ಯಾದಗಿರಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯದ ಅಧಿಕಾರಿಗಳು ಅ. 28 ರಂದು ಶಹಾಪುರ ಪಟ್ಟಣದ ಪ್ರಿಯದರ್ಶಿನಿ ಕ್ಯಾಂಟೀನ್, ಮಂದಿ ಹೌಸ್, ಫಿರೋಜ್ ಹೋಟೆಲ್ ಮತ್ತು ಪಲ್ಲವಿ ಹೋಟೆಲ್, ಅಮನ್ ಫ್ಯಾಮಿಲಿ ರೆಸ್ಟೋರೆಂಟ್, ಭುವನ ಟಿಫನ್ ಸೆಂಟರ್, ಅಭಿರುಚಿ ಫ್ಯಾಮಿಲಿ ರೆಸ್ಟೊರೆಂಟ್, ಶ್ರೀ ಗಜಾನನ ಹೋಟೆಲ್ ಹಾಗೂ ವಿವಿಧ ರೆಸ್ಟೋರೆಂಟ್, ಖಾನಾವಳಿ, ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಬಳಕೆ ಮಾಡುತ್ತಿರುವ 26 ಗೃಹ ಬಳಕೆಯ ಸಿಲಿಂಡರ್‌ಗಳನ್ನು ಜಪ್ತಿ ಮಾಡಿದ್ದಾರೆ. ಸದರಿ ಅಂಗಡಿ ಮಾಲೀಕರ ವಿರುದ್ಧ ಮುಂದಿನ ಕಾನೂನು ಕ್ರಮವಹಿಸಲಾಗವುದೆಂದು ಯಾದಗಿರಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-
29ವೈಡಿಆರ್3 :
ಅಧಿಕಾರಿಗಳು ಶಹಾಪುರದ ವಿವಿಧೆಡೆ ದಾಳಿ ನಡೆಸಿ, ವಶಪಡಿಸಿಕೊಂಡಿರುವ ಅಕ್ರಮ ಗೃಹ ಬಳಕೆ ಸಿಲಿಂಡರ್‌ಗಳು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.