾದಾಗ, ರಾಜ್ಯ ಸರ್ಕಾರದ ಮೂಲಕ ₹5 ಕೋಟಿ ದುಡ್ಡು ಕೊಟ್ಟು ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ನೀರು ತರುವಂತಹ ಕಾರ್ಯ ನಾವು ಮಾಡಿದ್ದೇವೆ. ಈಗಲೂ ಕೂಡಾ ಸರ್ಕಾರ ದಿಟ್ಟ ನಿರ್ಧಾರ ಮಾಡಿ ನೆರೆ ರಾಜ್ಯದಿಂದ ನೀರು ತರಿಸಿ ಮಣ್ಣಿನಮಕ್ಕಳ ಹಿತ ಕಾಯಬೇಕಿದೆ ಎಂದು ಆಗ್ರಹಿಸಿದರು.

ನಾನು ರಾಜಕೀಯ ಉದ್ದೇಶದಿಂದ ಇಲ್ಲಿ ಮಾತನಾಡಲು ಬಂದಿಲ್ಲ. ರೈತರ ಪರವಾಗಿ ನಿಲ್ಲಲು ಬಂದಿದ್ದೇನೆ ಎಂದ ರಾಜೂಗೌಡ, ನಿಮ್ಮ ಹೋರಾಟವನ್ನು ನನ್ನ ರಾಜಕೀಯ ಲಾಭಕ್ಕಾಗಿ ಹೈಜಾಕ್ ಮಾಡಲು ನಾನು ಇಲ್ಲಿಗೆ ಬಂದಿಲ್ಲ. ಇದು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾದ ಹೋರಾಟವಲ್ಲ ರೈತರ ಹಿತಕ್ಕಾಗಿ ನಡೆಯುತ್ತಿರುವ ಪಕ್ಷಾತೀತ ಹೋರಾಟವಾಗಿದೆ ಎಂದು ಸ್ಪಷ್ಟಪಡಿಸಿದರು.

ರೈತರ ಹೋರಾಟಕ್ಕೆ ರಾಜಕೀಯ ಬಣ್ಣ ಹಚ್ಚದೆ, ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಪರಿಹಾರ ಕಂಡುಕೊಳ್ಳುವುದು ಮುಖ್ಯವಾಗಿದೆ. ರೈತರು

ರಾಜಕೀಯ ಲಾಭದ ಉದ್ದೇಶವಿಲ್ಲ:

ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವಾಗ ಅವರ ಧ್ವನಿಗೆ ಧ್ವನಿಯಾಗಿ ನಿಲ್ಲುವುದು ಅಗತ್ಯವೇ ಹೊರತು, ಆ ಹೋರಾಟದಿಂದ ರಾಜಕೀಯ ಲಾಭ ಪಡೆಯುವ ಉದ್ದೇಶ ನನಗಿಲ್ಲ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ರೈತರ ಮಹತ್ವವನ್ನು ಒತ್ತಿಹೇಳಿದ ರಾಜೂಗೌಡ ಅವರು, ರೈತರು ಇದ್ದರೆ ಮಾತ್ರ ನಮ್ಮಂತಹ ರಾಜಕೀಯ ನಾಯಕರು, ಅಧಿಕಾರಿಗಳು ಹಾಗೂ ಇಡೀ ಸಮಾಜ ನೆಮ್ಮದಿಯಿಂದ ಬದುಕಲು ಸಾಧ್ಯ. ರೈತರು ಬೆಳೆ ಬೆಳೆದರೆ ಮಾತ್ರ ಎಲ್ಲರ ಮನೆಗೂ ಅನ್ನ ಬರುತ್ತದೆ. ರೈತರು ಕೃಷಿ ಮಾಡುವುದನ್ನೇ ನಿಲ್ಲಿಸಿದರೆ ಯಾರ ಹೊಟ್ಟೆಯೂ ತುಂಬುವುದಿಲ್ಲ. ಅನ್ನದಾತನ ಬದುಕು ಹಸನಾಗಿದ್ದರೆ ಮಾತ್ರ ನಾವು ನೆಮ್ಮದಿಯಿಂದ ಇರಲು ಸಾಧ್ಯ ಎಂಬ ರೈತಪರ ಕಾಳಜಿಯ ಮಾತುಗಳನ್ನು ಹೇಳಿದರು.

ರೈತರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಹೋರಾಟ ನಡೆಸುತ್ತಿಲ್ಲ. ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು, ಕುಟುಂಬಗಳ ಬದುಕನ್ನು ಭದ್ರಪಡಿಸಿಕೊಳ್ಳಲು ಹಾಗೂ ಕೃಷಿ ಚಟುವಟಿಕೆಗಳನ್ನು ಮುಂದುವರಿಸಲು ನೀರು ಕೇಳುತ್ತಿದ್ದಾರೆ. ರೈತರ ಈ ನ್ಯಾಯಯುತ ಬೇಡಿಕೆಗೆ ಸ್ಪಂದಿಸುವುದು ಆಡಳಿತ ವ್ಯವಸ್ಥೆಯ ಜವಾಬ್ದಾರಿಯಾಗಿದೆ. ರೈತರನ್ನು ಪ್ರತಿಭಟನೆ ನಡೆಸುವಂತೆ ಒತ್ತಾಯಿಸುವ ಪರಿಸ್ಥಿತಿಯನ್ನು ತಪ್ಪಿಸಿ, ಅವರ ಸಮಸ್ಯೆಗಳಿಗೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು.

-

29ವೈಡಿಆರ್‌6 :

ನ.30 ರವರೆಗೆ ಕಾಲುವೆಗಳಿಗೆ ನೀರು ಹರಿಸಬೇಕೆಂದು ನಾರಾಯಣಪುರದ ಕೃಷ್ಣಾ ಭಾಗ್ಯ ಜಲ ನಿಗಮದ (ಕೆಬಿಜೆಎನ್‌ಎಲ್) ಕಚೇರಿಯ ಮುಂದೆ ಕಳೆದ 5 ದಿನಗಳಿಂದ ಜರುಗುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ಸ್ಥಳಕ್ಕೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವರಾದ ನರಸಿಂಹನಾಯಕ (ರಾಜೂಗೌಡ) ಭೇಟಿ ನೀಡಿ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೇಪ್‌ ಮಾಡಿದ್ದಕ್ಕಾಗಿ ಅಪಹರಣ ಮೂಲಕ ಪ್ರತೀಕಾರ
ಉತ್ತರ ಪಾಲಿಕೆಯಲ್ಲಿ 18 ಜಂಕ್ಷನ್‌ ಗುರುತು