ಬ್ಲ್ಯಾಕ್‌ಮೇಲ್ ಮಾಡಿದ್ದರೇ ಸಚಿವನಾಗಿರುತ್ತಿದ್ದೆ

KannadaprabhaNewsNetwork |  
Published : May 18, 2026, 04:00 AM IST
ಎಲ್ಲ ಪಕ್ಷಗಳಲ್ಲಿನ ಹಿಂದೂಗಳು ಒಂದಾಗಿ: ಶಾಸಕ ಯತ್ನಾಳ ಕರೆ | Kannada Prabha

ಸಾರಾಂಶ

ಬ್ಲ್ಯಾಕ್‌ಮೇಲ್ ಮಾಡುವ ಸಂಸ್ಕೃತಿ ನನ್ನದಲ್ಲ, ಬ್ಲ್ಯಾಕ್‌ಮೇಲ್ ಮಾಡಿದ್ದರೇ ಸಚಿವನಾಗಿರುತ್ತಿದ್ದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಬ್ಲ್ಯಾಕ್‌ಮೇಲ್ ಮಾಡುವ ಸಂಸ್ಕೃತಿ ನನ್ನದಲ್ಲ, ಬ್ಲ್ಯಾಕ್‌ಮೇಲ್ ಮಾಡಿದ್ದರೇ ಸಚಿವನಾಗಿರುತ್ತಿದ್ದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಯತ್ನಾಳ ಬ್ಲ್ಯಾಕ್‌ಮೇಲ್ ಮಾಡಿ ಬಿಜೆಪಿಗೆ ಹೋಗಲು ಯತ್ನಿಸುತ್ತಿದ್ದಾರೆಂದ ಸಚಿವ ಎಂ.ಬಿ.ಪಾಟೀಲ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನನ್ನ ಉದ್ದೇಶ ಇಡಿ ಕರ್ನಾಟಕದ ಹಿಂದೂಗಳು ಒಂದೆಡೆ ಆಗಬೇಕು. ತಮಿಳುನಾಡಿನ ವಿಜಯನ ಟಿವಿಕೆಯಂತೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನಲ್ಲಿರುವ ಎಲ್ಲ ಹಿಂದೂಗಳು ಒಂದಾಗಬೇಕು. ಆಗ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವುದೂ ಬರುವುದಿಲ್ಲ, 130 ಸೀಟು ಬಂದು ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ. ಎಲ್ಲ ಹಿಂದೂಗಳನ್ನು ತೆಗೆದುಕೊಂಡು ರಾಜ್ಯದಲ್ಲಿ ಪರ್ಯಾಯ ಮಾಡುತ್ತವೆ. ಎಂ.ಬಿ.ಪಾಟೀಲರ ಆಶಯದಂತೆ 2028ಕ್ಕೆ ನಾನು ಸಿಎಂ ಆಗುತ್ತೇನೆ. ವಿರೋಧ ಪಕ್ಷದ ನಾಯಕರಾಗಿ ಎಂ.ಬಿ.ಪಾಟೀಲ ಇರುತ್ತಾರೆ ಎಂದು ಭವಿಷ್ಯ ನುಡಿದರು.

ನಾನು ಹೊಸ ಪಕ್ಷ ಕಟ್ಟಿದರೇ ಹಿಂದೂಗಳ ವೋಟು ವಿಭಜನೆಯಾಗುತ್ತವೆ ಎಂಬುವುದು ಎಂ.ಬಿ.ಪಾಟೀಲ ಹಾಗೂ ಕಾಂಗ್ರೆಸ್‌ನವರ ಲೆಕ್ಕಾಚಾರವಿದೆ. ಹಿಂದೂಗಳ ವೋಟು ಒಡೆದರೇ ಮತ್ತೆ ಮುಸ್ಲಿಂ ಮತಗಳ ಮೇಲೆ ಸರ್ಕಾರ ಮಾಡುವ ಉದ್ದೇಶ ಕಾಂಗ್ರೆಸ್‌ನವರಿಗಿದೆ. ಸಾಬರ್‌ ಉದ್ದಾರವೇ ಎಂ.ಬಿ.ಪಾಟೀಲರ ಸರ್ಕಾರದ ಉದ್ದೇಶವಾಗಿದೆ ಎಂದು ಲೇವಡಿ ಮಾಡಿದರು.ಸಾಬರೆಲ್ಲ ಸೇರಿ ವಾರ್ಷಿಕ ₹10 ಸಾವಿರ ಕೋಟಿ ನೀಡಬೇಕು. ಮತಾಂತರ ಕಾಯ್ದೆ ವಾಪಸ್‌ ತೆಗೆದುಕೊಳ್ಳಬೇಕೆಂದು ಮೀಸಲಾತಿಗೆ ಮುಸ್ಲಿಂಮರು ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ನಾನು ಪಕ್ಷ ಮಾಡಿದರೇ ಕಾಂಗ್ರೆಸ್‌ನವರಿಗೆ ಅನುಕೂಲವಾಗಲಿದೆ. ಅದಕ್ಕೆ ಕೆಲವು ಚೇಲಾಗಳು ಯತ್ನಾಳ ಕಾಂಗ್ರೆಸ್ ಎಜೆಂಟ್ ಎಂದು ಬೊಬ್ಬೆ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.ಹಿಂದೂಗಳನ್ನು ಒಂದು ಮಾಡುವ ಸಲುವಾಗಿ ರಾಜ್ಯದ ಎಲ್ಲ ಜಿಲ್ಲೆಗಯೊಳಗೆ ಪ್ರವಾಸ ಮಾಡುತ್ತಿದ್ದೇನೆ. ಅದ್ಕಕಾಗಿ ಒಂದು ಬಸ್‌ ತೆಗೆದುಕೊಂಡಿದ್ದೇನೆ. ಕೊಲ್ಹಾರ ಜಿಲ್ಲೆಯ ಕುರುಡುಮಲೆ ಗಣೇಶನ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಅಭಿಷೇಕ ಮಾಡಿಸಿದ್ದೇನೆ. ಗಣಪತಿಯ ಬಲಗೈನಿಂದ ಕರಿಕೆ (ಗರಿಕೆ) ಬಿದ್ದಿದೆ. ನೀನು ಮಾಡು, ನಾನು ಆಶೀರ್ವದಿಸುತ್ತೇನೆಂದು ಗಣೇಶನ ಆಶೀರ್ವಾದವಾಗಿದೆ. ಕುರುಡುಮಲೆ ಗಣೇಶ, ಆಂಜನೇಯ, ವೆಂಕಟೇಶ್ವರ ದೇವರುಗಳು ಆಶೀರ್ವಾದ ಪಡೆದಿದ್ದೇನೆ. ಎಲ್ಲವೂ ಫಲಪ್ರದವಾಗಿದೆ. ಹಾಗಾಗಿ ರಾಜ್ಯದ ಹಿಂದೂಗಳ ಅಭಿಪ್ರಾಯ ತೆಗೆದುಕೊಳ್ಳುತ್ತೇನೆ. ಬಿಜೆಪಿ, ಕಾಂಗ್ರೆಸ್‌ನಲ್ಲಿರುವವರು ಹೊಂದಾಣಿಕೆ ಇದ್ದಾರೆ ಎಂದು ದೂರಿದರು.ಕಾಲೇಜುಗಳಲ್ಲಿ ಯುನಿಫಾರ್ಮ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಿಜಾಬ್‌ಗೆ ಅವಕಾಶ ನೀಡಿದರೇ ನಾವು ಕೇಸರಿ ಶಾಲು ಹಾಕಿಸುತ್ತೇವೆ. ಜೂನ್ 1ರಿಂದ ಶಾಲೆಗಳು ಆರಂಭವಾಗಲಿದ್ದು, ಎಲ್ಲ ಮಕ್ಕಳಿಗೆ ಕೇಸರಿ ತಿಲಕ ಹಾಕಿ, ಕೇಸರಿ ಶಾಲು ಹಾಕಿ ಕಳುಹಿಸಿ ಎಂದು ಕರ್ನಾಟಕದ ಜನತೆಗೆ ಮನವಿ ಮಾಡುವೆ. ಶಾಲಾ, ಕಾಲೇಜು ಹಾಜರಾತಿ ವೇಳೆಯೂ ಸಹ ಯಸ್ ಸರ್‌ ಬದಲಿಗೆ ಜೈಶ್ರೀರಾಮ್ ಎನ್ನಬೇಕೆಂದು ಕರೆ ನೀಡಿದರು.ತೈಲ ಬೆಲೆ ಏರಿಕೆ ಕೇಂದ್ರದ ವಿರುದ್ಧ ವಿರೋಧ ಪಕ್ಷಗಳ ವಿರೋಧ ವಿಚಾರವಾಗಿ ಮಾತನಾಡಿ, ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಎಲ್ಲ ಬೆಲೆಗಳ ಏರಿಕೆ ಮಾಡಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾನು ಸಿಎಂ ಇದ್ದರೇ ಬೆಲೆ ಕಡಿಮೆ ಮಾಡುತ್ತಿದ್ದೆ ಎಂದು ಸಿದ್ದರಾಮಯ್ಯ ಟ್ವಿಟ್ ಮಾಡಿದ್ದರು. ಈಗ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಬೆಲೆ ಕಡಿಮೆ ಮಾಡಲಿ ಎಂದು ಸವಾಲು ಹಾಕಿದರು. ಯುದ್ಧದ ಕಾರಣ ಜಾಗತೀಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ ಮಾಡಲಾಗಿದೆ. ಆದ್ದರಿಂದ ಬೆಲೆ ಏರಿಕೆಯಾಗಿದ್ದನ್ನು ನಾನು ಸ್ವಾಗತಿಸುವೆ. ತೈಲ ಬಳಕೆ ನಾವು ಕಡಿಮೆ ಮಾಡುತ್ತೇವೆ. ನಾನೂ ವಾಹನ ಬಳಕೆ ಕಡಿಮೆ ಮಾಡುವೆ. ಪ್ರಧಾನಿ ಚಿನ್ನ ಖರೀದಿ ಬೇಡ ಎಂದಿದ್ದಾರೆ. ಪ್ರಧಾನಿ ಹೇಳಿದಂತೆ ಚಿನ್ನ ಖರೀದಿ ಮಾಡಲ್ಲ. ಸಿಎಂ ಸಿದ್ದರಾಮಯ್ಯ ತಾಕತ್ ಇದ್ದರೇ ಪೆಟ್ರೋಲ್, ಡಿಸೈಲ್ ದರ ಕಡಿಮೆ ಮಾಡಲಿ. ಸಿದ್ದರಾಮಯ್ಯ ವಿದ್ಯುತ್‌ ದರ ಏರಿಕೆ ಮಾಡಿದ್ದಾರೆ. ತೈಲ ಬೆಲೆ ಏರಿಕೆ ಪ್ರಶ್ನೆಯ ನೈತಿಕತೆ ಇಲ್ಲ. ದೇಶದ ಹಿತಾಸಕ್ತಿಗಾಗಿ ತೈಲ ಬೆಲೆ ಪಿಎಂ ಏರಿಕೆ ಮಾಡಿದ್ದಾರೆ. ಅದನ್ನು ಸಮರ್ಥಿಸುವೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಹುಕೋಟಿ ವಂಚನೆ ಪ್ರಕರಣ: ಕಡತ ವಶಕ್ಕೆ ಪಡೆದ ಸಿಐಡಿ
ಕಾರ್ಯಕರ್ತರ ವ್ಯಕ್ತಿತ್ವ ರೂಪಿಸಲು ಪ್ರಶಿಕ್ಷಣ ವರ್ಗ