ವಿಶ್ವಾಸಕ್ಕೆ ಧಕ್ಕೆ ಬರದಂತೆ ಕೆಲಸ ಮಾಡುವೆ

KannadaprabhaNewsNetwork |  
Published : Jun 05, 2025, 12:56 AM ISTUpdated : Jun 05, 2025, 12:57 AM IST
ತಾಳಿಕೋಟೆ 1 | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ ಕ್ಷೇತ್ರದ ಜನರು ನನ್ನ ಮೇಲೆ ವಿಸ್ವಾಸವಿಟ್ಟು ಶಾಸಕನನ್ನಾಗಿ ಆಯ್ಕೆ ಮಾಡಿಕಳುಹಿಸಿದ್ದಾರೆ. ಅವರ ವಿಶ್ವಾಸಕ್ಕೆ ಧಕ್ಕೆ ಬರದ ರೀತಿಯಲ್ಲಿ ಕೆಲಸ ಮಾಡುವೆ. ಯಾವ ಊರಿಗೆ ಏನು ಅವಶ್ಯವಾಗಿದೆಯೋ ಅದನ್ನು ಇಡೇರಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ(ಕುದರಿಸಾಲವಾಡಗಿ) ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಕ್ಷೇತ್ರದ ಜನರು ನನ್ನ ಮೇಲೆ ವಿಸ್ವಾಸವಿಟ್ಟು ಶಾಸಕನನ್ನಾಗಿ ಆಯ್ಕೆ ಮಾಡಿಕಳುಹಿಸಿದ್ದಾರೆ. ಅವರ ವಿಶ್ವಾಸಕ್ಕೆ ಧಕ್ಕೆ ಬರದ ರೀತಿಯಲ್ಲಿ ಕೆಲಸ ಮಾಡುವೆ. ಯಾವ ಊರಿಗೆ ಏನು ಅವಶ್ಯವಾಗಿದೆಯೋ ಅದನ್ನು ಇಡೇರಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ(ಕುದರಿಸಾಲವಾಡಗಿ) ಭರವಸೆ ನೀಡಿದರು.

ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಹಾಗೂ ಬೋಳವಾಡ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ವಿಜಯಪುರ, ಪಂಚಾಯತ್ ರಾಜ್ಯ ಇಂಜನಿಯರಿಂಗ್ ವಿಭಾಗ ನೆರೇಗಾ ಕನ್ವರ್ಜನ್ಸ್ ಎಸ್.ಡಿ.ಪಿ.ಯೋಜನೆಯಡಿ ನಿರ್ಮಿಸಲಾದ ೩ ಅಂಗನವಾಡಿ ಕೇಂದ್ರಗಳನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣವೆಂಬುದು ಅತ್ಯಮೂಲ್ಯವಾದದ್ದು. ಸರ್ಕಾರಿ ಶಾಲೆಗಳನ್ನು ಅಭಿವೃದ್ದಿ ಪಡಿಸಬೇಕೆಂಬ ನನ್ನ ಬಹಳ ದಿನದ ಆಸೆಯಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪನವರನ್ನು ಭೇಟಿ ಅನುದಾನ ತರುವುದರೊಂದಿಗೆ ಹೊಸ ಕೋಣೆಗಳ ಜೊತೆಗೆ ಶಾಲಾ ಅಭಿವೃದ್ದಿ ಕಾರ್ಯಗಳಿಗೆ ಅನುದಾನ ನೀಡಿದ್ದೇನೆ. ಶಿಕ್ಷಣ ಇಲಾಖೆಯಿಂದಲೂ ಕೋಣೆಗಳ ದುರಸ್ಥಿ ಇರಬಹುದು, ಹೊಸ ಕಟ್ಟಡ ಇರಬಹುದು ಅವುಗಳನ್ನು ಪಟ್ಟಿ ಮಾಡಿ ಡಿಡಿಪಿಐ ಅವರ ಮುಖಾಂತರ ಸರ್ಕಾರಕ್ಕೆ ಕಳುಹಿಸಿ ಅದರ ಪತ್ರ ನೀಡಬೇಕೆಂದು ಕ್ಷೆತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಅವರಿಗೆ ಸೂಚಿಸಿದರು. ನಾನು ವಿರೋಧ ಪಕ್ಷದಲ್ಲಿರುವುದರಿಂದ ಸರ್ಕಾರದಿಂದ ಅನುದಾನ ನೀಡುವಲ್ಲಿ ತಾರತಮ್ಯವಾಗುತ್ತಿದೆ. ಆದರೂ ಎಲ್ಲ ಇಲಾಖೆಗಳ ಸಚಿವರನ್ನು ಭೇಟಿ ಮಾಡಿ ಅನುದಾನ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಹಂತ ಹಂತವಾಗಿ ನನ್ನ ಕೈಲಾದಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡುತ್ತಿದ್ದು, ಬೊಮ್ಮನಹಳ್ಳಿ ಗ್ರಾಮಸ್ಥರ ಬೇಡಿಕೆಯಂತೆ ನೂತನ ಶಾಲಾ ಕಟ್ಟಡಕ್ಕೆ ಅನುದಾನ ನೀಡುವ ಜೊತೆಗೆ ಶಾಲೆಯ ಮುಖ್ಯ ಗೇಟ್ ದುರಸ್ಥಿಗೆ ಕ್ರಮ ವಹಿಸುವದಾಗಿ ತಿಳಿಸಿದರು.ಜೆಡಿಎಸ್ ತಾಲೂಕಾಧ್ಯಕ್ಷ ಮಡುಸಾಹುಕಾರ ಬಿರಾದಾರ ಮಾತನಾಡಿ, ಶಾಸಕ ರಾಜುಗೌಡ ಪಾಟೀಲ ಅಧಿಕಾರಕ್ಕಾಗಿ ರಾಜಕಾರಣ ಮಾಡಿದವರಲ್ಲಾ ಜನ ಸೇವೆಗಾಗಿ ರಾಜಕಾರಣ ಮಾಡುತ್ತಾ ಬಂದಿದ್ದಾರೆ. ಶಾಸಕರಾಗುವ ಮುಂಚೆ ಹೇಗೆ ಇದ್ದರೋ ಹಾಗೆ ಇನ್ನೂ ಜನರೊಂದಿಗೆ ಸಂಪರ್ಕದಲ್ಲಿದ್ದಾರೆ. ಕಾಂಗ್ರೆಸ್‌ ಶಾಸಕರುಗಳೇ ಅನುದಾನಕ್ಕಾಗಿ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದು, ಶಾಸಕ ರಾಜುಗೌಡರು ವಿರೋಧ ಪಕ್ಷದಲ್ಲಿದ್ದರೂ ಅನುದಾನ ತರುವಲ್ಲಿ ಶ್ರಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನರ ಆಸೆಗೆ ತಕ್ಕಂತೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದು ಭರವಸೆ ನೀಡಿದರು.ಇದೇ ಸಮಯದಲ್ಲಿ ಬೊಮ್ಮನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಪಠ್ಯಪುಸ್ತಕಗಳನ್ನು ಶಾಸಕ ರಾಜುಗೌಡ ಪಾಟೀಲ ವಿತರಿಸಿದರು. ಬೊಮ್ಮನಹಳ್ಳಿ ಹಾಗೂ ಬೋಳವಾಡ ಗ್ರಾಮಸ್ಥರ ವತಿಯಿಂದ ಶಾಸಕ ರಾಜುಗೌಡರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಧ್ಯಕ್ಷತೆಯನ್ನು ಬೊಮ್ಮನಹಳ್ಳಿ ಗ್ರಾಪಂ ಅಧ್ಯಕ್ಷೆ ಸರೋಜನಿ ಮಲಕಣ್ಣ ಮಸರಕಲ್ಲ ವಹಿಸಿದ್ದರು.ಈ ಸಮಯದಲ್ಲಿ ಎಸ್.ಎಸ್.ಎಲ್.ಸಿ. ಶೇ.೯೮ ರಷ್ಟು ಅಂಕ ಪಡೆದ ಗುಂಡುರಾಯ ಕಲ್ಬುರ್ಗಿ, ಪಿಯುಸಿಯಲ್ಲಿ ಶೇ.೯೮ ರಷ್ಟು ಅಂಕ ಪಡೆದ ಚನಬಸು ಕಲ್ಬುರ್ಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ಸಮಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ, ಎ.ಸಿ.ಡಿ.ಪಿ.ಓ ಲಕ್ಷ್ಮೀ ಬಡಿಗೇರ, ಎಸ್.ಜಿ.ದೇಸಾಯಿ, ಪಂಚಾಯತ್ ರಾಜ್ಯ ಇಂಜನಿಯರಿಂಗ್ ಇಲಾಖೆಯ ಅಧಿಕಾರಿ ಶಿವರಾಜ ನಾಯಕ, ಪ್ರವೀಣ ಬಿರಾದಾರ, ಪಿಡಿಒ ಪ್ರಭು ಚನ್ನೂರ, ಮುಖ್ಯೋಪಾಧ್ಯಾಯ ಎ.ಡಿ.ಗೋನಾಳ, ಶಿವಶಂಕರ ಕಟ್ಟಿಮನಿ, ಶಿವು ಕಲ್ಬುರ್ಗಿ, ನಿಂಗು ಕಲ್ಬುರ್ಗಿ, ಸಾಹೇಬಗೌಡ ಪಾಟೀಲ, ಮಲ್ಲನಗೌಡ ಪಾಟೀಲ, ಯಮನಪ್ಪಸಾಹುಕಾರ ಮಸರಕಲ್ಲ, ಜಗನ್ನಾಥ ಮಸರಕಲ್ಲ, ಸಿದ್ದಣ್ಣ ಕಟ್ಟಿಮನಿ, ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌